Namma Metro ಸಿಸಿ ಕ್ಯಾಮಾರಗೆ ಸ್ಟಿಕ್ಟರ್ ಅಂಟಿಸಿದವರ ಪಾಡು ಹೇಳತೀರದು
ಮೆಟ್ರೋ ರೈಲ್ ( Namma Metro ) ಅನ್ನು ಸಂಚಾರಕ್ಕೆ ಬಳಸೋ ಬದಲು ಆಟಕ್ಕೆಂದು ಬಳಸಿ ಕೀಟಲೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಮಾತ್ರವಲ್ಲದೆ ಸಾರ್ವಜನಿಕ ಸೊತ್ತುಗಳನ್ನು ಹಾನಿ ಮಾಡಿದ್ರೆ ಮುಂದೈತೆ ಮಾರಿ ಹಬ್ಬ ಅನ್ನೋದನ್ನು ಹೇಳಿದೆ.
ಮೆಟ್ರೋ Namma Metro ರೈಲಿನ ಒಳಗಡೆ ಇರುವ ಸಿಸಿ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿ ವಿಡಿಯೋ ಶೂಟ್ ಆಗದಂತೆ ಅಡ್ಡಿ ಮಾಡಿದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ : PDO ಶೃತಿ ಗೌಡ ಪ್ರಕರಣ : ಗುಂಡಿಕ್ಕಿ ಕೊಲೆಗೈದ ರಾಜೇಶ್ ಗೆ ಜೀವಾವಧಿ ಶಿಕ್ಷೆ
ನವೆಂಬರ್ 9 ರಂದು ಒಂದು ಕೋಚ್ ನಲ್ಲಿರುವ ಅಲರ್ಟ್ ಕ್ಯಾಮಾರದಲ್ಲಿ ವಿಡಿಯೋ ಚಿತ್ರೀಕರಣವಾಗದಿರುವುದು ಕ್ಯಾಬಿನ್ ನಿರ್ವಾಹಕರ ಗಮನಕ್ಕೆ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಮುಂದಿನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾಮಾರಗೆ ಸ್ಟಿಕ್ಕರ್ ಅಂಟಿಸಿರೋದು ಗೊತ್ತಾಗಿದೆ. ತಕ್ಷಣ ಸ್ಟಿಕ್ಕರ್ ಕಿತ್ತು ಹಾಕಿದ್ದಾರೆ.
ಹೀಗೆ ಕೀಟಲೆ ಮಾಡಿದವರಾರು ಎಂದು ಪರಿಶೀಲನೆ ನಡೆಸಲು ಕೋಚ್ ನಲ್ಲಿರುವ ಇತರ ಕ್ಯಾಮಾರಗಳ ಫೂಟೇಜ್ ಜಾಲಾಡಿದಾಗ ವಿದ್ಯಾರ್ಥಿಗಳು ಸ್ಟಿಕ್ಕರ್ ಅಂಟಿಸೋದು ಬೆಳಕಿಗೆ ಬಂದಿದೆ. ಹೀಗಾಗಿ ಈ ಕುರಿತಂತೆ ಮಾಹಿತಿಯನ್ನು BMRCL ಭದ್ರತಾ ತಂಡಕ್ಕೆ ರವಾನಿಸಲಾಗಿದೆ.
ಈ ಬಗ್ಗೆ BMRCL ಭದ್ರತಾ ಸಿಬ್ಬಂದಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಿ ಸಮವಸ್ತ್ರದ ಆಧಾರದ ಮೇಲೆ ಶಾಲೆಯನ್ನು ಗುರುತಿಸಿದ್ದಾರೆ. ಜೊತೆಗೆ ಇದೇ ವಿದ್ಯಾರ್ಥಿಗಳು ಎಲ್ಲಿ ರೈಲು ಹತ್ತಿದ್ದಾರೆ, ಎಲ್ಲಿ ಇಳಿದಿದ್ದಾರೆ ಅನ್ನುವುದನ್ನೂ ಪರಿಶೀಲನೆ ನಡೆಸಿದ್ದಾರೆ.
ಅದರಂತೆ ಮರು ದಿನ ಬೆಳಗ್ಗೆ ವಿದ್ಯಾರ್ಥಿಯೊಬ್ಬ ಜಯನಗರದಲ್ಲಿ ರೈಲು ಹತ್ತಿದಾಗ, ಆತನನ್ನು ವಶಕ್ಕೆ ಪಡೆದು ನಿಲ್ದಾಣದ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಈ ವೇಳೆ ವಿಚಾರಣೆ ನಡೆಸಿದಾಗ ಆತ ತಪ್ಪು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ : ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ
ಬಳಿಕ ಮೆಟ್ರೋ ಕಾಯ್ದೆಯಂತೆ ಸೆಕ್ಷನ್ 59ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಾಲಕನ ಮನೆಯವರಿಂದ ದಂಡ ಕಟ್ಟಿಸಿಕೊಳ್ಳಲಾಗಿದೆ. ಈ ಸಂಬಂಧ ಶಾಲೆಗೂ ಮಾಹಿತಿ ನೀಡಲಾಗಿದೆ.
ಅಂದ ಹಾಗೇ ನವೆಂಬರ್ 9 ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಹಸಿರು ಮಾರ್ಗದ ರೈಲಿನಲ್ಲಿ ಕೋಣಕುಂಟೆ ಕ್ರಾಸ್ ನಿಂದ ಜಯನಗರ ಕಡೆಗೆ ರೈಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮೆಟ್ರೋ ರೈಲಿನ ಪ್ರತಿಯೊಂದು ಕೋಚ್ ನಲ್ಲಿ ನಾಲ್ಕು ಸಿಸಿ ಕ್ಯಾಮಾರಗಳಿದ್ದು, ಈ ಪೈಕಿ ಬಾಗಿಲ ಬಳಿಯ ಕ್ಯಾಮಾರಗೆ ವಿದ್ಯಾರ್ಥಿ ಸ್ಟಿಕ್ಕರ್ ಅಂಟಿಸಿದ್ದ.
The duo has been booked under Section 59 of the Metro Act. The boy’s family paid a fine of Rs 500 and he was let off with a warning.
Discussion about this post