ಕಾಲ ಬದಲಾಗಿದೆ… ಇದೀಗ ಬೈಕ್ ಸ್ಕೂಟರ್ ಕೂಡಾ ಆನ್ ಲೈನ್ ನಲ್ಲೇ ದೊರಕುತ್ತಿದೆ.(flipkart bounce scooter :) ಬೌನ್ಸ್ ಕಂಪನಿ ಇದೀಗ ತನ್ನ ಬೈಕ್ ಸೇಲ್ ಮಾಡಲು flipkart ಮೊರೆ ಹೋಗಿದೆ
ಬೆಂಗಳೂರು : ಪೆಟ್ರೋಲ್ ದರ ಏರುತ್ತಿರುವ ಹಿನ್ನಲೆಯಲ್ಲಿ ಇಲೆಕ್ಟ್ರಿಕ್ ವಾಹನದತ್ತ ಜನರ ಚಿತ್ತ ಹರಿದಿದೆ. ಸರ್ಕಾರ ಕೂಡಾ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಇಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಒತ್ತು ನೀಡುತ್ತಿದೆ. ಖರೀದಿಸುವ ಮಂದಿಗೂ ಸಬ್ಸಿಡಿಯ ಆಸೆ ತೋರಿಸಲಾಗುತ್ತಿದೆ. ಹೀಗಾಗಿ ಇದೀಗ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳ ಇಲೆಕ್ಟ್ರಿಕ್ ವಾಹನ ರಸ್ತೆಗಿಳಿದಿದೆ.ಆದರೆ ಮಾರುಕಟ್ಟೆಗೆ ಬಂದ ಇಲೆಕ್ಟ್ರಿಕ್ ( flipkart bounce scooter) ದ್ವಿಚಕ್ರ ವಾಹನಗಳಿಗೆ ಬೆಂಕಿ ಹತ್ತುತ್ತಿರುವ ಪರಿಣಾಮ ಒಂದಿಷ್ಟು ಹಿನ್ನಡೆಯಾಗಿದೆ.
ಈ ನಡುವೆ ಬೆಂಗಳೂರು ಮೂಲದ ಬೌನ್ಸ್ ಕಂಪನಿ ತಯಾರಿಸಿರುವ ಇನ್ಭಿನಿಟಿ ಸ್ಕೂಟರ್ (flipkart bounce scooter) ಮಾರುಕಟ್ಟೆ ಪ್ರವೇಶಿಸಿದ್ದು, ಉಳಿದ ಸ್ಕೂಟರ್ ಗಳಿಗೆ ಹೋಲಿಸಿದರೆ ದರ ಕಡಿಮೆ ಇದೆ. ಇಂದಿನಿಂದ ಈ ಸ್ಕೂಟರ್ ಮಾರಾಟ ಪ್ರಾರಂಭಗೊಂಡಿದ್ದು, ಪ್ಲಿಪ್ ಕಾರ್ಟ್ ನ ಬಿಗ್ ಸೇವಿಂಗ್ ಡೇಸ್ ನಲ್ಲಿ ಈ ಸ್ಕೂಟರ್ ಕೂಡಾ ಲಿಸ್ಟ್ ಆಗಿದೆ.
ಆರ್ಡರ್ ಮಾಡಿದ 15 ದಿನಗಳಲ್ಲಿ ಸ್ಕೂಟರ್ ಮನೆ ಬಾಗಿಲಿಗೆ ಬರಲಿದೆ. ಪ್ರಸ್ತುತ ಕರ್ನಾಟಕ, ತೆಲಂಗಾಣ, ನವದೆಹಲಿ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಡೆಲಿವರಿ ನೀಡಲಾಗುತ್ತಿದೆ.
ಇದನ್ನೂ ಓದಿ : Bangalore Accident : ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ : ಬೈಕ್ ಸವಾರ ಸವಾರ ಸಾವು
ಒಂದು ಸ್ಕೂಟರ್ ಬೆಲೆ 74,499 ರೂಪಾಯಿಯಾಗಿದ್ದು, ರಸ್ತೆಗೆ ಬರುವಾಗ 80 ಸಾವಿರ ರೂಪಾಯಿಯಾಗುತ್ತದೆ. ಕೆಲ ರಾಜ್ಯಗಳು ಎಲೆಕ್ಟ್ರಿಕ್ ಸ್ಕೂಟರ್ ಗೆ ಸಬ್ಸಿಡಿ ಕೊಟ್ಟಿರುವ ಕಾರಣ, ಕರ್ನಾಟಕದಲ್ಲಿ 60 ಸಾವಿರ ರೂಪಾಯಿ, ರಾಜಸ್ಥಾನ 73 ಸಾವಿರ ರೂಪಾಯಿ, ದೆಹಲಿ 59 ಸಾವಿರ ರೂಪಾಯಿ ಮತ್ತು ಗುಜರಾತ್ ನಲ್ಲಿ 60 ಸಾವಿರ ರೂಪಾಯಿಗೆ ಬೌನ್ಸ್ ಇನ್ಫಿನಿಟಿ ಇ1 ಸ್ಕೂಟರ್ ಲಭ್ಯವಿರುತ್ತದೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್ : ಶ್ವೇತ ಭವನ ಹೇಳಿದಿಷ್ಟು
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ ಕ್ಯಾನ್ಸರ್. ಈ ಸುದ್ದಿ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ. ಇದೀಗ ಶ್ವೇತಭವನವೇ ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದೆ.
ನಮ್ಮ ತಾಯಿ ನಮ್ಮನ್ನು ನಡೆಸುವುದಕ್ಕಿಂತ ಹೆಚ್ಚು ಓಡಿಸುತ್ತಿದ್ದರು. ಯಾಕಂದ್ರೆ ಹಾನಿಕಾರಕ ಹೊಗೆಯ ಪರಿಣಾಮ ಹಾಗಿತ್ತು. ಕಿಟಿಕಿಯಲ್ಲಿ ಅಂಟಿಕೊಂಡಿದ್ದ ಕೊಳೆ ತೆಗೆಯಲು ವಿಂಡ್ ಶೀಲ್ಡ್ ವೈಪರ್ ಬಳಸಬೇಕಿತ್ತು. ಹಾಗಾಗಿಯೇ ನಾನು ಮತ್ತು ನಾನು ಬೆಳೆದ ಏರಿಯಾದ ಅನೇಕ ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಡೆಲವೇರ್ ರಾಜ್ಯ ದೇಶದಲ್ಲೇ ಅತ್ಯಂತ ಹೆಚ್ಚು ಕ್ಯಾನ್ಸರ್ ಪೀಡಿತರನ್ನು ಹೊಂದಿತ್ತು, ಅನ್ನುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಭಾಷಣ ಇಜೀಗ ವೈರಲ್ ಆಗಿದೆ.
ಅಮೆರಿಕಾ ಅಧ್ಯಕ್ಷರೇ ತಮಗೆ ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ ಅಂದ ಮೇಲೆ ಸಹಜವಾಗಿಯೇ ವಿಶ್ವದೆಲ್ಲೆಡೆ ಅದು ಸುದ್ದಿಯಾಗಿದೆ. ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿರುವಂತೆ ಇದೀಗ ಶ್ವೇತ ಭವನವೇ ಸ್ಪಷ್ಟನೆ ಕೊಟ್ಟಿದ್ದು, 2020ರ ಜನವರಿ ಮೊದಲು ಅವರು ತಾವು ಚಿಕಿತ್ಸೆ ಪಡೆದಿದ್ದ ಚರ್ಮ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ. ಈ ಮೂಲಕ ಅಮೆರಿಕಾದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ನಡುವೆ ಕ್ಯಾನ್ಸರ್ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ, ಅಮೆರಿಕಾ ಅಧ್ಯಕ್ಷ ಬೈಡನ್ ಗೆ ಕೊರೋನಾ ಪಾಸಿಟಿವ್ ಅನ್ನುವ ಸುದ್ದಿ ಬಂದಿದೆ. ಈ ಬಗ್ಗೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ಕೊರೋನಾದ ಗುಣಲಕ್ಷಣಗಳು ಕಾಣಿಸಿಕೊಂಡಿದೆ. ಜೊತೆಗೆ ಕೋವಿಡ್ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದೆ. ಹೀಗಾಗಿ ಅಧ್ಯಕ್ಷಕರು ಐಸೋಲೇಶನ್ ಗೆ ಒಳಗಾಗಿದ್ದಾರೆ ಅಂದಿದೆ.
ಇನ್ನು ಅಮೆರಿಕಾ ಅಧ್ಯಕ್ಷರ ಆರೋಗ್ಯ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಹಾರೈಸಿದ್ದಾರೆ.
Discussion about this post