ಮುಂಬೈ: ಐಷಾರಾಮಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಹೆಸರಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ ಅಧಿಕಾರಿಗಳು ಬೇಧಿಸಿದ್ದಾರೆ. ಹಲವು ದಿನಗಳಿದ ಈ ಪಾರ್ಟಿಯ Bollywood Drug Case ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಗುಪ್ತಚರದಳದ ಅಧಿಕಾರಿಗಳೊಂದಿಗೆ ಸೇರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರವಾಸಿಗರ ವೇಷದಲ್ಲಿ ಹಡಗು ಹತ್ತಿದ NCB ಹಾಗೂ ಗುಪ್ತಚರದಳದ ಅಧಿಕಾರಿಗಳು ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವಾರು ಪ್ರಸಿದ್ಧರನ್ನು ಬಂಧಿಸಿದ್ದಾರೆ. ಇದೀಗ ಶಾರುಖ್ ಪುತ್ರನ ಮೇಲೆ FIR ಕೂಡಾ ದಾಖಲಾಗಿದ್ದು, ಬಾಲಿವುಡ್ ನ ಡ್ರಗ್ಸ್ ದಂಧೆಯ ಮೂಲಕ್ಕೆ ಅಧಿಕಾರಿಗಳು ಕೈ ಹಾಕಿದ್ದಾರೆ. ಈಗಿನ ಮಾಹಿತಿಗಳ ಪ್ರಕಾರ ಶಾರೂಖ್ ಪುತ್ರ ಆರ್ಯನ್ ಜೊತೆಗೆ ಇಬ್ಬರು ಯುವತಿಯರೂ ಇದ್ದರು ಅನ್ನುವುದು ಗೊತ್ತಾಗಿದೆ.
ಇನ್ನು ಮಗನ ಬಂಧನ ಸುದ್ದಿ ತಿಳಿದಿರುವ ಶಾರುಖ್ ಖಾನ್ ಸ್ಪೇನ್ನಲ್ಲಿ ಚಿತ್ರೀಕರಣ ಸ್ಥಗಿತಗೊಳಿಸಿ ನಿಲ್ಲಿಸಿ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಮತ್ತೊಂದು ಕಡೆ ಶಾರೂಖ್ ಖಾನ್ ಬೆಂಬಲಕ್ಕೆ ನಟ ಸುನಿಲ್ ಶೆಟ್ಟಿ ಆಗಮಿಸಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. NCB ಯಾವುದೇ ಸ್ಥಳದಲ್ಲಿ ದಾಳಿ ಮಾಡಿದಾಗ ಮೊದಲು ಕೂಲಂಕಷ ವಿಚಾರಣೆ ನಡೆಸುತ್ತದೆ. ಅದೇ ರೀತಿ ಆರ್ಯನ್ನ್ನು ವಿಚಾರಣೆ ಮಾಡುತ್ತಿದ್ದು, ಆರ್ಯನ್ ಇನ್ನು ಕೂಡ ಮಗು. ಅವನಿಗೆ ಉಸಿರಾಡಿಸಲು ಬಿಡಿ. ತನಿಖೆ ನಡೆದು ನಿಜವಾದ ವಿಚಾರ ಹೊರ ಬರಲಿ. ಅಲ್ಲಿವರೆಗೆ ಸಮಾಧಾನದಿಂದಿರಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ ಸಾಕ್ಷಿಗಳಿಲ್ಲದೆ ಹಲವು ಸೆಕ್ಷನ್ ಗಳ ಅಡಿಯಲ್ಲಿ FIR ದಾಖಲಿಸಲು NCB ಅಧಿಕಾರಿಗಳಿಗೆ ತಲೆ ಕೆಟ್ಟಿಲ್ಲ ಅನ್ನುವ ಕನಿಷ್ಠ ಜ್ಞಾನ ಸುನಿಲ್ ಶೆಟ್ಟಿಗೆ ಇಲ್ಲ ಅನ್ನುವುದು ಸ್ಪಷ್ಟ.
#WATCH | When a raid is conducted at a place, many people are taken into custody. We assume that a particular boy must have consumed it (drugs). The process is on. Let's give that child a breather. Let real reports come out: Actor Sunil Shetty on NCB raid at an alleged rave party pic.twitter.com/qYaYSsxkyi
— ANI (@ANI) October 3, 2021
Discussion about this post