ಬೆಂಗಳೂರು : ಮೊನ್ನೆ ಮೊನ್ನೆ KSRTC ಹೆಸರಿನ ವಿಚಾರದಲ್ಲಿ ಜನತೆಯ ಹಾದಿ ತಪ್ಪಿಸಿದ್ದ ಕೇರಳ ಜನರಲ್ಲಿ ಗೊಂದಲ ಮೂಡಿಸಿತ್ತು. ಕರ್ನಾಟಕ ಸರ್ಕಾರಕ್ಕೆ ನೊಟೀಸ್ ಕೊಡುತ್ತೇವೆ, ಎಚ್ಚರಿಕೆ ಕೊಡುತ್ತೇವೆ ಎಂದೆಲ್ಲಾ ಹಾರಾಡಿದ್ದ ಕೇರಳ ಸಾರಿಗೆ ಸಚಿವರು ಇದೀಗ ಸೈಲೆಂಟ್ ಆಗಿದ್ದಾರೆ.
KSRTC ಹೆಸರು ಬಳಸುವ ವಿಚಾರದಲ್ಲಿ ಸಾರಿಗೆ ಇಲಾಖೆ ಮುಖ್ಯಸ್ಥರು ತಿರುಗೇಟು ಕೊಡುತ್ತಿದ್ದಂತೆ ವಿಷಯ ಸೈಲೆಂಟ್ ಆಗಿದೆ.
ಈ ನಡುವೆ ಕೇರಳ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ನ ಆಕಾರ ಹಾಗೂ ಪೊಟ್ಟಣವನ್ನು ಕಾಪಿ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ಈ ಸಂಬಂಧ ಕನ್ನಡ ಗೆಳೆಯರ ಬಳಗ ಗಂಭೀರ ಆರೋಪ ಮಾಡಿದ್ದು, ಕರ್ನಾಟಕ ಸರ್ಕಾರ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ದೇಶ ಮಾತ್ರವಲ್ಲ ವಿದೇಶದಲ್ಲೂ ಉತ್ತಮ ಹೆಸರಿದೆ. ಕೇರಳ ಸರ್ಕಾರ, ಕೇರಳ ಸ್ಯಾಂಡಲ್ ಸೋಪ್ ಅನ್ನು ಇದೇ ಮಾದರಿಗಳಲ್ಲಿ ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ ಜನತೆಯನ್ನು ಗೊಂದಲಕ್ಕೆ ಸಿಲುಕಿಸಿ, ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರದಂತೆ ಗೋಚರಿಸುತ್ತಿದೆ ಅಂದಿದೆ.
ಕನ್ನಡ ಗೆಳೆಯರ ಬಳಗ ಮಾಡಿರುವ ಆರೋಪದ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುವ ಅವಶ್ಯಕತೆ, ಇಲ್ಲವಾದರೆ ಮೈಸೂರು ಸ್ಯಾಂಡಲ್ ಸೋಪ್ ಆಕಾರ, ಪೊಟ್ಟಣ ಎಲ್ಲವೂ ನಮ್ಮದೇ ಎಂದು ಕೇರಳ ಕ್ಲೇಮ್ ಮಾಡಿದರೂ ಅಚ್ಚರಿ ಇಲ್ಲ.
ಪಾಪ ನಮ್ಮ ಸರ್ಕಾರಕ್ಕೆ ಅಷ್ಟೆಲ್ಲ ಪುರುಸೋತ್ತು ಎಲ್ಲಿದೆ. ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವುದರಲ್ಲಿದ್ದಾರೆ. ಸಚಿವರು ಕುರ್ಚಿಯಿಂದ ಕೆಳಗಿಳಿಸುವುದರಲ್ಲಿದ್ದಾರೆ.
Discussion about this post