ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರು ಜೂನ್ 15ರಂದು ನಿಧನರಾಗಿದ್ದರು. ಚಂದನವನಕ್ಕೊಂದು ಗೌರವ ತಂದುಕೊಟ್ಟ ಕಲಾವಿದನಿಗೆ ಸರಿಯಾಗ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಾಧ್ಯವಾಗಿರಲಿಲ್ಲ. ಕೇವಲ ಅಗಲಿದ ನಿರ್ಮಾಪಕರ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದ ವಾಣಿಜ್ಯ ಮಂಡಳಿ ಸಂಚಾರಿ ವಿಜಯ್ ಗೆ ಅವಮಾನ ಎಸಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ವಾಣಿಜ್ಯ ಮಂಡಳಿ ವಿರುದ್ದ ಕೆಂಡ ಕಾರಿದ್ದ ಚಕ್ರವರ್ತಿ ಚಂದ್ರಚೂಡ್, ಅಗಲಿದ ಗೆಳೆಯನ ನೆನಪನ್ನು ಹೇಗೆ ಶಾಶ್ವತವಾಗಿಡಬೇಕು ಅನ್ನುವುದು ನಮಗೆ ಗೊತ್ತಿದೆ. ಅದನ್ನು ವಾಣಿಜ್ಯ ಮಂಡಳಿಯಿಂದ ಕಲಿಯಬೇಕಾಗಿಲ್ಲ ಎಂದು ಗುಡುಗಿದ್ದರು ಕೂಡಾ.
![sanchari viji](https://torrentspree.com/wp-content/uploads/2021/06/sanchari-viji.png)
ಚಂದ್ರಚೂಡ್ ಮಾತು ಇದೀಗ ಸತ್ಯವಾಗಿದೆ. ಇದೀಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ವತಿಯಿಂದ ಸಂಚಾರಿ ವಿಜಯ್ ಅವರಿಗೆ ಗೌರವ ಸಲ್ಲಿಸಲಾಗಿದೆ.
“ALWAYS IN OUR HEART, SANCHARI VIJAY, GONE YET NOT FORGOTTEN”- ಹೀಗಂತ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ನಲ್ಲಿ ಸಂದೇಶ ಪ್ರಸಾರವಾಗುತ್ತಿದೆ. ಈ ಸಂದೇಶ 24 ಗಂಟೆಗಳ ಕಾಲ ಥಿಯೇಟರ್ ಬೋರ್ಡ್ ಮೇಲೆ ರಾರಾಜಿಸಲಿದೆ.
ಅಂದ ಹಾಗೇ ಇದು ಸಾಧ್ಯವಾಗಿದ್ದು ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗ, ಸಿನಿಮಾ ನಿರ್ಮಾಪಕ ರವಿ ಕಶ್ಯಪ್ ಅವರಿಂದ.
Discussion about this post