ಚಂದನ್ ಶೆಟ್ಟಿ ನಿವೇದಿತಾ ಅವರನ್ನು ಮದುವೆಯಾಗ್ತಾರ, ಅವರಿಬ್ಬರು ಪ್ರೀತಿಸುತ್ತಿದ್ದಾರ, ಈ ಪ್ರಶ್ನೆ ಬಿಗ್ ಬಾಸ್ ಮನೆಯಿಂದ ಹುಟ್ಟಿಕೊಂಡಿತ್ತು. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರು ಹಾಕುತ್ತಿದ್ದ ಫೋಟೋ, ಬರ್ತ್ ಡೇ ಗೆ ಪರಸ್ಪರ ವಿನಿಮಯ ಮಾಡುತ್ತಿದ್ದ ಗಿಫ್ಟ್, ಅದು ಗೆಳೆತನವನ್ನು ಮೀರಿದ ಸಂಬಂಧ ಎಂದು ಸಾರಿ ಸಾರಿ ಹೇಳಿತ್ತು. ಆದರೆ ಚಂದನ್ ಆಗ್ಲಿ, ನಿವೇದಿತಾ ಅಗ್ಲಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ.
ಆದರೆ ನಾ ನಿನ್ನ ಬಿಟ್ಟಿಲಾರೆ ಅನ್ನುವಂತೆ ಅವರಿಬ್ಬರು ಅನ್ನುವುದಂತು ಸತ್ಯ. ಹೋಗ್ಲಿ ಇಲ್ಲ ನಾವಿಬ್ಬರು ಬರೀ ಗೆಳೆಯರು ನಮ್ಮ ನಡುವೆ ನೀವೆಲ್ಲಾ ಹೇಳುವಂತೆ ಏನಿಲ್ಲ ಎಂದು ಹೇಳ್ತಾರ ಅದೂ ಇಲ್ಲ.
ಇದೀಗ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲೊಂದು ಫೋಟೋ ಹಾಕಿ, wherever you go, go with your heart ಎಂದು ಬರೆದುಕೊಂಡಿದ್ದಾರೆ.ಜೊತೆಗೆ ಯುವಕನೊಬ್ಬನ ಕೈಯನ್ನು ಹಿಡಿದುಕೊಂಡಿದ್ದಾರೆ.
Discussion about this post