ಮುಂಬೈ : ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿಯಲ್ಲಿ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಕುಂದ್ರಾ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದೆ. ಕುಂದ್ರಾ ಅವರ ಕಂಪನಿಯ ಆಡಿಶನ್ ಎದುರಿಸಿದ ನಟಿಯರು ಕೂಡಾ ಆರೋಪಗಳ ಸುರಿಮಳೆಗೈದಿದ್ದಾರೆ.
ಈ ನಡುವೆ ಗೆಹನಾ ವಶಿಷ್ಟ್ ಅನ್ನುವ ಮಾಡೆಲ್ ಕುಂದ್ರ ಪರವಾಗಿ ಮಾತನಾಡಿದ್ದು, ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿರಲಿಲ್ಲ. ಕೇವಲ ಉದ್ರೇಕಕಾರಿ ವಿಡಿಯೋಗಳನ್ನು ಮಾತ್ರ ನಿರ್ಮಿಸುತ್ತಿದ್ದರು. ಅವರು ಮಾಡಿದ ವಿಡಿಯೋಗಳನ್ನು ಸರಿಯಾಗಿ ನೋಡಿದರೆ ಅರ್ಥವಾಗುತ್ತದೆ. ಕಾಮೋದ್ರೇಕಾರಿ ಸೀನ್ ಗಳು ಬಾಲಿವುಡ್ ಸಿನಿಮಾಗಳಲ್ಲೂ ಇದೆ. ಆದರೆ ರಾಜ್ ಕುಂದ್ರಾ ಅವರನ್ನು ಟಾರ್ಗೇಟ್ ಮಾಡಲಾಗಿದೆ ಎಂದು ಗೆಹನಾ ವಶಿಷ್ಟ್ ಹೇಳಿದ್ದಾರೆ.
ಈ ಬಗ್ಗೆ ಸುದೀರ್ಘ ವಿಡಿಯೋ ಒಂದನ್ನು ಬಿಟ್ಟಿರುವ ಅವರು, ಎಲ್ಲರ ಬಳಿ ನನ್ನದೊಂದು ಸಣ್ಣದೊಂದು ಮನವಿ, ಬೋಲ್ಡ್ ಅಥವಾ ಉದ್ರೇಕಕಾರಿ ಸಿನಿಮಾಗಳನ್ನು ನೀಲಿ ಚಿತ್ರಗಳೊಂದಿಗೆ ಹೋಲಿಸಬೇಡಿ. ರಾಜ್ ಕುಂದ್ರಾ ಹಾಗೂ ನಾನು ಒಂದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದೇವೆ. ಜೊತೆಗೆ ತನಿಖೆಯೂ ನಡೆಯುತ್ತಿದೆ. ರಾಜ್ ಕುಂದ್ರಾ ನಿರ್ಮಾಣದ ಮೂರು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೇನೆ. He never forced me to do anything. ನನ್ನ ಕೆಲಸಕ್ಕೆ ಅನುಗುಣವಾಗಿ ನನಗೆ ಸಂಭಾವನೆ ಕೂಡಾ ದೊರಕಿದೆ. ನನಗೆ ಸಿಕ್ಕ ಸಂಭಾವನೆ ಬಗ್ಗೆಯಾಗಲಿ, ಅವರ ಚಿತ್ರಗಳ ಕಂಟೆಂಟೇ ಬಗ್ಗೆಯಾಗಲಿ ನನಗೆ ತಕರಾರಿಲ್ಲ. ಜೊತೆಗೆ ಅವರಿಂದ ಮತ್ತು ಅವರ ಸಂಸ್ಥೆಯಿಂದ ನನಗೆ ಯಾವುದೇ ಕೆಟ್ಟ ಅನುಭವಗಳಾಗಿಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4ರಂದು ನನ್ನ ಬಂಧಿಸಲಾಗಿತ್ತು. ಅವತ್ತು ಮಾಧ್ಯಮಗಳಲ್ಲಿ ಬಂಗಲೆಯೊಂದಕ್ಕೆ ದಾಳಿ ಮಾಡಿ, ನೀಲಿ ಚಿತ್ರ ನಿರ್ಮಾಣ ಸ್ಥಳದಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿತ್ತು. ಆದರೆ ನಾನು ಅವತ್ತು ಮನೆಯಲ್ಲೇ ಇದ್ದೆ. ಫೆಬ್ರವರಿ 7 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು ಎಂದು ತಮ್ಮ ಜೈಲುವಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Discussion about this post