ವಿವಾಹವಾದ ಬಳಿಕ ನಟಿಯರು ತೆರೆಯಿಂದ ಮರೆಗೆ ಸರಿಯುತ್ತಾರೆ. ಗಂಡ ಮಕ್ಕಳು ಕುಟುಂಬ ಅನ್ನುವ ಕಾರಣಕ್ಕೆ ಬಣ್ಣ ಹಚ್ಚುವುದನ್ನು ನಿಲ್ಲಿಸುತ್ತಾರೆ. ಒಂದು ಹಂತಕ್ಕೆ ಎಲ್ಲವೂ ಮುಗಿದ ಮೇಲೆ ಕೆಲವರು ಎರಡನೇ ಇನ್ನಿಂಗ್ಸ್ ಶುರು ಮಾಡುತ್ತಾರೆ.
ಆದರೆ ಇದಕ್ಕೆ ಅಪವಾದ ಅನ್ನುವಂತೆ ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿದವರಿದ್ದಾರೆ. ಇನ್ನು ಕೆಲವರು ತೆರೆಯ ಹಿಂದೆ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರನ್ನಿಂಗ್ ನಲ್ಲೇ ಇರುತ್ತಾರೆ.
ಪ್ರಿಯಾಮಣಿ, ಮೇಘನಾ ರಾಜ್, ಐಂದ್ರಿತಾ ರೇ ಹೀಗೆ ಹಲವು ನಟಿಯರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಬೆನ್ನಲ್ಲೇ,ಅಂತಹ ನಟಿಯರ ಸಾಲಿಗೆ ಇದೀಗ ಸಿಂಧು ಲೋಕನಾಥ್ ಹೆಸರು ಸೇರ್ಪಡೆಯಾಗುತ್ತಿದೆ.
Discussion about this post