ಬೆಂಗಳೂರು : ಚಂದನವನದ ಮಾಜಿ ನಟಿ ಅಮೂಲ್ಯ ಗರ್ಭಿಣಿಯಾಗಿದ್ದಾರೆ ಅನ್ನುವ ಸುದ್ದಿ, ರಾಜ್ಯವೇ ಸಂಭ್ರಮ ಪಡುವ ಸುದ್ದಿ ಅನ್ನುವ ಕಾರಣಕ್ಕೆ ವೈರಲ್ ಆಗಿತ್ತು. ಟ್ರೋಲ್ ಪೇಜ್ ಗಳು ಕೂಡಾ ರಾಜ್ಯ ಮಟ್ಟದ ವಾಹಿನಿಯೊಂದನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿತ್ತು. ಈ ಕಾರಣಕ್ಕಾಗಿ ವಾಹಿನಿ ಹಾಗೂ ಟ್ರೋಲ್ ಪೇಜ್ ಗಳ ನಡುವೆ ಬಿಟ್ಟಿ ಇಂಟರ್ ನೆಟ್ ವಿಚಾರದಲ್ಲಿ ಜಗಳವೇ ನಡೆದಿತ್ತು.
ಈ ನಡುವೆ ಅಮೂಲ್ಯ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಚಂದನವನದ ಅನೇಕರ ಗಣ್ಯರು ಮತ್ತು ಅಮೂಲ್ಯ ಹಾಗೂ ಪತಿ ಜಗದೀಶ್ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಕೊರೋನಾ ನಿಯಮ ಜಾರಿಯಲ್ಲಿರುವ ಸಂದರ್ಭದಲ್ಲೇ ಅದ್ದೂರಿಯಾಗಿ ನಡೆದ ಕಾರ್ಯಕ್ರಮ ಹಲವರ ಹುಬ್ಬೇರಿಸುವಂತೆ ಮಾಡಿತ್ತು.
ಜನ ಸಾಮಾನ್ಯರ ಕಾರ್ಯಕ್ರಮಗಳಿಗೆ ಇಷ್ಟೇ ಜನ ಇರಬೇಕು ಎಂದು ಮಿತಿ ಹಾಕೋ ಅಧಿಕಾರಿಗಳು, ದಾಳಿ ಮಾಡಿ ದಂಡ ಕಟ್ಟಿಸುತ್ತಾರೆ. ಆದರೆ ಸೆಲೆಬ್ರೆಟಿಗಳ ಕಾರ್ಯಕ್ರಮ ಇವರಿಗೆ ಕಾಣಿಸೋದಿಲ್ಲ ಅನ್ನುವ ಟೀಕೆಯೂ ವ್ಯಕ್ತವಾಗಿತ್ತು.
ಇನ್ನು ಅಮೂಲ್ಯ ಸೀಮಂತ ಸಂಭ್ರಮದ ಫೋಟೋಗಳು ಇಲ್ಲಿವೆ.
Discussion about this post