ಬೆಂಗಳೂರು : ಕೊರೋನಾ ಸೋಂಕಿಗೆ ಬಲಿಯಾದ 1200 ಅನಾಥರ ಆತ್ಮಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಇಂದು ಮೃತರಿಗೆ ಪಿಂಡ ಪ್ರದಾನ ಮಾಡಲಿದ್ದಾರೆ. ಶ್ರೀರಂಗಪಟ್ಟಣದ ಗೋಸಾಯ್ಘಾಟ್ ನಲ್ಲಿ ಈ ಕಾರ್ಯ ನೆರವೇರಲಿದ್ದು, ಇದಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಈ ಹಿಂದೆ ಅನಾಥ ಶವಗಳ ಆಸ್ಥಿಯನ್ನು ಜೂನ್ ತಿಂಗಳಲ್ಲಿ ವಿಸರ್ಜನೆ ಮಾಡಿದ್ದ ಸಚಿವರು ಈ ಮೂಲಕ ಒಳ್ಳೆಯ ಕಾರ್ಯವೊಂದನ್ನು ನೆರವೇರಿಸಿದ್ದರು.
ಇಂದು ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದು, ಗಣಪತಿ ಪೂಜೆ, ಪುಣ್ಯಾಹ, ಪಂಚ ಗವ್ಯ ಮತ್ತು ದ್ವಾರಸ ನಾರಾಯಣರ 12 ಕಳಸ ಪೂಜೆ ಮುಕ್ತಾಯಗೊಂಡಿದೆ. ಇನ್ನುಳಿದಂತೆ ಮೋಕ್ಷ ನಾರಾಯಣ ಬಲಿ, ತಿಲ ಹೋಮ, ವಿಷ್ಣು ಪಾದ ಪೂಜೆಗಳು ನಡೆಯಬೇಕಾಗಿದೆ.
ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ ಸಚಿವರು ಆರ್ ಅಶೋಕ್ ಶ್ರೀರಂಗನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮೃತರಿಗೆ ಎಡೆ ಪೂಜೆ ನೆರವೇರಿಸಿ ಪಿಂಡ ಪ್ರದಾನ ಮಾಡಲಿದ್ದಾರೆ.
Discussion about this post