ಪ್ರಥಮ್, ಬಿಗ್ ಬಾಸ್ ಮನೆಯಿಂದ ಒಳ್ಳೆ ಹುಡುಗನಾಗಿ ಹೊರ ಹೊಮ್ಮಿದ ಪ್ರತಿಭೆ. ಇದಾದ ಬಳಿಕ ಕನ್ನಡ ಆಸ್ತಿಯಾದ ಪ್ರಥಮ್ ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ್ರು.
ಅದರಲ್ಲೂ ಪ್ರಥಮ್ ಕೈ ಹಾಕಿದ ಚಿತ್ರಗಳಲ್ಲಿ ಪ್ರಥಮಗಳನ್ನು ದಾಖಲಿಸಿದ್ದೇ ಹೆಚ್ಚು ಅನ್ನುವುದು ವಿಶೇಷ. ಈವರೆಗೆ ಮಾಡಿದ ಚಿತ್ರಗಳತ್ತ ಒಂದ್ಸಲ ಹಿಂತಿರುಗಿ ನೋಡಿದ್ರೆ, ಹೌದಲ್ವ ಈ ರೀತಿ ಯಾರು ಮಾಡೇ ಇಲ್ಲ, ಇದು ಪ್ರಥಮ್ ಕೈಯಿಂದ ಮಾತ್ರ ಸಾಧ್ಯ ಅನ್ನುವ ಮಾತು ಖಂಡಿತಾ ಬರುತ್ತದೆ.
ಇದೀಗ ‘ನಟ ಭಯಂಕರ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಥಮ್ ಅಲ್ಲೊಂದು ಪ್ರಥಮವನ್ನು ಸಾಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬ ಕಲಾವಿದರು ಒಬ್ಬೊಬ್ಬರ ಸಿನಿಮಾಗಳಿಗೆ ಸಾಥ್ ನೀಡುವ ಸಂಪ್ರದಾಯ ಪ್ರಾರಂಭಗೊಂಡಿದೆ. ಅದರಲ್ಲೂ ಸ್ಟಾರ್ ಅನ್ನಿಸಿಕೊಂಡವರು ಪ್ರತಿಭಾವಂತರ ಬೆನ್ನು ತಟ್ಟುತ್ತಿದ್ದಾರೆ.
ಹೀಗಿದ್ದರೂ ಗೋಲ್ಡನ್ ಸ್ಟಾರ್ ಗಣೇಶ್, ಬೇರೆಯವರ ಫಿಲ್ಮಂ ಶೂಟಿಂಗ್ ಜಾಗಕ್ಕೆ ಭೇಟಿ ಕೊಟ್ಟಿರಲಿಲ್ಲ. ಇದೀಗ ಪ್ರಥಮ್ ಅವರ ನಟ ಭಯಂಕರ ಸೆಟ್ ಗೆ ಭೇಟಿ ಕೊಟ್ಟಿರುವ ಗಣೇಶ್ ಈ ಮೂಲಕ ಪ್ರಥಮವೊಂದನ್ನು ದಾಖಲಿಸಿದ್ದಾರೆ.
ಹಿಂದೊಮ್ಮೆ ಪ್ರಥಮ್ ಅಭಿನಯದ MLA ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದಾಗ, ‘ನಿನ್ನ ಸಿನಿಮಾ ಶೂಟಿಂಗ್ ಗೆ ಬಂದೇ ಬರ್ತಿನಿ ಅಂದಿದರಂತೆ ಗಣೇಶ್. ಈಗ ಕೊಟ್ಟ ಮಾತಿನಂತೆ ಗೋಲ್ಡನ್ ಸ್ಟಾರ್ ಗಣೇಶ್ ನಟ ಭಯಂಕರ ಸೆಟ್ ಗೆ ಸರ್ಪ್ರೈಸ್ ವಿಸಿಟ್ ಮಾಡಿದ್ದಾರೆ.
ಇದೇ ವೇಳೆ ಪ್ರಥಮ್ ಅವರ ಮಾತಿನ ಭರಾಟೆ ನಡುವೆಯೂ ಬ್ರೇಕ್ ಹಾಕಿದ ಗಣೇಶ್ ನಟ ಭಯಂಕರ ಸಿನಿಮಾ ಚೆನ್ನಾಗಿ ನಡೆಯುತ್ತಿದೆ, ನಿನ್ನ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಕೆಲಸ ಮಾಡ್ತೀಯಾ ಒಳ್ಳೆದಾಗ್ಲಿ ಅಂದಿದ್ದಾರೆ.
ಇನ್ನು ಗಣೇಶ್ ಭೇಟಿ ಕುರಿತಂತೆ TorrentSpree ಪ್ರಥಮ್ ಅವರನ್ನು ಮಾತನಾಡಿಸಿದ್ದು, “ ನಾನು ನಟ ಭಯಂಕರ ಸಿನಿಮಾದಲ್ಲಿ P-boss ಅಲ್ಲ…ಪುಟ್ಟು ಬಾಸ್ ಅನ್ನುವ ಶಬ್ಧ ಕೇಳಿ ಖುಷಿ ಪಟ್ರು..ಯಾವಾಗ್ಲೂ ನನ್ನ ನಿನ್ನ ಬೆಳೆಸಿದ ಕನ್ನಡಿಗರೇ ನಿಜವಾದ ಬಾಸ್ ಪ್ರಥಮಾ” ಎಂದು ಬೆನ್ನು ತಟ್ಟಿದ್ದಾರೆ ಅಂದ್ರು.
ಗಣೇಶ್ ಭೇಟಿಯಿಂದ ಸಿಕ್ಕಾಪಟ್ಟೆ ಖುಷಿಯಾಗಿರುವ ಪ್ರಥಮ್ “ ಯಾರೊಬ್ಬರ shoot locationಗೆ ಗಣೇಶ್ ಅವರು ಈವರೆಗೆ ಬಂದಿಲ್ಲ. 14 ವರ್ಷದ ಅವರ ಸಿನಿ ಜರ್ನಿಯಲ್ಲಿ for the first time ನನ್ನ ನಿರ್ದೇಶನದ setಗೆ ಬಂದು ಒಂದಷ್ಟು ಕಿವಿ ಮಾತನ್ನು ಪ್ರೀತಿಯಿಂದ ಹೇಳಿದ್ದು ನಿಜಕ್ಕೂ ಖುಷಿ ತಂದಿದೆ” ಅಂದಿದ್ದಾರೆ.
ಇದೇ ವೇಳೆ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವ ಐಡಿಯಾ ಇದೆಯೇ ಅಂದ್ರೆ, ಖಂಡಿತಾ ಗಣೇಶ್ ಅವ್ರ ಜೊತೆ ಸಿನಿಮಾ ಮಾಡೋ ಯಾವ ಚರ್ಚೆಯೂ ಆಗಿಲ್ಲ. Only ನನಗೋಸ್ಕರ setಗೆ ಬಂದು ಸುಶ್ಮಿತಾ ಅವ್ರಿಗೂ ಹಾರೈಸಿದ್ದಾರೆ.
ಸುಮ್ಮನೆ ಸುಳ್ಳು ಸುದ್ಧಿ ಹಬ್ಬಿಸೋದು ಬೇಡ. ಗಣೇಶ್ ನಮ್ಮನ್ನ ಪ್ರೀತಿಸ್ತಾರೆ.ಅದಕ್ಕಾಗಿ setಗೆ ಭೇಟಿ ಕೊಟ್ಟು ಕಿವಿ ಮಾತು ಹೇಳಿದ್ದಾರೆ ಎಂದು ಮನದಾಳದ ಮಾತನ್ನು ಪ್ರಥಮ್ ಹೇಳಿದ್ರು.
ನಟ ಭಯಂಕರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದಲ್ಲಿ ಹಿರಿಯ ನಟರಾದ ಶಂಕರ್ ಅಶ್ವಥ್, ಉಮೇಶ್, ಸತ್ಯಜಿತ್ ಮತ್ತು ಲೀಲಾವತಿ ಸೇರಿದಂತೆ. ಸಾಯಿಕುಮಾರ್, ಕುರಿ ಪ್ರತಾಪ್, ಶೋಭರಾಜ್, ಬಿರಾದರ್, ನಿಹಾರಿಕ ಶಣೈ, ಚಂದನ್ ರಾಘವೇಂದ್ರ, ಅನುಪಮಾ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.
ಉದಯ್ ಮೆಹ್ತಾ ಅವರ ಕಥೆ ಈ ಚಿತ್ರಕ್ಕಿದ್ದು, ಇದೇ ಮೊದಲ ಬಾರಿಗೆ ಪ್ರಥಮ್ ನಿರ್ದೇಶನ ಮಾಡ್ತಿದ್ದಾರೆ. ದೇವ್ರಂಥಾ ಮನುಷ್ಯ ಚಿತ್ರದ ಬಳಿಕ ಸೈಲೆಂಟ್ ಆಗಿರುವ ಪ್ರಥಮ್, ನಾನು ಮಾತನಾಡಬಾರದು, ನನ್ನ ಕೆಲಸ ಮಾತನಾಡಬೇಕು ಎಂಬ ಮಾತಿನಂತೆ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ.
ಉಪೇಂದ್ರ ಅವರ ಟೈಟಲ್ ಟ್ರಾಕ್ ಹಾಡಿದ್ದು, ಮೈಸೂರಿನ ಉದ್ಯಮಿಯೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ.
ಏನಿವೇ ಪ್ರಥಮ್ ಕೆಲಸಗಳನ್ನು ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತಿದೆ, ಬಿಗ್ ಬಾಸ್ ಮನೆಯಿಂದ ಕನ್ನಡಿಗರ ಮೆಚ್ಚುಗೆ ಮತ್ತು ಪ್ರೀತಿಯನ್ನು ಪಡೆದು ಹೊರ ಬಂದ ಸಾಧಕನಿಗೆ ಒಳ್ಳೆಯದಾಗ್ಲಿ ಅನ್ನುವುದೇ ನಮ್ಮ ಹಾರೈಕೆ.
Discussion about this post