ನವದೆಹಲಿ : ಆನ್ ಲೈನ್ ಸಂದರ್ಶನವೊಂದರಲ್ಲಿ ಇತಿಹಾಸ ತಜ್ಞ ರಾಜೀವ್ ಸೇಠಿ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಸೆಕ್ಸ್ ಕುರಿತ ಪ್ರಶ್ನೆ ಕೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.ಇತಿಹಾಸ ತಜ್ಞ ರಾಜೀವ್ ಸೇಠಿಯ ಅಧಿಕ ಪ್ರಸಂಗದ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.
2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆದು ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಜೈನ್ ಅವರು ಆನ್ ಲೈನ್ ಮೂಲಕ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಲೈಂಗಿಕತೆ ಮತ್ತು ಅಥ್ಲೆಟಿಕ್ ಅನ್ನು ಹೇಗೆ ನಿಭಾಯಿಸುತ್ತೀರಿ ಅನ್ನುವ ನಾನ್ ಸೆನ್ಸ್ ಪ್ರಶ್ನೆಯನ್ನು ಸೇಠಿ ಕೇಳಿದ್ದಾರೆ. ಇದರಿಂದ ಮುಜುಗರಕ್ಕೆ ಈಡಾದ ನೀರಜ್ ಕ್ಷಮಿಸಿ ಅಂದಿದ್ದಾರೆ. ಮತ್ತೆ ಅದೇ ಪ್ರಶ್ನೆಯನ್ನು ಸೇಠಿ ಕೇಳಿದ್ದಾರೆ. ಆಗ್ಲೂ ನೀರಜ್ ಉತ್ತರಿಸಲಿಲ್ಲ. ಕೊನೆಗೆ ರಾಜೀವ್ ಕ್ಷಮೆ ಕೇಳಿದ್ದಾರೆ.
ಹಾಗಂತ ಇಂತಹ ಯಡವಟ್ಟು ನೀರಜ್ ಗೆ ಹೊಸದೇನಲ್ಲ. ಈ ಹಿಂದೆ ನ್ಯೂಸ್ ಚಾನೆಲ್ ನ ಸುದ್ದಿ ವಾಚಕರೊಬ್ಬರು ಸಂದರ್ಶನದ ವೇಳೆ ತಮ್ಮ ಪ್ರೇಯಸಿ ಬಗ್ಗೆ ತಿಳಿಸಿ ಎಂದು ಕೇಳಿದ್ದರು.
Discussion about this post