ಟಿಟಿಡಿ ಅಧಿಕಾರಿಗಳ ಕೇರ್ ಲೆಸ್ ಅದೆಷ್ಟಿದೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಭಕ್ತರ ಭಾವನೆಗಳಿಗೆ ಇಲ್ಲಿ ಬೆಲೆಯೇ ಇಲ್ಲ ( Vastralankara seva)
ತಿರುಪತಿ : ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ( Vastralankara seva ) ಸೇವೆ ಮಾಡಿಸಲು ನಿರಾಕರಿಸಿದ ಟಿಟಿಡಿ ನಡೆಯನ್ನು ಖಂಡಿಸಿ ಸೇಲಂ ಜಿಲ್ಲಾ ಗ್ರಾಹಕರ ನ್ಯಾಯಾಲಯ 50 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಮಾತ್ರವಲ್ಲದೆ 1 ವರ್ಷದೊಳಗೆ ಭಕ್ತರಿಗೆ ವಸ್ತ್ರಾಲಂಕಾರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಿದೆ.
ಕೆ ಆರ್ ಹರಿಭಾಸ್ಕರ್ ಅನ್ನುವವವರು 16 ವರ್ಷಗಳ ಹಿಂದೆ ಅಂದ್ರೆ 2006ರಲ್ಲಿ 12,250 ರೂಪಾಯಿ ಪಾವತಿಸಿ ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆಯನ್ನು ಬುಕ್ ಮಾಡಿದ್ದರು. 2020ರ ಜುಲೈ 10ಕ್ಕೆ ಸೇವೆ ದಿನಾಂಕವನ್ನು ಟಿಟಿಡಿ ನಿಗದಿಗೊಳಿಸಿತ್ತು. ಆದರೆ 14 ವರ್ಷ ಕಾದ ಬಳಿಕ ಇನ್ನೇನು ವಸ್ತ್ರಾಲಂಕಾರ ಸೇವೆ ಸಲ್ಲಿಸೋ ದಿನ ಹತ್ತಿರ ಬಂತು ಅಂದುಕೊಂಡರೆ ಕೊರೋನಾ ಮಹಾಮಾರಿ ವಕ್ಕರಿಸಿತ್ತು.
Read More : KGF-inspired : ಸಿನಿಮಾ ಪ್ರೇರಣೆಯಿಂದ ಸರಣಿ ಕೊಲೆ : ಸಮಾಜದ ಸ್ವಾಸ್ಥ್ಯ ಕೆಡಿಸುವ ಚಿತ್ರಗಳ ಬಗ್ಗೆ ಇರಲಿ ಎಚ್ಚರ
ಕೊರೋನಾ ಕಾರಣದಿಂದ ದೇವಾಲಯದಲ್ಲಿ ಎಲ್ಲಾ ವಿಶೇಷ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪೂಜೆಗೆ ಬೇರೆ ದಿನಾಂಕ ನಿಗದಿ ಮಾಡಿಕೊಡುವಂತೆ ಹರಿ ಭಾಸ್ಕರ್ ಟಿಟಿಡಿಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ಟಿಟಿಡಿ, ನೀವು ಇದೇ ಮೊತ್ತದಲ್ಲಿ ವಿಶೇಷ ವಿಐಪಿ ದರ್ಶನ ಪಡೆಯಿರಿ ಅಥವಾ ಮೊತ್ತ ಮರುಪಾವತಿಗೆ ಅರ್ಜಿ ಸಲ್ಲಿಸಿ ಅಂದಿತು.
ಟಿಟಿಡಿ ನಡೆಯಿಂದ ಬೇಸರಗೊಂಡ ಹರಿಭಾಸ್ಕರ್ ಗ್ರಾಹಕರ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ನಾನು ದೇವರಿಗೆ ಹರಕೆ ಹೊತ್ತಿದ್ದೇನೆ, ಅದಕ್ಕಾಗಿ 16 ವರ್ಷ ಕಾದಿದ್ದೇನೆ. ಈಗ ಸೇವೆ ಸಲ್ಲಿಸಲು ಅವಕಾಶವಿಲ್ಲ ಅನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಹರಿಭಾಸ್ಕರ್ ವಾದ ಪುರಸ್ಕರಿಸಿರುವ ಗ್ರಾಹಕರ ನ್ಯಾಯಾಲಯ, 2006ರಲ್ಲಿ ಪಾವತಿಸಿದ ಮೊತ್ತಕ್ಕೆ ಪ್ರತೀ ವರ್ಷ ಶೇ 24 ಬಡ್ಡಿ ಸೇರಿ ಒಟ್ಟು 50 ಲಕ್ಷ ಮೊತ್ತವನ್ನು ಹರಿಭಾಸ್ಕರ್ ಅವರಿಗೆ ಪಾವತಿಸಬೇಕು ಮತ್ತು ಒಂದು ವರ್ಷದ ಒಳಗಾಗಿ ಹರಿಭಾಸ್ಕರ್ ಅವರಿಗೆ ವಸ್ತ್ರಾಲಂಕಾರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.
Discussion about this post