ಪಡುಮಲೆ ಬಳ್ಳಾಲರಿಗೆ ಜೀವದಾನ ಮಾಡಿದ ದೇಯಿಮಾತೆಯ ವೈದ್ಯವಿದ್ಯೆ ಕರಗತ ಮಾಡಿಕೊಂಡ ಕಾರಣಿಕದ ಪುಣ್ಯಭೂಮಿ ಗೆಜ್ಜೆಗಿರಿಯ ಮಣ್ಣಿನ ಕಣ ಕಣದಲ್ಲೂ ಧನ್ವಂತರಿಯ ಗುಣಗಳ ಸತ್ವಗಳಿಂದ ಕೂಡಿದ್ದು ಫೆಬ್ರುವರಿಯಲ್ಲಿ ಜರಗಿದ ಮಹಾ ಬ್ರಹ್ಮಕಲಶದಲ್ಲಿ ಭಾಗಿಯಾಗಿದ್ದ ಎಲ್ಲಾ ಭಕ್ತರಿಗೂ ಈ ಬಳ್ಳಿಯ ಪ್ರಸಾದ ನೀಡಲಾಗಿತ್ತು .
ಸುಮಾರು 75 ಕ್ಕೂ ಹೆಚ್ಚು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಇದರ ಎಲೆ, ಕಾಂಡ, ಬೇರುಗಳನ್ನು ಔಷಧಿಯಾಗಿ ಬಳಸುತ್ತಾರೆ.
ಶೀತ , ಜ್ವರ, ಕೆಮ್ಮು, ಉಸಿರಾಟದ ತೊಂದರೆಗೆ,ಬಾಯಾರಿಕೆ, ವಾಕರಿಕೆಗೆ,ಹೊಟ್ಟೆ ನೋವು, ಹೊಟ್ಟೆ ಉರಿಗೆ,ಜೀರ್ಣಕ್ರಿಯೆ ಮತ್ತು ಮೂಲ ವ್ಯಾಧಿಗೆ,ಮೂತ್ರನಾಳದ ಕಲ್ಲಿನ ಸಮಸ್ಯೆಗೆ,ಕಣ್ಣಿನ ದೋಷಕ್ಕೆ, ಕಿವಿ ನೋವಿಗೆ,ಮುಟ್ಟಿನ ದೋಷಕ್ಕೆ,ಸಂಧಿವಾತ, ಕೀಲು ನೋವಿನ ಸಮಸ್ಯೆಗೆ,ರೋಗನಿರೋಧಕ ಶಕ್ತಿ ಹೆಚ್ಚಿಸಲು,ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು,ಕಿಡ್ನಿ ಮತ್ತು ಲಿವರ್ ಸಮಸ್ಯೆಗೆ,ಮಧುಮೇಹಿಗಳಿಗೆ,ಅಧಿಕ ರಕ್ತದೊತ್ತಡ ಇರುವವರಿಗೆ,ಸೋರಿಯಾಸಿಸ್ ಮುಂತಾದ ಚರ್ಮದ ಸಮಸ್ಯೆಗೆ,ಖಿನ್ನತೆಗೆ,ಶರೀರ ಬಲ ಹೆಚ್ಚು ಮಾಡಲು,ಲೈಂಗಿಕ ಆರೋಗ್ಯಕ್ಕೆ,ಕೂದಲ ಸಮಸ್ಯೆಗೆ,ಉರಿ ಮೂತ್ರ ಸಮಸ್ಯೆಗೆ ಹೀಗೆ ಅನೇಕ ಸಮಸ್ಯೆಗಳನ್ನು ಪರಿಹರಿಸುವ ತಾಕತ್ತು ಇದಕ್ಕಿದೆ.
ಕಾಂಡವನ್ನು ಸಾಮಾನ್ಯ ಜ್ವರದಿಂದ ಹಿಡಿದು ಮಲೇರಿಯಾ, ವಿಷಮಶೀತ ಜ್ವರ, ಟೈಫೋಯಿಡ್, ಮೆದುಳುಜ್ಚರ ಮುಂತಾದ ಜ್ವರ ರೋಗಗಳ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಾರೆ.
ಹಾಗೇ ಕಾಮಾಲೆ, ಮೂತ್ರಕೋಶ ಸಂಬಂಧಿ ತೊಂದರೆಗಳು, ವಿವಿಧ ರೀತಿಯ ಉದರ ರೋಗಗಳ ಉಪಶಮನಕ್ಕಾಗಿ ಅಮೃತಬಳ್ಳಿಯ ಕಾಂಡದ ಕಷಾಯವನ್ನು ಹೆಸರಿಸಲಾಗಿದೆ.
ಅಮೃತಬಳ್ಳಿಯ ಕಾಂಡವನ್ನು ಹಾಲು ಅಥವಾ ನೀರಿನೊಂದಿಗೆ ನಿಯಮಿತವಾಗಿ ಸೇವಿಸಿದಲ್ಲಿ ಮೂಲವ್ಯಾಧಿ ರೋಗಿಗಳ ರಕ್ತಸ್ರಾವ ಕಡಿಮೆಯಾಗುವುದು ಹಾಗೂ ಮಲಬದ್ಧತೆ ಗುಣವಾಗುವುದು. ಬಳ್ಳಿಯ ಕಾಂಡದ ಕಷಾಯದ ನಿಯಮಿತ ಸೇವನೆಯಿಂದ ತಪ್ಪು ಜೀವನಶೈಲಿಯಿಂದ ಬರುವ ದೀರ್ಘಕಾಲೀನ ರೋಗಗಳಾದ ಮಧುಮೇಹ (ಡಯಾಬೇಟಿಸ್), ರಕ್ತದೊತ್ತಡ (ಬಿ.ಪಿ), ಬೊಜ್ಜು (ಒಬೇಸಿಟಿ), ಪಾರ್ಶ್ವವಾಯು (ಸ್ಟ್ರೋಕ್), ಮತ್ತು ಹೃದಯದ ತೊಂದರೆಗಳನ್ನು ನಿವಾರಿಸಬಹುದಾಗಿದೆ.
ಅಮೃತಬಳ್ಳಿಯಲ್ಲಿ ವಯಸ್ಸನ್ನು ಕಡಿಮೆ ಮಾಡುವ (ಆಂಟಿ-ಎಜಿಂಗ್), ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವ (ಆಂಟಿ ಮೈಕ್ರೋಬಿಯಲ್), ಆಂಟಿಆಕ್ಸಿಂಡೆಂಟ, ಕ್ಯಾನ್ಸರ್ನ್ನು ನಿರೋಧಿಸುವ (ಆಂಟಿ-ಕ್ಯಾನ್ಸರ್), ದೇಹದಲ್ಲಿನ ವಿಷಕಾರಕ ವಸ್ತುಗಳನ್ನು ತೆಗೆಯುವ (ಆಂಟಿ-ಟೊಕ್ಸಿಕ್), ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ (ಇಮ್ಯನೋ ಮೊಡ್ಯುಲೇಟರಿ) ಗುಣ ಹಾಗೂ ಇನ್ನಿತರ ರೋಗನಿವಾರಕ ಗುಣಗಳನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ.
ಈ ರೋಗನಿವಾರಕ ಗುಣಗಳು ಮೇಲಿನ ಮತ್ತು ಇತರ ಅನೇಕ ರಾಸಾಯನಿಕ ಅಂಶಗಳಿಂದಾಗಿಯೇ ಅಮೃತಬಳ್ಳಿಯಲ್ಲಿವೆ.
Discussion about this post