ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ agneepath ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ
ಬೆಂಗಳೂರು : ದೇಶದ ಸೈನ್ಯವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ( Agneepath) ಯೋಜನೆ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಅಗ್ನಿಪಥ್ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆ.
ಈ ಸಂಬಂಧ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಮಿತಿ ಸೂಚನೆಯೊಂದನ್ನು ರವಾನಿಸಿದ್ದು, ಎಲ್ಲಾ ಕಾಲೇಜುಗಳಲ್ಲಿ ಅಗ್ನಿಪಥ್ ಯೋಜನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಅಂದಿದೆ. ಈ ಸಂಬಂಧ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು, ಹೆಚ್ಚೆಚ್ಚು ವಿದ್ಯಾರ್ಥಿಗಳಲ್ಲಿ ಸೇನೆಯ ಬಗ್ಗೆ ಅರಿವು ಮೂಡಲಿ ಅಂದಿದೆ.
ಇದನ್ನೂ ಓದಿ : 2 ಗಂಟೆ ಜಾರ್ಜ್ ಮಾಡಿದ್ರೆ 200 ಕಿಲೋ ಮೀಟರ್ : ಒಬೆನ್ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಗೆ ರೆಡಿ
ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ,ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಆಸಕ್ತ ವಿದ್ಯಾರ್ಥಿಗಳು ಭಾರತೀಯ ಭೂಸೇನೆ ಮತ್ತು ಭಾರತೀಯ ವಾಯುಸೇನಾ ನೇಮಕಾತಿಯ ಉಪಯೋಗ ಪಡೆಯಬೇಕು. ಈ ಸಂಬಂಧ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಇಲಾಖೆಯ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
ಒಣಗಲು ಇಟ್ಟಿದ್ದ ಬೆಳ್ಳಿ ಹಿತ್ತಾಳೆ ಪೂಜಾ ಸಾಮಾಗ್ರಿ ದೋಚಿದ ಕಳ್ಳ
Bengaluru theft : ರಾಜಧಾನಿಯ ಪೊಲೀಸರು ಮೈ ಕೊಡವಿ ನಿಲ್ಲಬೇಕಿದೆ. ಸರ್ಕಾರ ಕೊಟ್ಟಿರುವ ಆಯುಧಗಳು ರುಚಿಯನ್ನು ಕಳ್ಳರು, ದರೋಡೆಕೋರರು ಮರೆತಿದ್ದಾರೆ. ಇಲ್ಲೊಬ್ಬ ಕಳ್ಳ ದೇವರ ಪೂಜಾ ಸಾಮಾಗ್ರಿಯನ್ನೂ ಬಿಟ್ಟಿಲ್ಲ
ಬೆಂಗಳೂರು : ತೊಳೆದು ಮನೆ ಮುಂದೆ ಒಣಗಲು ಇಟ್ಟಿದ್ದ ಹಿತ್ತಾಳೆ ಕುಕ್ಕರ್, ಹಿತ್ತಾಳೆ ಪೂಜಾ ಸಾಮಾಗ್ರಿ, ಬೆಳ್ಳಿಲೋಟವನ್ನು ಕಳ್ಳನೊಬ್ಬ ( Bengaluru theft ) ದೋಚಿದ ಘಟನೆ ಬನಶಂಕರಿಯಲ್ಲಿ ನಡೆದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಶಂಕರಿ 3 ನೇ ಹಂತದ ಗುರುರಾಜ ಲೇಜೌಟ್ ನ 9ನೇಮುಖ್ಯ ರಸ್ತೆಯ ಕೃತಿ ಅನ್ನುವವರು ಜೂನ್ 16 ರಂದು ಮನೆಯ ಹಿತ್ತಾಳೆ ಕುಕ್ಕರ್, ಹಿತ್ತಾಳೆ ಪೂಜಾ ಸಾಮಾಗ್ರಿ, ಬೆಳ್ಳಿಲೋಟವನ್ನು ತೊಳೆದು ನೀರು ಆರಲು ಮನೆ ಮುಂದೆ ಬಿಸಿಲಿಗೆ ಇಟ್ಟಿದ್ದರು. ಇದಾದ ಬಳಿಕ ಮಗಳಿಗೆ ಲಸಿಕೆ ಹಾಕಿಸುವ ಸಲುವಾಗಿ ಆಸ್ಪತ್ರೆಗೆ ತೆರಳಿದ್ದರು. ಎನ್.ಆರ್. ಕಾಲೋನಿಯ ಆಸ್ಪತ್ರೆಯಿಂದ ಬರುವಷ್ಟರಲ್ಲಿ ಒಣಗಲು ಇಟ್ಟಿದ ಪಾತ್ರೆಗಳು ನಾಪತ್ತೆಯಾಗಿತ್ತು. ಈ ಬಗ್ಗೆ ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಿದ್ರೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಬನಶಂಕರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
Discussion about this post