ಕ್ಯಾನ್ಸರ್ ತರುವ ಪೌಡರ್ ಮಾರಿದ್ದ Johnson and Johnson ಕಂಪನಿ ಬಾಗಿಲು ಹಾಕುವುದೊಂದೇ ಬಾಕಿ
2023ರಲ್ಲಿ ಜಗತ್ತಿನಾದ್ಯಂತ ಟಾಲ್ಕ್ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸುವುದಾಗಿ ಜಾನ್ಸನ್ ಮತ್ತು ಜಾನ್ಸನ್ ( Johnson and Johnson)ಘೋಷಿಸಿದೆ. ಅಮೆರಿಕದಲ್ಲಿ ಪೌಡರ್ ಮಾರಾಟವನ್ನು ನಿಲ್ಲಿಸಿದ ಎರಡು ವರ್ಷದ ನಂತರ ಜಾನ್ಸನ್ ಮತ್ತು ಜಾನ್ಸನ್ ಈ ನಿರ್ಧಾರ ಪ್ರಕಟಿಸಿದೆ.
ಹಾಗೇ ನೋಡಿದರೆ ಒಂದು ಕಾಲದಲ್ಲಿ ಮಕ್ಕಳಿರುವ ಮನೆಯಲ್ಲೇ ಇರಲೇಬೇಕಿದ್ದ ಜಾನ್ಸನ್ & ಜಾನ್ಸನ್ ಉತ್ಪನ್ನಗಳನ್ನು ಖರೀದಿಸುವವರೇ ಇಲ್ಲದಂತಾಗಿದೆ. ಕಂಪನಿಯ ಕೆಲ ಉತ್ಪನ್ನಗಳು ಕ್ಯಾನ್ಸರ್ ಕಾರಕ ಎಂದು ಆರೋಪ ಕೇಳಿ ಬಂದ ಬಳಿಕ ಜನ ಜಾನ್ಸನ್ & ಜಾನ್ಸನ್ ಪ್ರಾಡಕ್ಟ್ ಗಳಿಂದ ದೂರ ಸರಿದಿದ್ದರು.
ಇದನ್ನು ಓದಿ : Praveen nettar ಕೊಲೆ ರಹಸ್ಯ : ಸಭ್ಯಸ್ಥರೆನಿಸಿಕೊಂಡವರೇ ಊರಿನ ನೆಮ್ಮದಿಗೆ ಕೊಳ್ಳಿ ಇಟ್ರಲ್ಲ
ಇದರ ಬದಲಾಗಿ ಜೋಳದ ಗಂಜಿ ಆಧಾರಿತ ಪೌಡರ್ ಉತ್ಪಾದನೆ ಮಾಡುವುದಾಗಿ ಹೇಳಿರುವ ಕಂಪನಿ ವಿವಿಧ ರಾಷ್ಟ್ರಗಳಲ್ಲಿ ಈಗಾಗಲೇ ಜೋಳದ ಗಂಜಿಯ ಪೌಡರ್ ಅನ್ನು ಮಾರಾಟ ಮಾಡುತ್ತಿದೆ.
ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಇದೆ ಎಂದು ಯುಎಸ್ ನಿಯಂತ್ರಕರು ಈ ಹಿಂದೆಯೇ ತಿಳಿಸಿದ್ದರು. ಇದಾದ ಬಳಿಕ ಅಮೆರಿಕ ಹಾಗೂ ಕೆನಡದಲ್ಲಿ ಬೇಡಿಕೆ ಕಡಿಮೆಯಾಗಿತ್ತು. ಜೊತೆಗೆ ಕಂಪನಿ ವಿರುದ್ಧ ಸಾವಿರಾರು ಪ್ರಕರಣಗಳು ಕೂಡಾ ದಾಖಲಾಗಿತ್ತು. ಒಂದು ಪ್ರಕರಣದಲ್ಲಿ 22 ಮಹಿಳೆಯರಿಗೆ 2 ಬಿಲಿಯನ್ ಗಿಂತಲೂ ಹೆಚ್ಚಿನ ಪರಿಹಾರ ಪಾವತಿಸುವಂತೆ ಕೋರ್ಟ್ ಸೂಚಿಸಿತ್ತು. Johnson and Johnson ಕಂಪನಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಟಾಲ್ಕ್ ಬೇಬಿ ಪೌಡರ್ ಸುರಕ್ಷಿತ ಹಾಗೂ ಅದರಲ್ಲಿ asbestos ಅಂಶಗಳಿಲ್ಲ ಎಂದು ಹೇಳಿದ್ದು. ಹಾಗಿದ್ದರೂ ಜನ ನಂಬಲು ಸಿದ್ದರಿರಲಿಲ್ಲ.
Discussion about this post