ಇಂದು ವಿಧಿವಶರಾದ ಕನ್ನಡ ರಂಗಭೂಮಿ ಕಲಾವಿದ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರನ್ನು ತೆಲುಗು, ತಮಿಳು ಚಿತ್ರಗಳ ತಾರೆ ಕಾಜಲ್ ಅಗರ್ ವಾಲ್ ಸ್ಮರಿಸಿದ್ದಾರೆ.
ಅವರೊಂದಿಗಿನ ನಟನೆ ನನಗೆ ಮರೆಯಲಾಗದ ಅನುಭವ ಎಂದಿದ್ದಾರೆ. ಅರೇ ಹಿರಣ್ಣಯ್ಯ ಜೊತೆ ಕಾಜಲ್ ಅಗರವಾಲ್ ಯಾವಾಗ ನಟಿಸಿದ್ದು ಅನ್ನುವ ಪ್ರಶ್ನೆ ಆಗ ಎದುರಾಗಿದೆ.
ಆಗ ಗೂಗಲ್ ಮಾಡಿ ನೋಡಿದ್ರೆ ರಮೇಶ್ ಅರವಿಂದ್ ನಿರ್ದೇಶನದ ತಮಿಳಿನ ಪ್ಯಾರಿಸ್ ಪ್ಯಾರಿಸ್ ಎಂಬ ಸಿನಿಮಾದಲ್ಲಿ ಮಾಸ್ಟರ್ ಹಿರಣ್ಣಯ್ಯ ಜೊತೆ ಕಾಜಲ್ ಅಗರವಾಲ್ ಅಭಿನಯಿಸಿದ್ದಾರೆ.
ಈ ಸಿನಿಮಾ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಇದು ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿದ್ದು, ಕನ್ನಡಲ್ಲಿ ‘ಬಟರ್ಪ್ಲೈ’ ಹೆಸರಿನಲ್ಲಿ ಇದೇ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದರು.
ಮಾತ್ರವಲ್ಲದೆ ಕನ್ನಡ ಹಲವಾರು ನಟರು ಮಾಸ್ಟರ್ ಹಿರಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Discussion about this post