ಇತ್ತೀಚೆಗಷ್ಟೆ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾದ ಮುಂಬರುವ ಟ್ರೈಲರ್ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಶ್ರೀಮನ್ನಾರಾಯಣನಾಗಿ ತೆರೆಮೇಲೆ ಯಾವಾಗ ಬರುತ್ತಾರೆ ಎಂಬ ಕಾತುರದಲ್ಲಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ರು.
ಇದೇ ವೇಳೆ ಬಿಡುವಿಲ್ಲದೆ ಚಿತ್ರದ ಪ್ರಚಾರದಲ್ಲಿ ತೊಡಗಿದ್ದರೂ ತಮ್ಮ ಸಮಯವನ್ನು ಹೊಸ ಚಿತ್ರವೊಂದರ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದಾರೆ. ಈ ಮೂಲಕ ಸಿಂಪಲ್ ಸ್ಟಾರ್ ಎಲ್ಲರಲ್ಲೂ ಆಚ್ಚರಿ ಮೂಡಿಸಿದ್ದಾರೆ.
ಈ ಮುನ್ನ ರಕ್ಷಿತ್ ಶ್ರೀಮನ್ನಾರಾಯಣ ಚಿತ್ರವು ಡಬ್ಬಿಂಗ್ ಕಾರ್ಯ ಮುಗಿಸಿ ಚಿತ್ರದ ಟ್ರೈಲರ್ ಶೀಘ್ರವೇ ಹೊರ ಬರಲಿದೆ ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದರು. ಈಗ ‘ಅಳಿದು ಉಳಿದವರು’ ಚಿತ್ರ ತಂಡದ ಫಸ್ಟ್ ಲುಕ್ ಬಿಡುಗಡೆಗೊಳಿಸಿ ಹೊಸಬರಿಗೆ ಪ್ರೋತ್ಸಾಹ ನೀಡಲು ಮುಂದೆ ಬಂದಿದ್ದಾರೆ.
ಅಳಿದು ಉಳಿದವರು ಚಿತ್ರದ ಸಾರಥ್ಯವನ್ನು ಈ ಹಿಂದೆ ‘ಕಹಿ’ ಸನಿಮಾ ನಿರ್ದೇಶಿಸಿದ ಅರವಿಂದ ಶಾಸ್ತ್ರಿ ವಹಿಸಿಕೊಂಡಿದ್ದಾರೆ. ನಿರ್ಮಾಣದ ಹೊಣೆ ಹೊತ್ತಿರುವ ಅಶು ಬೆದ್ರ ಮೊದಲ ಬಾರಿಗೆ ನಾಯಕ ನಟನಾಗಿ ಮಿಂಚಲಿದ್ದಾರೆ.ಸಂಗೀತ ಭಟ್ ಚಿತ್ರದ ನಾಯಕಿಯಾಗಿ ಗಮನಸೆಳೆಯಲ್ಲಿದ್ದಾರೆ
ಬೆದ್ರ ಅವರು ‘ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ’ ನಿರ್ನಿಸಿದ್ದು ನಮ್ಮೆಲ್ಲರಿಗು ತಿಳಿದೇ ಇದೆ. ಆದರೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಆಸೆ ಹಾಗು ಪ್ರಮುಖ ಪಾತ್ರದಲ್ಲಿ ತರೆಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲ ಅವರನ್ನು ಇಲ್ಲಿಯವರೆಗು ಹೊತ್ತು ತಂದಿದೆ.
ಉಳಿದಂತೆ ಹಿರಿಯ ನಟ ಅತುಲ್ ಕುಲ್ಕರ್ಣಿ, ಲೂಸಿಯಾ ಪವನ್ ಕುಮಾರ್, ಬಿ ಸುರೇಶ್ ತಾರಾಗಣದಲ್ಲಿದ್ದು ಚಿತ್ರದ ಅಂದವನ್ನು ಹೆಚ್ಚಿಸಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದ್ ಸಂಗೀತವಿದೆ.
ಒಟ್ಟಿನಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಕ್ಕಳ ದಿನಾಚರಣೆಯಂದು ಒಂದು ವಿಭಿನ್ನ ಶೀರ್ಷಿಕೆಯುಳ್ಳ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಹೊಸ ಪ್ರತಿಭೆಗಳಿಗೆ ಖುಷಿ ಕೊಟ್ಟಿದೆ.
ಗುರುವಾರ ಸಂಜೆ 5.55ಕ್ಕೆ ಚಿತ್ರದ ಮೊದಲ ನೋಟವನ್ನು ತಂಡ ಬಿಡುಗಡೆ ಮಾಡಲಿದೆ.
ಅದೇನೆ ಇರಲಿ ಪ್ರಯೋಗಾತ್ಮಕ ನಿರ್ದೇಶಕನಾಗಿ ರಕ್ಷಿತ್ ಶೆಟ್ಟಿ ಮತ್ತೊಂದು ಪ್ರಯೋಗಾತ್ಮಕ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡುತ್ತರುವುದು ನಿಜಕ್ಕೂ ಶ್ಲಾಘನೀಯ.
Discussion about this post