ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ಮಾಡ್ತೀಯಾ ಅಂದ್ರೆ ನಾನು ಕಾರ್ಟೋನ್ ಬರೆಯುತ್ತೇನೆ ಅಂದನಂತೆ ಆ ಹುಡುಗ.
ಆ ವ್ಯಕ್ತಿ ಬೇರಾರು ಅಲ್ಲ ಈಗ ಕಲರ್ಸ್ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ ಗುಂಡ್ಕಲ್. ಅಂದು ಗುರುವಾಗಿದ್ದ ಬೆಳಗೆರೆಯನ್ನು ಸುದೀಪ್ ಮೂಲಕ ಬಿಗ್ ಬಾಸ್ ಮನೆಗೆ ಗುಂಡ್ಕಲ್ ಬರಮಾಡಿಕೊಂಡಿದ್ದಾರೆ.
ಹಾಗೇ ನೋಡಿದರೆ ಬೆಳಗೆರೆಯ ಬರವಣಿಗೆ ಶಕ್ತಿ ಕುಂದಿದೆ. ಮಾತಿನಲ್ಲಿ ಹುಮ್ಮಸ್ಸಿದೆ ಆದರೆ ವಯಸ್ಸು ದನಿ ಅಡ್ಡವಾಗಿ ನಿಂತಿದೆ. ಬಿಗ್ ಬಾಸ್ ಮನೆಯ ಟಾಸ್ಕ್ ಗಳನ್ನು ಎದುರಿಸಬಲ್ಲ ಶಕ್ತಿ ರವಿ ಕೈಯಲ್ಲಿ ಇಲ್ಲ.
ಇನ್ನು ರವಿ ಬೆಳೆಗೆರೆಯ ಒಂದು ಮುಖವನ್ನು ಮಾತ್ರ ಕನ್ನಡಿಗರು ನೋಡಿದ್ದಾರೆ. ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರ ಬೇರೆ ಮುಖಗಳ ಪರಿಚಯವೂ ಇದೆ. ಬಿಗ್ ಬಾಸ್ ಮನೆಯಲ್ಲಿ ಕಪ್ಪು ಸುಂದರಿಯ ಒಡೆಯನಿಗೆ ಮತ್ಯಾವ ಮುಖಗಳಿದೆ ಅನ್ನುವುದು ಪರಿಚಯವಾಗಲಿದೆ.ಸಿಗರೇಟು ಮಾತ್ರ ಅವರಿಗಿರುವ ಚಟವೇ ಅನ್ನುವ ಪ್ರಶ್ನೆಗೂ ಇಲ್ಲಿ ಉತ್ತರ ಸಿಗಲಿದೆ.
ಜೊತೆಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮುನ್ನ ನಾನು ಜ್ಯೋತಿಷ್ಯ ಹೇಳುತ್ತೇನೆ ಅಂದಿದ್ದಾರೆ. ಅಲ್ಲಿಗೆ ಬೆಳಗೆರೆ ಒಂದು ಮುಖ ಗೊತ್ತಾಗಿದೆ. ಮುಂದಿನ ಮುಖಗಳಿಗೆ ನಾವೆಲ್ಲಾ ಬಿಗ್ ಬಾಸ್ ಕಾರ್ಯಕ್ರಮದತ್ತ ಮುಖ ಮಾಡೋಣ.
Discussion about this post