ಚೊಗಚೆ ಗಿಡ ಸಂಪೂರ್ಣ ಔಷಧೀಯ ಗುಣಗಳನ್ನು ಹೊಂದಿದ್ದು, ಈ ಗಿಡದ ಎಲೆ ಎಲೆ ಹೂ ಕಾಯಿಗಳನ್ನ ತರಕಾರಿಯಂತೆ ಬಳಸುತ್ತಾರೆ. ಇದರ ಹೂವುಗಳಲ್ಲಿ ಅಧಿಕ ಪ್ರಮಾಣದ ಪ್ರೋಟಿನ್, ಎ ವಿಟಮಿನ್, ಸುಣ್ಣ ಮತ್ತು ಕಬ್ಬಿಣದ ಅಂಶಗಳು ಹೇರಳವಾಗಿದೆ.
* ಇದರ ಹೂವುಗಳ ಗುಲಕಂದ ತಯಾರಿಸಿ ಸೇವಿಸಿದರೆ ಶಾರೀರಿಕ ದೌರ್ಬಲ್ಯ ದೂರವಾಗಿ ದೇಹ ಕಾಂತಿಯುಕ್ತವಾಗುತ್ತದೆ.
* ಅರ್ಧ ತಲೆ ನೋವಿಗೆ ವಿರುದ್ಧ ದಿಕ್ಕಿನ ಮೂಗಿನ ಹೊರಳೆಯಲ್ಲಿ ಚೊಗಚೆ ಎಲೆಗಳ ನಾಲ್ಕೈದು ಹನಿ ರಸವನ್ನು ಹಿಂಡಿದರೆ ತಲೆ ನೋವು ಮಾಯವಾಗುತ್ತದೆ.
*ಸ್ಮರಣ ಶಕ್ತಿ ವೃದ್ಧಿಸಲು ಚೊಗಚೆ ಗಿಡದ ಬೀಜಗಳ ಪೌಡರ್ ನ್ನು 05 ಗ್ರಾಂ ನಷ್ಟು ಹಸುವಿನ ತುಪ್ಪದಲ್ಲಿ ಎರಡು ಬಾರಿ ಸೇವನೆ ಮಾಡಬಹುದು.
*ಹೊಟ್ಟೆ ನೋವಿಗೆ ಅಗಸೆ ಗಿಡದ ಚಕ್ಕೆ , ಹುರಿದ ಲವಂಗ ಸೇರಿಸಿ ಕಷಾಯ ತಯಾರಿಸಿ ಸೈಂಧವ ಲವಣ ಸೇರಿಸಿ ದಿನದಲ್ಲಿ ಮೂರು ಬಾರಿ ಸೇವಿಸಬೇಕು.
* ಇರುಳುಗಣ್ಣಿಗೆ ಅಗಸೆ ಹೂವುಗಳ ಪಲ್ಯ ಮಾಡಿ ಎರಡು ವೇಳೆ ಸೇವಿಸಬೇಕು.
* ಕಣ್ಣಿನ ರೋಗಗಳಿಗೆ ಬಿಳಿ ಅಗಸೆ ಹೂವಿನ ರಸ ಎರಡೆರಡು ಹನಿ ಹಾಕಬೇಕು. ಹಾಗೂ ಇದರ ಎಲೆಗಳನ್ನು ತುಪ್ಪದಲ್ಲಿ ಹುರಿದು ಸೇವನೆ ಮಾಡುವು ದರಿಂದ ನೇತ್ರ ವಿಕಾರಗಳು ಪರಿಹಾರವಾಗುತ್ತವೆ.
* ಹೊಟ್ಟೆಯ ಹುಳುಗಳಿಗೆ 20 ಎಂ ಎಲ್ ನಷ್ಟು ಎಲೆಗಳ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
Discussion about this post