ಹಿರಿಯ ನಟಿ ಜಯಂತಿ ಅವರು ನಿಧನರಾಗಿದ್ದಾರೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ವರ್ಷ ಆಸ್ಪತ್ರೆಗೂ ದಾಖಲಾಗಿದ್ದರು. ದಕ್ಷಿಣ ಭಾರತದ ಮೇರು ನಟಿ ಎಂದು ಖ್ಯಾತರಾಗಿದ್ದ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.
5 ಬಾರಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಗೊಂಡಿದ್ದ ಅವರು, 1968ರಲ್ಲಿ ಬಿಡುಗಡೆಯಾದ ಜೇನುಗೂಡು ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಚಿದ್ದರು. ಒಟ್ಟು 190 ಚಿತ್ರಗಳಲ್ಲಿ ಅಭಿನಯಸಿದ್ದ ಹಿರಿಮೆ ಇವರದ್ದು,
1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಸಂತಾನಲಕ್ಷ್ಮೀ ಗೃಹಿಣಿಯಾಗಿದ್ದರು.
ಮನೆಯಲ್ಲಿ ಹಿರಿಯ ಪುತ್ರಿಯಾಗಿ ಹುಟ್ಟಿದ್ದ ಇವರಿಗೆ ಇಬ್ಬರು ಸಹೋದರರಿದ್ದಾರೆ. ಇವರ ತಂದೆ ತಾಯಿ ವಿಚ್ಛೇದನ ಪಡೆದ ಕಾರಣ ಜಯಂತಿಯವರು ತಾಯಿಯ ಜೊತೆ ಮದ್ರಾಸ್ ನಲ್ಲಿ ಬೆಳೆದರು. ಮಗಳನ್ನು ಶಾಸ್ತ್ರೀಯ ನೃತ್ಯಗಾರ್ತಿಯಾಗಿಸಲು ಬಯಸಿದ್ದ ತಾಯಿ ಸಂತಾನಲಕ್ಷ್ಮೀ ಜಯಂತಿಯವರನ್ನು ಚಂದ್ರಕಲಾ ಅವರ ನೃತ್ಯ ಶಾಲೆಗೆ ಸೇರಿಸಿದರು.
ಈ ನಡುವೆ ನಿರ್ದೇಶಕ ವೈ ಆರ್ ಪುಟ್ಟಸ್ವಾಮಿ ಜಯಂತಿಯವರ ನೃತ್ಯವನ್ನು ನೋಡಿ ತಮ್ಮ ಜೇನುಗೂಡು ಸಿನಿಮಾದಲ್ಲಿ ನಟಿಸುವ ಅವಕಾಶ ಕಲ್ಪಿಸಿದ್ದರು. ಈ ವೇಳೆಯೇ ಕಮಲಾ ಕುಮಾರಿ ಜಯಂತಿಯಾಗಿ ಬದಲಾದರು.
Discussion about this post