ಬೆಂಗಳೂರಿನಲ್ಲಿ ಕೆರೆ ರಾಜಕಾಲುವೆ ಉದ್ಯಾನ, ಅರಣ್ಯ ಹೀಗೆ ಒತ್ತುವರಿ ಮಾಡಿಕೊಂಡವರ ಬಗ್ಗೆ ಆಡಳಿತದ್ದು ದಿವ್ಯಮೌನ. ಜಲಕಂಠೇಶ್ವರ ದೇವಸ್ಥಾನದ ಬಗ್ಗೆ ಮಾತ್ರ ಅತೀ ಕೋಪ ಅದ್ಯಾಕೆ
ಬೆಂಗಳೂರು : ಅರ್ಚಕರು ಪೂಜೆ ಮಾಡುತ್ತಿದ್ದ ಸಂದರ್ಭದಲ್ಲೇ ಪಾದಚಾರಿ ತೆರವು ಮಾಡೋ ನೆಪದಲ್ಲಿ ಬಿಬಿಎಂಪಿ ಅಧಿಕಾರಿಗಳು ದೇವಸ್ಥಾನ ಕೆಡವಿದ ಘಟನೆ ಬೆಂಗಳೂರಿನ ಎಸ್.ಪಿ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಐತಿಹಾಸಿಕ ಜಲಕಂಠೇಶ್ವರ ದೇವಸ್ಥಾನವನ್ನು ಬಿಬಿಎಂಪಿ ಕೆಡವಿ ಹಾಕಿದ್ದು, ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರಾಂಡ್ ಬೆಂಗಳೂರು ಹೆಸರಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ದ ಜಲಕಂಠೇಶ್ವರ ದೇವಾಲಯವನ್ನು ನೆಲಕ್ಕುರುಳಿಸಲಾಗಿದೆ ದೇವಾಲಯ ನೆಲಸಮ ಮಾಡಿದ ಹಿನ್ನೇಲೆ ಸಾರ್ವಜನಿಕರಿಂದ ತೀವ್ರ ಅಕ್ರೋಶ ವ್ಯಕ್ತವಾಗಿದ್ದು, ಮತ್ತೆ ದೇವಾಲಯ ನಿರ್ಮಿಸಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೇವಸ್ಥಾನ ಉರುಳಿ ಬೀಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಪರಾರಿಯಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ದೇವಾಲಯ ಮರು ನಿರ್ಮಾಣ ಮಾಡಿಕೊಡುವ ಭರವಸೆ ನೀಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಐತಿಹಾಸಿಕ ಜಲಕಂಠೇಶ್ವರ ದೇಗುಲದ ಗೋಡೆ ಒಡೆದಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರ ಜೊತೆ ಮಾತುಕತೆ ನಡೆಸಿ ಅವರಿಂದಲೇ ಗೋಡೆ ಕಟ್ಟಿಸೋ ಕೆಲಸ ಮಾಡಿಸುತ್ತೇನೆ ಅಂದಿದ್ದಾರೆ.
Discussion about this post