ನಾನು ಸಿಂಗಲ್ ಹಾಗೂ ಲಭ್ಯವಿದ್ದೇನೆ, ಹಾಗಂತ ವದಂತಿ ಹಬ್ಬಿಸಬೇಡಿ ಹಾಗೂ ವದಂತಿ ನಂಬಬೇಡಿ ಎಂದು ನಟಿ ಹಾಗೂ ಬಿಗ್ ಸ್ಪರ್ಧಿ ವನಿತಾ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಮಿಳು ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವನಿತಾ ವಿಜಯ್ ಮಾರ್ ಅವರಿಗೆ ಹೀಗೆಲ್ಲಾ ಬರೆದುಕೊಳ್ಳುವುದು ಹೊಸದೇನಲ್ಲ. ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ಈಕೆ, ತಮ್ಮ ವೈಯುಕ್ತಿಕ ಜೀವನದ ಕಾರಣದಿಂದಲೇ ಹೆಡ್ ಲೈನ್ ಆಗುತ್ತಿರುತ್ತಾರೆ.
ಈಗಾಗಲೇ ಮೂರು ಮದುವೆಯಾಗಿರುವ ವನಿತಾ, ನಾನು ಸಿಂಗಲ್ ಅನ್ನುವ ಮೂಲಕ ನಾಲ್ಕನೇ ಮದುವೆ ಸಿದ್ದಳಾಗಿದ್ದೇನೆ ಅನ್ನುವ ಸಂದೇಶ ಕೊಟ್ಟಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ವಿಎಫ್ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದ ವನಿತಾ ಕೆಲವೇ ತಿಂಗಳಲ್ಲಿ ಗಂಡನಿಂದ ದೂರವಾಗಿದ್ದರು. ಮಕ್ಕಳ ಮುಂದೆಯೇ ಮೂರನೇ ಮದುವೆಯಾದ ಕಾರಣಕ್ಕೆ ಈ ವಿವಾಹ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಮೂರನೇ ಮದುವೆ ಮುರಿದು ಹೋಗಲು ಪೀಟರ್ ಕಾರಣ ಎಂದು ದೂರಿದ್ದ ವನಿತಾ, ಅವನಿಗೆ ಕುಡಿತ ಚಟ ಇದೆ ಎಂದು ಗೊತ್ತಿರಲಿಲ್ಲ. ನನ್ನ ಮಕ್ಕಳಿಗೆ ತಂದೆಯನ್ನು ಬಯಸಿ ಮದುವೆಯಾದೆ, ಆದರೆ ನಾನು ಮೋಸ ಹೋದೆ ಎಂದು ಕಣ್ಣೀರು ಹಾಕಿದ್ದರು.
ಇನ್ನು ವನಿತಾ ಮಾಡಿದ ಟ್ವೀಟ್ ಗೆ ಟೀಕೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ. ಟೀಕೆಗಳಿಗೆ ಅವರು ಉತ್ತರಿಸುವ ರೀತಿ ನೋಡಿದರೆ, ಅವರೆಷ್ಟು ಉರಿದು ಬೀಳುತ್ತಿದ್ದಾರೆ ಎಂದು ಗೊತ್ತಾಗುತ್ತದೆ.
Discussion about this post