ಒತ್ತಡದ ಜೀವನ, ಬದಲಾದ ಆಹಾರ ಶೈಲಿ ಹೀಗಾಗಿ ಅಧಿಕ ರಕ್ತದೊತ್ತಡ ಅಥವಾ ಬಿಪಿ ಅನ್ನುವುದು ಸಾಮಾನ್ಯವಾಗಿದೆ. ಬಿಪಿ ಬಂತು ಎಂದು ತಲೆ ಕೆಡಿಸಿಕೊಂಡ್ರೆ ಬಿಪಿ ( High blood pressure) ಮತ್ತಷ್ಟು ಹೆಚ್ಚಾಗುತ್ತದೆ. ಬದಲಾಗಿ ಓ ಮನಸ್ಸೇ ರಿಲ್ಯಾಕ್ಸ್ ಫ್ಲೀಸ್ ಅಂತಾ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ. ಹಾಗಾದ್ರೆ ರಕ್ತದೊತ್ತಡ ನಿಯಂತ್ರಿಸಿಕೊಳ್ಳುವುದು ಹೇಗೆ ಇಲ್ಲಿದೆ ಸರಳ ಸೂತ್ರಗಳು
ಪ್ರತೀ ಮೂರು ತಿಂಗಳಿಗೊಮ್ಮೆ ಬಿಪಿಯನ್ನು ( High blood pressure) ಪರೀಕ್ಷಿಸಿಕೊಳ್ಳುವುದು ಉತ್ತಮ. ಹಾಗಂತ ಮೂರು ವಾರಕ್ಕೊಮ್ಮೆ ಬಿಪಿ ಪರೀಕ್ಷೆ ಮಾಡಿಸಬೇಡಿ. ಗಂಟೆಯಿಂದ ಗಂಟೆಗೆ ಬಿಪಿಯಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಒಂದಿಷ್ಟು ಏರು ಪೇರಾದ್ರೆ ನೀವು ಆತಂಕ ಪಡ್ತೀರಿ. ಹಾಗೇ ಮಾಡಬೇಡಿ. ನಿಮ್ಮ ವೈದ್ಯರ ಮೇಲೆ ನಂಬಿಕೆ ಇಡಿ. ವೈದ್ಯರು ಹೇಳದ ಹೊರತು ಮಾತ್ರೆಗಳನ್ನು ನಿಲ್ಲಿಸಬೇಡಿ.
4 ರಿಂದ 5 ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಪ್ರತೀ ನಿತ್ಯ ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ
ಸಮ ಪ್ರಮಾಣದಲ್ಲಿ ಬೀಟ್ ರೂಟ್, ಕ್ಯಾರೆಟ್, ಸಣ್ಣದೊಂದು ಹಸಿ ಶುಂಠಿ ಸೇರಿ ಒಂದು ಮಧ್ಯಮ ಗ್ಲಾಸ್ ನಷ್ಟು ಜ್ಯೂಸ್ ಮಾಡಿ ನಿತ್ಯ ಕುಡಿಯುವ ಮೂಲಕ ಮನೆಯಲ್ಲೇ ರಕ್ತದೊತ್ತಡವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು
ಬೀಟ್ ರೂಟ್, ಕ್ಯಾರೆಟ್, ಸಿಹಿಗುಂಬಳ ಸೇರಿ ಸಲಾಡ್ ಮಾಡಿ ನಿತ್ಯ ಸೇವಿಸುವ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು
ಪೇರಲೆ ಹಣ್ಣು, ಬಟರ್ ಫ್ರೂಟ್, ಬಾಳೆ ಹಣ್ಣು ಸೇರಿಸಿ ಹಣ್ಣಿನ ಸಲಾಡ್ ಅನ್ನು ದಿನ ನಿತ್ಯ ತಿಂದರೂ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ
ಪೇರಲೆಹಣ್ಣಿಗೆ ರಕ್ತದೊತ್ತಡ ನಿಯಂತ್ರಿಸುವ ಸಾಮರ್ಥ್ಯವಿದೆ. ಹೀಗಾಗಿ ಪೇರಲೆಹಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.
ಈ ಪೈಕಿ ಯಾವುದಾದರೊಂದು ಕ್ರಮವನ್ನು ರೂಢಿಸಿಕೊಂಡರೆ ಸಾಕು. ಇದರೊಂದಿಗೆ ವಾಕಿಂಗ್, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಹಾಗೂ ಒಂದಿಷ್ಟು ದೈಹಿಕ ಕಸರತ್ತು ಮಾಡುವುದು ಇನ್ನೂ ಉತ್ತಮ. ಆಹಾರದಲ್ಲಿ ಆದಷ್ಟು ಉಪ್ಪು ಕಡಿಮೆ ಮಾಡಿ. ಬೇಕರಿ ಐಟಂಗಳಿಂದ ದೂರವಿರಿ. ಅದರಲ್ಲೂ ಪ್ರೋಜನ್ ಆಹಾರ ಪದಾರ್ಥಗಳ ಸಹವಾಸ ಮಾಡಬೇಡಿ. ಸಾಧ್ಯವಾದಷ್ಟು ಮನೆ ಆಹಾರ ಸೇವಿಸುವುದನ್ನು ರೂಡಿಸಿಕೊಳ್ಳಿ.
ಇದನ್ನೂ ಓದಿ : Kumaraswamy : ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದ್ರ : ಸಿದ್ದು ಲೇವಡಿ ಮಾಡಿದ HDK
Discussion about this post