ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಕರೆಸಿಕೊಂಡಿರುವ ನೇಪಾಳ ಪಶುಪತಿನಾಥ ದೇವಾಲಯದ ಆಸ್ತಿಗಳು ಇದೀಗ ಮೊದಲ ಬಾರಿಗೆ ಬಹಿರಂಗಗೊಂಡಿದೆ.
1962 ರಿಂದ 2018ರವರೆಗೆ ಟ್ರಸ್ಟ್ ದೇವಾಲಯವನ್ನು ನಿರ್ವಹಿಸಿದ ಬಗ್ಗೆ ವರದಿ ಸಲ್ಲಿಸಲು 11ಸದಸ್ಯರ ಅಧ್ಯಯನ ಸಮಿತಿಯೊಂದನ್ನು ಅಲ್ಲಿನ ಸರಕಾರ 2017ರಲ್ಲಿ ರಚಿಸಿತ್ತು. ಆ ಸಮಿತಿ ಇದೀಗ ವರದಿ ಸಲ್ಲಿಸಿದೆ.
ವರದಿಯ ಪ್ರಕಾರ ಪಶುಪತಿನಾಥ ದೇವಾಲಯದಲ್ಲಿ ಸುಮಾರು 9.27 ಕೆ.ಜಿ. ಚಿನ್ನ, 316 ಕೆ.ಜಿ. ಬೆಳ್ಳಿ ಮತ್ತು 120 ಕೋಟಿ ರೂ. ನಗದು ಇದೆ. ಜೊತೆಗೆ 459 ಎಕರೆ ಭೂಮಿ ಪಶುಪತಿನಾಥನ ಬಳಿಯಿದೆ ಎಂದು ಗೊತ್ತಾಗಿದೆ.
ಆದರೆ ಇದು ಇಲ್ಲಿಗೆ ಮುಗಿದಿಲ್ಲ. ಪಶುಪತಿನಾಥ ದೇಗುಲದಲ್ಲಿನ ಪುರಾತನ ಸಂಗ್ರಹಾಗಾರವೊಂದು ಇದೆ. ಇದರಲ್ಲಿ ನಿಧಿ ಅಡಗಿದೆ ಅನ್ನುವ ನಂಬಿಕೆಯೂ ಇದೆ.
2009ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ಪುರಾತನ ಸಂಗ್ರಹಾಗಾರದ ಬಾಗಿಲು ತೆರೆಯುವುದು ಬೇಡ ಎಂದು 11 ಸದಸ್ಯರ ಅಧ್ಯಯನ ಸಮಿತಿಗೆ ಆದೇಶ ನೀಡಿತ್ತು. ಹೀಗಾಗಿ ಅಲ್ಲಿರಬಹುದಾದ ಆಭರಣ, ಮೂರ್ತಿ, ಮೌಲ್ಯಯುತ ವಸ್ತುಗಳು ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲ.
Discussion about this post