ಈ ಹಿಂದೆ ಹೋರಿ ಟಗರು ದಾಳಿಯಿಂದ ಬಚಾವ್ ಆಗಿದ್ದ ಶಾಸಕ ರೇಣುಕಾಚಾರ್ಯ ಈ ಬಾರಿ ಕೋತಿ ದಾಳಿಯಿಂದ ಬಚಾವ್ ಆಗಿದ್ದಾರೆ.
ಹೊನ್ನಾಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಒಂದು ತಿಂಗಳಿನಿಂದ ಕೋತಿಯೊಂದು ಸ್ಥಳೀಯರಿಗೆ ತೊಂದರೆ ಕೊಡುತ್ತಿತ್ತು. 20ಕ್ಕೂ ಹೆಚ್ಚು ಮಂದಿಯ ಮೇಲೆ ಈಗಾಗಲೇ ದಾಳಿಯನ್ನೂ ಮಾಡಿದೆ.
ಇಂದು ಶಾಸಕ ರೇಣುಕಾಚಾರ್ಯ ತಾಲೂಕು ಕಚೇರಿಗೆ ತೆರಳಿದ್ದು, ಈ ವೇಳೆ ಅವರ ಮೇಲೆ ಕೋತಿ ದಾಳಿ ಮಾಡಲು ಮುಂದಾಗಿದೆ.
ಶಾಸಕರು ಕ್ಷಣ ಮಾತ್ರದಲ್ಲಿ ಕೋತಿ ದಾಳಿಯಿಂದ ಪಾರಾಗಿದ್ದಾರೆ.
ಈ ಹಿಂದೆ ಹೋರಿಯಿಂದ ರೇಣುಕಾಚಾರ್ಯ ಗುಮ್ಮಿಸಿಕೊಂಡಿದ್ದರು. ಇದಾಗ ಬಳಿಕ ಟಗರ ಕಾಳಗದ ವೇಳೆ ಎರಡು ಟಗರುಗಳ ಕೊಂಬು ಹಿಡಿದು ಪರಸ್ಪರ ಕಾದಾಟಕ್ಕೆ ಬಿಡುವ ವೇಳೆ ಒಂದು ಟಗರು ಬಂದು ಡಿಚ್ಚಿ ಹೊಡೆದಿತ್ತು.
Discussion about this post