ರಾಜೇಶ್ವರಿಯವರು ‘ನನ್ನ ತೇಜಸ್ವಿ ಮತ್ತು ನಮ್ಮ ಮನೆಗೂ ಬಂದರು ಗಾಂಧೀಜಿ ಅನ್ನುವ ಪುಸ್ತಕ ಬರೆದಿದ್ದು, ಆ ಪೈಕಿ ನನ್ನ ತೇಜಸ್ವಿ ಐದು ಮುದ್ರಣ ಕಂಡಿದೆ.
ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರ ಸೊಸೆ , ಅಗ್ರಮಾನ್ಯ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಿಧನದ ಬಳಿಕ ತೋಟದಲ್ಲಿ ( ಮೂಡಿಗೆರೆಯ ಹ್ಯಾಂಡ್ ಪೋಸ್ಟ್) ಒಬ್ಬರೇ ಇದ್ದ ರಾಜೇಶ್ವರಿ ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ HSR layoutನಲ್ಲಿರುವ ಮಗಳ ಮನೆಗೆ ಬಂದಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಹೀಗಾಗಿ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರಿಗೆ ವೈದ್ಯರು ಎಲ್ಲಾ ಚಿಕಿತ್ಸೆಗಳನ್ನು ನೀಡಿದ್ದರು.
ಇನ್ನು ಬೆಂಗಳೂರಿನ ಪುತ್ರಿಯ ನಿವಾಸದಲ್ಲೇ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಮೃತದೇಹವನ್ನು ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಅಂತ್ಯ ಸಂಸ್ಕಾರದ ಯಾವುದೇ ವಿಧಿವಿಧಾನಗಳು ಇರೋದಿಲ್ಲ.
1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ ರಾಜೇಶ್ವರಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಪದವಿ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದಿದ್ದರು. ಆಗ ಕೆಪಿ ಪೂರ್ಣಚಂದ್ರ ತೇಜಸ್ವಿ ಪರಿಚಯವಾಗಿ ಪರಸ್ಪರ ಪ್ರೀತಿಸಿ. 1966ರಲ್ಲಿ ಮಂತ್ರ ಮಾಂಗಲ್ಯ ಕಲ್ಪನೆಯಂತೆ ಮದುವೆಯಾಗಿದ್ದರು.
ರಾಜೇಶ್ವರಿಯವರು ‘ನನ್ನ ತೇಜಸ್ವಿ ಮತ್ತು ನಮ್ಮ ಮನೆಗೂ ಬಂದರು ಗಾಂಧೀಜಿ ಅನ್ನುವ ಪುಸ್ತಕ ಬರೆದಿದ್ದು, ಆ ಪೈಕಿ ನನ್ನ ತೇಜಸ್ವಿ ಐದು ಮುದ್ರಣ ಕಂಡಿದೆ.
ರಾಜೇಶ್ವರಿ ತೇಜಸ್ವಿಯವರು ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಆಗಲಿದ್ದು ಮಕ್ಕಳು ಸಾಫ್ಟ್ವೇರ್ ಇಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲಸಿಕಾ ಪ್ರಮಾಣಪತ್ರದ ಮೇಲೆ ಪ್ರಧಾನಿ ಫೋಟೋ ಇದ್ರೆ ತಪ್ಪೇನು…?
ಕೇರಳ : ಕೊರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪೋಟೋ ಇದ್ರೆ ತಪ್ಪೇನು ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ. ಕೊಟ್ಟಾಯಂ ನಿವಾಸಿ ಪೀಟರ್ ಮಾಯಲಿ ಪರಂಪಿಲ್ ಅನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿವಿ ಉಣ್ಣಿಕೃಷ್ಣನ್ ಅವರ ಪೀಠ Why are you ashamed of your PM… Everyone has different political opinions, but Modi is still our prime minister ಅಂದಿದೆ.
ಸರ್ಕಾರಿ ನಿಧಿಯಿಂದ ನಡೆಸಿರುವ ಲಸಿಕಾ ಅಭಿಯಾನದಲ್ಲಿ ಮೋದಿ ಚಿತ್ರ ಬಳಸುವುದರಿಂದ ಪಕ್ಷದ ಪ್ರಚಾರ ಮಾಡಿದಂತಾಗುತ್ತದೆ. ಬೇರೆ ದೇಶಗಳ ಪ್ರಮಾಣ ಪತ್ರದಲ್ಲಿ ರಾಜಕೀಯ ನಾಯಕರ ಚಿತ್ರ ಇಲ್ಲ ಎಂದು ವಾದಿಸಿದ್ದರು. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶಕರು ನೀವು ಕೂಡಾ ಮಾಜಿ ಪ್ರಧಾನಿ ನೆಹರೂ ಹೆಸರಿನ ಸಂಸ್ಥೆಯಲ್ಲಿದ್ದೀರಿ, ಅಲ್ಲಿ ನೆಹರೂ ಹೆಸರು ತೆಗೆಯುವಂತೆ ಯಾಕೆ ಕೇಳಿಲ್ಲ, ಸರ್ಟಿಫೀಕೆಟ್ ನಲ್ಲಿ ಪ್ರಧಾನಿ ಚಿತ್ರ ಇದ್ರೆ ತಪ್ಪೇನು ಎಂದು ಅರ್ಜಿಯನ್ನು ವಜಾ ಮಾಡಿತು.
Discussion about this post