ಬೆಂಗಳೂರು : ಶಿಕ್ಷಣ ಸಚಿವ ಬಿಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರು ಸಚಿವರ ಮನೆಗೆ ಬೆಂಕಿ ಹಾಕಲು ಪ್ರಯತ್ನಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಇದೀಗ ಪಠ್ಯ ಪುಸ್ತಕ ವಿಚಾರದಲ್ಲಿ ಪ್ರತಿಭಟಿಸಲು ಹೋದ NSUI ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಬಿಜೆಪಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಾಗ್ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ರಾಜಕೀಯ ಪ್ರಚೋದಿತ ಕಿಡಿಗೇಡಿಗಳು ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದೊಂದು ತಾಲಿಬಾನ್ ಸಂಸ್ಕೃಯಾಗಿದೆ ಅಂದಿದ್ದಾರೆ.
ಇನ್ನು ಸಚಿವರ ಮನೆಗೆ ಬೆಂಕಿ ಹಾಕುವುದಕ್ಕೆ ಬಂದಿರೋವವರನ್ನ ಸಮರ್ಥನೆ ಮಾಡಿಕೊಳ್ಳುವವರು ದೇಶ ವಿರೋಧಿಗಳಾಗಿದ್ದು ಇವರೆಲ್ಲಾ ಪ್ರಜಾಪ್ರಭುತ್ವ ವಿರೋಧಿಗಳು ಅಂದಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕುವ ಪ್ರಯತ್ನ ಮಾಡಿದ ರೀತಿಯಲ್ಲೇ ಈಗ ಸಚಿವ ನಾಗೇಶ್ ಅವರ ಮನೆಗೆ ಬೆಂಕಿ ಹಾಕೋ ಪ್ರಯತ್ನ ಮಾಡಲಾಗಿದೆ ಎಂದು ಗಂಭೀರ ಆರೋಪವನ್ನು ಸಿಟಿ ರವಿ ಮಾಡಿದ್ದಾರೆ.
Discussion about this post