ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್ ಈಗ ಬಹು ಬೇಡಿಕೆಯ ನಟಿ. ಚಂದನವನದ ಹಾಟ್ ಬೆಡಗಿಯರನ್ನು ಹಿಂದಿಕ್ಕಿ, ಬಹುತೇಕ ಸ್ಟಾರ್ ನಟರುಗಳ ಜೊತೆ ನಟಿಸಿದ ಗಟ್ಟಿಗಿತ್ತಿ ಕೂಡಾ ಹೌದು.
ಸಾಕಷ್ಟು ದಿನಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಚಿತ್ರ ಹಲವು ಕಾರಣಗಳಿಂದ ಮುಂದಕ್ಕೆ ಹೋಗಿತ್ತು.
ಈ ನಡುವೆ ರಚಿತಾ ಮತ್ತು ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರ ಜೂನ್ 14 ನೇ ರಂದು ಬಿಡುಗಡೆಯಾಗಲಿದೆ.
ಇದೀಗ ಉಪೇಂದ್ರ ಜೊತೆಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ರಚಿತಾ ರಾಮ್ ಚಿತ್ರದಲ್ಲಿ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಅಭಿನಯಿಸಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ಇದೇ ಚಿತ್ರದ ಟೀಸರ್ ವೊಂದರಲ್ಲಿ ಬ್ಯಾಕ್ ಪೋಸ್ ನೀಡಿದ್ದ ರಚಿತಾ ರಾಮ್ ಇಂದು ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸುವುದಂತೆ ಕಾಣಿಸಿಕೊಂಡಿದ್ದಾರೆ.
ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ರಚಿತಾ ಚಿತ್ರದಲ್ಲಿ ಉಪ್ಪಿ ಜೊತೆ ಲಿಪ್ ಲಾಕ್ ಮಾಡಿದ್ದಾರೆಯೇ ಅನ್ನುವ ಅನುಮಾನ ಕಾಡುವಂತೆ ಮಾಡಿದೆ. ಉಪೇಂದ್ರ ಅವರ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ರಚಿತಾರಾಮ್ ಲಿಪ್ ಲಾಕ್ ಮಾಡಿದ್ದಾರೆಯೇ ಇಲ್ಲವೇ ಅನ್ನುವುದಕ್ಕೆ ಜೂನ್ 14 ರ ತನಕ ಕಾಯಬೇಕಾಗಿದೆ.
Discussion about this post