ಕಳೆದ 25 ವರ್ಷಗಳಿಂದ ಬಲಗೈಯಲ್ಲಿ ಬೆರಳುಗಳಿಲ್ಲದ ಕೈ ರಾಷ್ಟ್ರಧ್ವಜವನ್ನು ಹಾರಿಸೋ ಕೆಲಸ ಮಾಡುತ್ತಿದೆ (Independence day)
ಹಲವಾರು ಭಾಷೆ, ಧರ್ಮ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವ ಭಾರತ ಒಂದೇ, ಭಾರತೀಯರು ನಾವೆಲ್ಲರೂ ಒಂದೇ ಎಂದು ಸಾರುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನ ಮಹತ್ವದ್ದಾಗಿದೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ನಮ್ಮ ದೇಶಕ್ಕೆ ಇತರ ದೇಶಗಳು ತೋರುತ್ತಿರುವ ಗೌರವ ಇವೆಲ್ಲವೂ ಸುಮ್ಮನೆ ದಕ್ಕಿಲ್ಲ. ಇದರ ಹಿಂದೆ ಅನೇಕರ ತ್ಯಾಗ, ಬಲಿದಾನ, ಹೋರಾಟದ ಫಲವಿದೆ. (Independence day)
ಅದರಲ್ಲೂ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿರುವ ನಮಗೆ ಇದು ಮಹತ್ವದ ದಿನವಾಗಿದೆ. ಈ ನಡುವೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮೇಲೆ ಪ್ರತಿ ನಿತ್ಯ ರಾಷ್ಟ್ರಧ್ವಜ ಹಾರಾಡುತ್ತಿರುವುದನ್ನು ನಾವು ಗಮನಿಸಿರುತ್ತೇವೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಬದಲಾದಂತೆ ರಾಷ್ಟ್ರಧ್ವಜರೋಹಣ ಮತ್ತು ಅವರೋಹಣ ಸಮಯದಲ್ಲೂ ವ್ಯತ್ಯಾಸವಿರುತ್ತದೆ.
ಅಂದ ಹಾಗೇ ಶಕ್ತಿ ಸೌಧದ ಮೇಲೆ ನಿತ್ಯ ರಾಷ್ಟ್ರಧ್ವಜವನ್ನು ಬಲಗೈಯಲ್ಲಿ ಬೆರಳುಗಳಿಲ್ಲದ ವ್ಯಕ್ತಿಯೊಬ್ಬರು ಹಾರಿಸುತ್ತಾರೆ. ಖಂಡಿತಾ, ಬೆಂಗಳೂರಿನ ಅಂಥೋನಿ ದಾಸ್ ಬಾಲ್ಯದಲ್ಲಿ ನಡೆದ ಅಪಘಾತವೊಂದರಲ್ಲಿ ಬಲ ಕೈಯ ಬೆರಳುಗಳನ್ನು ಕಳೆದುಕೊಂಡಿದ್ದರು. ಆದಾದ ಬಳಿಕ ಅವರ ಜೀವನ ಅಂಗೈನಿಂದಲೇ ಸಾಗಿತ್ತು.
ಇದಾದ ಬಳಿರ ಡಿ ಗ್ರೂಪ್ ನೌಕರರಾಗಿ ಸೇರಿಕೊಂಡ ಅಂಥೋನಿ, ಕಳೆದ 25 ವರ್ಷಗಳಿಂದ ವಿಧಾನಸೌಧದಲ್ಲಿ ರಾಷ್ಟ್ರಧ್ವಜವನ್ನು ನಿತ್ಯ ಹಾರಿಸುತ್ತಿರುವ ಇವರು ನಿತ್ಯ ರಾಷ್ಟ್ರೀಯ ಹಬ್ಬ ಆಚರಿಸುತ್ತಾರೆ.ವಿಧಾನಸೌಧದ ಮೇಲೆ ನಿತ್ಯ ಧ್ವಜ ಹಾರಿಸಲು ಅವಕಾಶ ಸಿಕ್ಕಿದೆ ಅಂದ್ರೆ ಅಂಥೋನಿಯವರ ಪೂರ್ವಜನ್ಮದ ಪುಣ್ಯವೇ ಸರಿ. ಇದೀಗ 75ನೇ ಸಂಭ್ರಮಕ್ಕೂ ಅಂಥೋನಿಯವರೇ ಸಾಕ್ಷಿಯಾಗಲಿದ್ದಾರೆ.
ಹಾಗಂತ ತಮ್ಮ ಕೆಲಸದ ಶಿಫ್ಟ್ನ ಪ್ರಕಾರ ರಾಷ್ಟ್ರಧ್ವಜ ಹಾರಿಸುವ ಹಾಗಿಲ್ಲ. ಸೂರ್ಯೋದಯದ ಸಮಯದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು, ಸೂರ್ಯಾಸ್ತದ ಹೊತ್ತಿನಲ್ಲಿ ಧ್ವಜವನ್ನು ಇಳಿಸಿ, ನಿಯಮದಂತೆ ಮಡಚಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. ರಾಜ್ಯ ಅಥಾವ ಕೇಂದ್ರ ಸರ್ಕಾರ ಶೋಕ ದಿನ ಘೋಷಿಸಿದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಹೀಗೆ ರಾಷ್ಟ್ರಧ್ವಜ ಹಾರಿಸುವ ಮತ್ತು ಇಳಿಸುವ ಕಾರ್ಯಕ್ಕೆ ಸಿಬ್ಬಂದಿಗೆ 1996ರಲ್ಲಿ ಒಂದು ರೂಪಾಯಿ ಗೌರವ ಧನ ನೀಡಲಾಗುತ್ತಿತ್ತು. ಇದೀಗ 50 ರೂಪಾಯಿ ಗೌರವಧನ ನೀಡಲಾಗುತ್ತಿದೆ.
ಅಂಧೋನಿಯವರ ಜೊತೆಗೆ ಇನ್ನೊಂದಿಷ್ಟು ಡಿ ಗ್ರೂಪ್ ನೌಕರರಿದ್ದು ಅವರು ಕೂಡಾ ಇದೇ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. 3 ಪಾಳಿಯಲ್ಲಿ ಕೆಲಸ ಮಾಡುವ ಇವರು ನಿಯಮದಂತೆ ಧ್ವ ಜ ಹಾರಿಸುವ ಕಾರ್ಯ ಮಾಡುತ್ತಾರೆ. ಈ ವೇಳೆ ವಿಧಾನಸೌಧದಲ್ಲಿರುವ ಪೊಲೀಸ್ ಸಿಬ್ಬಂದಿ ಸಹಕಾರ ನೀಡುತ್ತಾರೆ.
Discussion about this post