ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ಎದುರಿಗೆ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿಗಳಿತ್ತು.
ಒಂದು ವೇಳೆ ಸಿದ್ದರಾಮಯ್ಯ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದರೆ ಪ್ರತಾಪ್ ಸಿಂಹ ಮತ್ತೆ ಮಾಧ್ಯಮದತ್ತ ಮುಖ ಮಾಡಬೇಕಾಗಿತ್ತು. ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ ಒಪ್ಪಂದದಂತೆ ಜೆಡಿಎಸ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುತ್ತದೆ. ಆ ವೇಳೆ ಮೋದಿ ಬಂದು ಪ್ರತಾಪ್ ಸಿಂಹ ಪ್ರಚಾರ ಮಾಡಿದ್ದರೂ ಪ್ರಯೋಜನವಿರಲಿಲ್ಲ.
ಆದರೆ ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಾಪ್ ಸಿಂಹ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ತನ್ನ ತವರಿನಿಂದಲೇ ಕಣಕ್ಕಿಳಿಯುವಂತೆ ಹೈಕಮಾಂಡ್ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಒತ್ತಾಯಿಸಿದ್ದರು. ಒತ್ತಡಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ.
ಅಲ್ಲಿಗೆ ಪ್ರತಾಪ್ ಸಿಂಹ ಅವರು ಈ ಬಾರಿಯೂ ಲೋಕಸಭೆ ಪ್ರವೇಶಿಸುವ ಲಕ್ಷಣಗಳಿದೆ. ಗೊತ್ತು ಗುರಿಯಿಲ್ಲದೆ ಅಂದು ಮಾತನಾಡಿದ್ದ ಪ್ರತಾಪ್ ಸಿಂಹ ನನ್ನ ಅವಧಿ ಮುಗಿಯುವುದರೊಳಗೆ ಕೊಡಗಿಗೆ ರೈಲು ಬಿಡುತ್ತೇನೆ ಎಂದಿದ್ದರು. ಕೊಡಗು ಭಾವನೆ ಅರಿತುಕೊಳ್ಳದೆ ನೀಡಿದ ಹೇಳಿಕೆ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ.
Discussion about this post