ಸೈಕಲ್ ಹತ್ತಿ ಪಕ್ಷ ಕಟ್ಟಿದ ನಾಯಕನಿಗೆ ದೊಡ್ಡ ಪಟ ಕೊಡಲು ಬಿಜೆಪಿ ಸಿದ್ದವಾಗಿದೆ.(Karnataka politics) ಆದರೆ ಅವರು ಒಪ್ಪಿಕೊಳ್ಳುವುದೇ ಅನುಮಾನವಂತೆ
ಬೆಂಗಳೂರು : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯಲ್ಲಿ (Karnataka politics) ಸಕ್ರಿಯವಾಗಿರುವುದಾಗಿ ಹೇಳಿದ್ದಾರೆ. ಆದರೆ ರಾಜ್ಯ ನಾಯಕರು ಅದೆಷ್ಟರ ಮಟ್ಟಿಗೆ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುತ್ತಾರೆ ಅನ್ನುವುದು ಗೊತ್ತಿಲ್ಲ. ಈಗಾಗಲೇ ಯಡಿಯೂರಪ್ಪ ಬೆಂಬಲಿಗ ಶಾಸಕರನ್ನು ಯಶಸ್ವಿಯಾಗಿ ಸೈಡಿಗೆ ಸರಿಸಲಾಗಿದೆ. ಮಾತ್ರವಲ್ಲದೆ ರಾಜ್ಯ ಬಿಜೆಪಿ ಸಮನ್ವಯತೆ ಇಲ್ಲದೆ ಒದ್ದಾಡುತ್ತಿದೆ. ಮೂಲ ಮತ್ತು ವಲಸೆ ಕಿತ್ತಾಟ ಇನ್ನೂ ಜೀವಂತವಿದೆ.ಆದರೆ ರಾಷ್ಟ್ರೀಯ ಮಟ್ಟದಲ್ಲಿ ಯಡಿಯೂರಪ್ಪ ಖದರ್ ಇನ್ನೂ ಇದೆ.
ಹೀಗಾಗಿಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. (Karnataka politics) ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಅವರನ್ನು ರಾಜ್ಯಪಾಲರನ್ನಾಗಿ ಕಳುಹಿಸಿರುವ ಸಾಧ್ಯತೆಗಳಿದೆ.
ಇದನ್ನೂ ಓದಿ : Talakala swamiji : ತಲಕಳದ ಶ್ರೀ ಕೃಷ್ಣ ದೇವಿ ಪ್ರಸಾದ ತೀರ್ಥ ಸ್ವಾಮೀಜಿ ಆತ್ಮಹತ್ಯೆ
ಆದರೆ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪ ಒಪ್ಪಿಕೊಳ್ಳುವುದು ಅನುಮಾನ ಅನ್ನಲಾಗಿದೆ. ಈ ಹಿಂದೆಯೂ ಅವರಿಗೆ ರಾಜ್ಯಪಾಲರಾಗುವ ಅವಕಾಶ ಬಂದಿತ್ತು. ಆದರೆ ಅವರು ಅದಕ್ಕೆ ಸಮ್ಮಿತಿಸಿರಲಿಲ್ಲ. ಈ ಕಾರಣದಿಂದ ಈ ಬಾರಿಯೂ ರಾಜ್ಯಪಾಲರಾಗುವ ಆಫರ್ ತಿರಸ್ಕರಿಸುತ್ತಾರೆ ಅನ್ನಲಾಗಿದೆ. ಅವರ ಫೋಕಸ್ ಏನಿದ್ರೂ ಮಕ್ಕಳನ್ನು ರಾಜಕೀಯವಾಗಿ ಸದೃಢಗೊಳಿಸುವುದಾಗಿದೆ. ಒಂದು ವೇಳೆ ರಾಜ್ಯಪಾಲರಿಗೆ ಹೋದರೆ ರಾಜ್ಯದಲ್ಲಿ ಹಿಡಿತ ತಪ್ಪುವ ಆತಂಕ ಯಡಿಯೂರಪ್ಪ ಅವರದ್ದು.
ರಾಜ್ಯ ಬಿಜೆಪಿಗೆ ನಾನೇ ಹೈಕಮಾಂಡ್ ಅನ್ನುವುದನ್ನು ಯಡಿಯೂರಪ್ಪ ಮತ್ತೊಮ್ಮೆ ಸಾರಿದ್ದಾರಾ
ಡಿಎನ್ಎ ಆಧಾರದಲ್ಲಿ ಬಿಜೆಪಿಯಿಂದ ಮೊದಲ ಟಿಕೆಟ್ ಘೋಷಣೆ : ಶಿಕಾರಿಪುರಕ್ಕೆ ವಿಜಯೇಂದ್ರ
ಯಾರು ಯಾವ ಕ್ಷೇತ್ರಕ್ಕೆ ನಿಲ್ಲಬೇಕು ಅನ್ನುವುದನ್ನು ಪಕ್ಷಗಳು ಘೋಷಿಸುವುದು ಸಂಪ್ರದಾಯ. ಆದರೆ ಒಂದು ಹೆಜ್ಜೆ ಮುಂದೆ ಹೋಗಿರುವ ಯಡಿಯೂರಪ್ಪ ಶಿಕಾರಿಪುರದಲ್ಲಿ ತಮ್ಮ ಮಗನಿಗೆ ಟಿಕೆಟ್ ಖಚಿತ ಎಂದು ಘೋಷಿಸಿದ್ದಾರೆ.
ಬೆಂಗಳೂರು : ಅನಂತಕುಮಾರ್ ನಿಧನ ಬಳಿಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಡಿಎನ್ಎ ಅಡ್ಡಿ ಬಂದಿತ್ತು. ಆದರೆ ಅದು ಕೇವಲ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತ. ಉಳಿದ ಸಾಕಷ್ಟು ಕ್ಷೇತ್ರಗಳಲ್ಲಿ ಡಿಎನ್ಎಗೆ ಬೆಲೆ ನೀಡಲಾಗಿದೆ.
ಇದನ್ನೂ ಓದಿ : Dio bike theft : ಡಿಯೋ ಬೈಕ್ ಕದಿಯಲೆಂದು ಬೆಂಗಳೂರಿಗೆ ಬರುತ್ತಿದ್ದ ತಮಿಳುನಾಡು ಚೋರರು ಅಂದರ್
ಈ ನಡುವೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರನಿಗೆ ಬಿಟ್ಟು ಕೊಟ್ಟಿದ್ದಾರೆ. ಯಡಿಯೂರಪ್ಪ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಅನ್ನುವ ಸುದ್ದಿಗಳಿವೆ. ಆದರೆ ಮೂಲಗಳ ಪ್ರಕಾರ ಇದು ಹೈಕಮಾಂಡ್ ಜೊತೆ ಚರ್ಚಿಸಿಯೇ ಪ್ರಕಟಿಸಿರುವ ನಿರ್ಧಾರ.
ರಾಜ್ಯ ಬಿಜೆಪಿಯನ್ನು ಪುನರ್ ಸಂಘಟನೆ ಮಾಡಲು ಹೊರಟಿರುವ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನೂ ಬಳಸಿಕೊಳ್ಳಲು ಡೆಲ್ಲಿ ನಾಯಕರು ನಿರ್ಧರಿಸಿದ್ದಾರೆ. ಈ ಕಾರಣದಿಂದಲೇ ಯಡಿಯೂರಪ್ಪ, ಪುತ್ರನಿಗೆ ಕ್ಷೇತ್ರ ಘೋಷಣೆ ಮಾಡಿದ್ದಾರೆ. ಸಾಕಷ್ಟು ತಿಂಗಳ ಹಿಂದೆಯೇ ಯಡಿಯೂರಪ್ಪ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ತಡೆಯಿರಿ ಅನ್ನುವ ಸಂದೇಶ ಬಂದ ಕಾರಣ ಅವರು ತೀರ್ಮಾನ ಪ್ರಕಟಿಸಿರಲಿಲ್ಲ. ಇದೀಗ ಹಸಿರು ನಿಶಾನೆ ಸಿಕ್ಕ ಕಾರಣ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ : Karnataka BJP : ಬಿಜೆಪಿ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ಅಮಿತ್ ಶಾ ಆಪ್ತನ ಎಂಟ್ರಿ
ಇನ್ನು ಯಡಿಯೂರಪ್ಪ ಅವರನ್ನು ಸೈಡಿಗೆ ಸರಿಸಿ ರಾಜ್ಯದಲ್ಲಿ ಚುನಾವಣೆ ಎದುರಿಸುವುದು ಬಿಜೆಪಿಗೆ ಅಸಾಧ್ಯ. ಹೀಗಾಗಿಯೇ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆಯೊಂದು ಸಿಗುವುದು ಖಚಿತ ಅನ್ನಲಾಗಿದೆ. ಈ ಹಿಂದೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂತೋಷ್ ಜೀಯವರು ಪಾರ್ಟಿ ಮುಂದುವರಿಯಬೇಕು ಅಂದ್ರೆ ಡಿಎನ್ಎ ಆಧಾರದಲ್ಲಿ ಟಿಕೆಟ್ ಕೊಟ್ರೆ ಹೇಗೆ ಅಂದಿದ್ದರು. ಆದರೆ ಯಡಿಯೂರಪ್ಪ ಅವರ ಡಿಎನ್ಎ ಮುಂದುವರಿಯದಿದ್ರೆ ರಾಜ್ಯದಲ್ಲಿ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಹೀಗಾಗಿಯೇ ಬಿಜೆಪಿಗೆ ಯಡಿಯೂರಪ್ಪ ಕುಟುಂಬ ಅನಿವಾರ್ಯವಾಗಿದೆ.
ಇದನ್ನೂ ಓದಿ : Robert Vadra : ಸಕ್ರಿಯ ರಾಜಕಾರಣ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಗಾಂಧಿ ಅಳಿಯ
Discussion about this post