ಅಚ್ಚ ಕನ್ನಡತಿ, ತಮಿಳಿನ ಸೂಪರ್ ಹಿಟ್ ನಟಿ ಅನುಷ್ಕಾ ಶೆಟ್ಟಿಯವರ ಹಳೆಯ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 2020ರ ಡಿಸೆಂಬರ್ ನಲ್ಲಿ ಹರಿದ್ವಾರಕ್ಕೆ ಹೋಗಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋ ಸಾವಿರ ಪ್ರಶ್ನೆಗಳಿಗೆ ಕಾರಣವಾಗಿದೆ.
ನಟಿ ಅನುಷ್ಕಾ ಶೆಟ್ಟಿ ಧಾರ್ಮಿಕ ಆಚರಣೆಗಳಲ್ಲಿ ಸಾಕಷ್ಟು ಒಲವು ಉಳ್ಳವರು. ದೇವರು ದಿಂಡಿರು ಅಂದ್ರೆ ಅವರಿಗೆ ಭಾರೀ ನಂಬಿಕೆ. ಇದು ಹತ್ತು ಹಲವು ಸಲ ಸಾಬೀತಾಗಿದೆ ಕೂಡಾ. ಬಹುತೇಕ ಸೆಲೆಬ್ರೆಟಿಗಳು ವಿದೇಶಿ ಪ್ರವಾಸ ಎಂದು ವಿಮಾನ ಹತ್ತಿದ್ರೆ ಅನುಷ್ಕಾ ಶೆಟ್ಟಿ ದೇವಸ್ಥಾನ, ಮಂದಿರಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಹೀಗೆ ಬಾಹುಬಲಿ ನಟಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ತಮ್ಮ ಗೆಳೆಯರೊಂದಿಗೆ ಹರಿದ್ವಾರ ಪ್ರವಾಸ ಕೈಗೊಂಡಿದ್ದರು. ಈ ವೇಳೆ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗುತ್ತಿದೆ.
ರುದ್ರಮ್ಮದೇವಿಯ ನಟಿ ಸಾಧು ಒಬ್ಬರೊಂದಿಗೆ ನಿಂತಿರುವ ಫೋಟೋ ಅಭಿಮಾನಿಗಳ ಸಾವಿರ ಪ್ರಶ್ನೆಗೆ ಕಾರಣವಾಗಿದೆ.
ಅಂದ ಹಾಗೇ ಕೊರೋನಾ ಸಂಕಷ್ಟ ಕಾಲದಲ್ಲಿ ಬೆಂಗಳೂರಿಗೆ ದೌಡಾಯಿಸಿರುವ ಅನುಷ್ಕಾ ಶೆಟ್ಟಿ ಸಹೋದರ ಹಾಗೂ ಪೋಷಕರೊಂದಿಗೆ ಲಾಕ್ ಡೌನ್ ಸಮಯವನ್ನು ಕಳೆಯುತ್ತಿದ್ದಾರೆ.
ಈ ನಡುವೆ ಎಂದಿನಂತೆ ಅನುಷ್ಕಾ ಶೆಟ್ಟಿಯ ಮದುವೆ ವಿಚಾರಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ, ಅವರ ಸಿನಿಮಾ ವಿಚಾರಕ್ಕಿಂತಲೂ ಅವರ ಮದುವೆ ವಿಚಾರವೇ ಸಾಕಷ್ಟು ಸುದ್ದಿಯಾಗುತ್ತಿರುತ್ತದೆ.
ಈಗಲೂ ಸಹ ಅನುಷ್ಕಾ ಮದುವೆ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಅನುಷ್ಕಾ ಶೆಟ್ಟಿ ಉದ್ಯಮಿಯೊಬ್ಬರ ಮಗನನ್ನು ವರಿಸಲಿದ್ದಾರೆ ಅನ್ನುವುದು ಈಗಿನ ಸುದ್ದಿ. ಹುಡುಗ ಅನುಷ್ಕಾ ಶೆಟ್ಟಿಗಿಂತ ಕಿರಿಯವನಂತೆ ಅನ್ನೋದು ಈ ಸುದ್ದಿಗೆ ಸೇರಿರುವ ಮಸಾಲೆ.
Discussion about this post