ತಂದೆಯ ಅಂತ್ಯಕ್ರಿಯೆ ಸಲುವಾಗಿ ಹೊರಟವರಿಗೆ ದಾರಿ ಮಧ್ಯದಲ್ಲಿ ಸಿಕ್ಕಿದ್ದು ತಾಯಿಯ ಸಾವಿನ ಸುದ್ದಿ (Udupi news)
ಉಡುಪಿ : ಪತಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತ್ನಿಯೂ ಮೃತಪಟ್ಟ ಘಟನೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ಈ ಘಟನೆ ನಡೆದಿದೆ. (Udupi news) ಮೃತರನ್ನು ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ರೇವತಿ ಶೆಟ್ಟಿ (75) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : Gaalipata2 : ಗಾಳಿಪಟ 2 ವಿತರಿಸುವ ಹಕ್ಕು ಪಡೆದ ಕೆವಿಎನ್ ಸಂಸ್ಥೆ
ಕೃಷ್ಣ ಅವರು ವಯೋಸಹಜ ಕಾರಣದಿಂದ ಆಗಸ್ಟ್ 2ರ ಬೆಳಗ್ಗೆ ಮೃತಪಟ್ಟಿದ್ದಾರೆ. (Udupi news) ರೇವತಿಯವರು ಆಗಸ್ಟ್ 3ರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಐದು ದಶಕಗಳ ಕಾಲ ಒಟ್ಟಿಗೇ ಜೀವಿಸಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆಯಿಂದ ಇದೀಗ ಇಡೀ ಗ್ರಾಮದಲ್ಲಿ ಮೌನ ನೆಲೆಸಿದೆ.
ಇದನ್ನೂ ಓದಿ : Ayman al Zawahir : ಹಿಜಾಬ್ ವಿವಾದಕ್ಕೆ ಬೆಂಬಲವಾಗಿದ್ದ ಅಲ್ ಖೈದಾ ಬಾಸ್ ಜವಾಹಿರಿ ಫಿನಿಶ್
ಕೃಷ್ಣ ಮತ್ತು ರೇವತಿಯ ಮುಂಬೈ ಸೇರಿದಂತೆ ಬೇರೆ ಬೇರೆ ಸ್ಥಳಗಳಲ್ಲಿ ವಾಸವಾಗಿದ್ದಾರೆ. ತಂದೆಯ ಸಾವಿನ ಸುದ್ದಿಯ ಬೆನ್ನಲ್ಲೇ ಅಂತಿಮ ವಿಧಿ ವಿಧಾನ ಸಲುವಾಗಿ ಅಲ್ಲಿಂದ ಹೊರಟಿದ್ದರು. ಅವರೆಲ್ಲರೂ ಮನೆ ತಲುಪುವ ಹೊತ್ತಿಗೆ ತಾಯಿಯ ಸಾವಿನ ಸುದ್ದಿಯೂ ಬಂದಿದೆ.
ಹೀಗಾಗಿ ಇಬ್ಬರ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳನ್ನು ಮಕ್ಕಳು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.
Discussion about this post