ನಳಿನ್ ಕುಮಾರ್ ಅವರಿಂದ ತೆರವಾಗಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಅವರು ಬರಲಿದ್ದಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ನಡುವೆ ಇಬ್ಬರೂ Amit shah ಕಚೇರಿಗೆ ಭೇಟಿ ಕೊಟ್ಟಿದ್ದಾರೆ
ನವದೆಹಲಿ : ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಕರಾವಳಿ ಅದೆಷ್ಟು ತಲ್ಲಣಗೊಂಡಿದೆಯೋ ಬಿಜೆಪಿ ನಾಯಕರು ಕೂಡಾ ತಲ್ಲಣಗೊಂಡಿದ್ದಾರೆ. ಕೇವಲ ಕಾರ್ಯಕರ್ತರು ಮಾತ್ರ ಆಕ್ರೋಶ ಹೊರ ಹಾಕಿದ್ರೆ ಹೇಗೋ ಸರ್ಕಸ್ ಮಾಡಬಹುದಿತ್ತು. ಮತ್ತೊಂದು ಕಡೆ ಕೇಂದ್ರದ ವರಿಷ್ಠರು (Amit shah) ಕೂಡಾ ರಾಜ್ಯ ನಾಯಕರ ಮೇಲೆ ಗರಂ ಆಗಿದ್ದಾರೆ.
ಈ ನಡುವೆ ನಿನ್ನೆಯಷ್ಟೇ ಗೃಹ ಸಚಿವ ಅಮಿತ್ ಶಾ (Amit shah) ಅವರನ್ನು ಭೇಟಿಯಾಗಿದ್ದ ಸಚಿವೆ ಶೋಭಾ ಕರಂದ್ಲಾಜೆ ಕರಾವಳಿಯ ಪರಿಸ್ಥಿತಿ ಕುರಿತಂತೆ ವಿವರಣೆ ನೀಡಿದ್ದರು. ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆ ನಡೆದಿದೆ ಅನ್ನಲಾಗಿದೆ. ಜೊತೆಗೆ ಪ್ರವೀಣ್ ಹತ್ಯೆ ಸೂಕ್ತ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶೋಭಾ ಅವರು ಗೃಹ ಸಚಿವರೊಂದಿಗೆ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡಾ ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ.
ಶೋಭಾ ಅವರು ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸಂಸದ ನಳಿನ್ ಕುಮಾರ್ ಕಟೀಲು ಗೃಹ ಸಚಿವಾಲಯಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಪ್ರವೀಣ್ ಹತ್ಯೆ ಪ್ರಕರಣವನ್ನು NIA ಗೆ ವಹಿಸಿರುವ ಬಗ್ಗೆ ಧನ್ಯವಾದ ಸಲ್ಲಿಸಿದ್ದಾರೆ ಅನ್ನಲಾಗಿದೆ.
ಇದನ್ನೂ ಓದಿ : siddaramaiah birthday : ಪ್ರವೀಣನ ಮನೆಯವರಿಗೆ ಪರಿಹಾರ ಕೊಟ್ಟಿದ್ದು ಸರಿ : ಬೊಮ್ಮಾಯಿ ನಡೆ ಒಪ್ಪಿಕೊಂಡ ಸಿದ್ದರಾಮಯ್ಯ
ಆದರೆ ಕರಾವಳಿ ಭಾಗದ ಇಬ್ಬರು ಸಂಸದರು back to back ಗೃಹ ಸಚಿವರನ್ನು ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ನಳಿನ್ ಕುಮಾರ್ ಕಾರ್ಯವೈಖರಿ ಕುರಿತಂತೆ ವರದಿಯೊಂದನ್ನು ಅಮಿತ್ ಶಾ ತರಿಸಿಕೊಂಡಿದ್ದಾರೆ ಅನ್ನಲಾಗಿದೆ.
ಮತ್ತೊಂದು ಕಡೆ ನಳಿನ್ ಕುಮಾರ್ ಅವರಿಂದ ತೆರವಾಗಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಕರೆ ತರುವ ಸಾಧ್ಯತೆಗಳಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ.ರಾಜ್ಯ ರಾಜಕೀಯದಿಂದ ದೂರ ಇರುವಂತೆ ಶೋಭಾ ಅವರಿಗೆ ಈ ಹಿಂದೆ ವರಿಷ್ಠರು ಸೂಚಿಸಿದ್ದರು. ಜೊತೆಗೆ ನಾಯಕತ್ವದ ನಿಟ್ಟಿನಲ್ಲಿ ಕೆಲವೊಂದು ಟಾಸ್ಕ್ ಗಳನ್ನು ಅವರಿಗೆ ನೀಡಲಾಗಿತ್ತು. ಕೊಟ್ಟ ಎಲ್ಲಾ ಟಾಸ್ಕ್ ಗಳಲ್ಲೂ ಶೋಭಾ ಅವರು ಗೆದ್ದು ಬೀಗಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಇಬ್ಬರು ಸಂಸದರು ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
Discussion about this post