ಕೆರೂರ ಗಲಾಟೆ ಸಂಬಂಧ ಗಾಯಾಳುಗಳಿಗೆ ಸಿದ್ದರಾಮಯ್ಯ ಕೊಟ್ಟ ಹಣವನ್ನು ಮುಸ್ಲಿಂ ಮಹಿಳೆ ಎಸೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅವಮಾನವಾಗಿ ಪರಿಣಮಿಸಿದೆ. ಚುನಾವಣೆಯ ಹೊಸ್ತಿಲಲ್ಲಿ ನಡೆದ ಘಟನೆಯಿಂದ ಮತ ಬ್ಯಾಂಕ್ ಕಳೆದು ಹೋಗುವ ಆತಂಕ ಎದುರಾಗಿದೆ. ಇದೀಗ ಹಣ ಎಸೆದ ಪ್ರಕರಣಕ್ಕೆ SDPI ಸಂಘಟನೆ ಹೆಸರನ್ನು ಎಳೆದು ತರಲಾಗಿದೆ.
ಬಾಗಲಕೋಟೆ :ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪರಿಹಾರದ ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು ಎಸೆದ ಪ್ರಕರಣದ ಹಿಂದೆ SDPI ಸಂಘಟನೆ ಕೈವಾಡ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.
ಇದನ್ನೂ ಓದಿ : poor quality tea to CM : ಮುಖ್ಯಮಂತ್ರಿಗೆ ತಣ್ಣಗಾದ ಟೀ ಕೊಟ್ಟ ಅಧಿಕಾರಿಗೆ ಶೋಕಾಸ್ ನೋಟಿಸ್
ಇಲಕಲ್ ಪಟ್ಟಣದಲ್ಲಿ ಮಾತನಾಡಿರುವ ಅವರು ಎಸ್.ಡಿ.ಪಿ.ಐ ನವರು ಪ್ರಚೋದನೆ ನೀಡಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಮಾಡುವಂತೆ ಪ್ರೇರೆಪಿಸಿದ್ದಾರೆ. ಗಾಯಾಳುಗಳ ಸಂಬಂಧಿಕರಿಗೆ ಎಸ್.ಡಿ.ಪಿ.ಐ ನವರು ಕುಮ್ಮಕ್ಕು ನೀಡಿ ಹಣ ಎಸೆಯುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನವರು ಕೂಡಾ ಅಲ್ಲಿಗೆ ಬಂದಿದ್ದರು ಅಂದಿದ್ದಾರೆ.
ಪರಿಹಾರ ಧನವನ್ನು ಮಾನವೀಯತೆ ದೃಷ್ಟಿಯಿಂದ ನೀಡಲಾಗಿದೆ. ಇಂತಹ ಘಟನೆಗಳಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಧಕ್ಕೆ ಇಲ್ಲ. SDPI ಮತ್ತು BJPಯವರಿಗೆ ಸಂಪರ್ಕವಿದೆ. ದೇಶದಲ್ಲಿ ಇವರೇ ಅಝಾನ್, ಹಿಜಾಬ್ ಪ್ರಕರಣಗಳನ್ನು ತಂದು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಶಪ್ಪನವರ್ ದೂರಿದರು.
ನಾವು ನಾಸ್ತಿಕರು : ಭೂಮಿ ಪೂಜೆ ವೇಳೆ ಹಿಂದೂ ಅರ್ಚಕರನ್ನು ಕಂಡು ಡಿಎಂಕೆ ಸಂಸದ ಗರಂ
ರಸ್ತೆ ಯೋಜನೆಯೊಂದಕ್ಕೆ ಪೂಜೆಗೆಂದು ಅರ್ಚಕರನ್ನು ಕರೆಸಿರುವ ಅಧಿಕಾರಿಗಳ ಕ್ರಮದ ವಿರುದ್ಧ ಡಿಎಂಕೆ ಸಂಸದ ಎಸ್ ಸೆಂಥಿಲ್ ಕುಮಾರ್ ಕಿಡಿ ಕಾರಿದ್ದಾರೆ.
ಚೆನೈ : ಹಿಂದೂ ಅರ್ಚಕರ ಮೂಲಕ ರಸ್ತೆ ಯೋಜನೆಗೆ ಭೂಮಿ ಪೂಜೆ ನಡೆಸಲು ಅಧಿಕಾರಿ ಮುಂದಾಗಿರುವುದರ ವಿರುದ್ಧ ಆಡಳಿತಾರೂಢ ಡಿಎಂಕೆಯ ಲೋಕಸಭಾ ಸದಸ್ಯ ಸೆಂಥಿಲ್ ಕುಮಾರ್ ಗರಂ ಆಗಿರುವ ಘಟನೆ ನಡೆದಿದೆ.
ತಮ್ಮ ಧರ್ಮಪುರಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಹಿಂದೂ ಅರ್ಚಕರನ್ನು ಕಂಡ ತಕ್ಷಣ ಕೆಂಡಾಮಂಡಲರಾದ ಸಂಸದರು, ಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನೆಯೊಂದಿಗೆ ಸರ್ಕಾರಿ ಕಾರ್ಯಕ್ರಮ ಆಯೋಜಿಸಬಾರದು ಎಂದು ನಿಮಗೆ ಗೊತ್ತಿಲ್ಲವೇ. ಸರ್ಕಾರಿ ಕಾರ್ಯಕ್ರಮ ಹೇಗೆ ನಡೆಸಬೇಕು ಎಂದು ಗೊತ್ತಿಲ್ವ ಅಂದರು.
ಬೇರೆ ಧರ್ಮದ ಗುರುಗಳು ಎಲ್ಲಿದ್ದಾರೆ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗುರುಗಳು ಎಲ್ಲಿ, ಚರ್ಚ್ ಫಾದರ್, ಇಮಾಮ್ ಅವರನ್ನು ಕರೆಯಿಸಿ, ನಾವು ನಾಸ್ತಿಕರು, ದ್ರಾವಿಡ ಕಳಂಗ ಪ್ರತಿನಿಧಿಗಳು ಎಂದು ಗುಡುಗಿದರು. ಇದು ದ್ರಾವಿಡ ಮಾದರಿಯ ಆಡಳಿತ, ಸರ್ಕಾರ ಎಲ್ಲಾ ಧರ್ಮಕ್ಕೆ ಸೇರಿದ ಜನರಿಗಾಗಿ ಇದೆ ಅಂದರು.
ಸಂಸದರ ಅಬ್ಬರಕ್ಕೆ ಬೆದರಿದ ಲೋಕೋಪಯೋಗಿ ಅಧಿಕಾರಿಗಳು ಸಂಸದರ ಕ್ಷಮೆಯಾಚಿಸಿದರು. ಇದೇ ವೇಳೆ ಸ್ಪಷ್ಟನೆ ಕೊಟ್ಟ ಸಂಸದರು ನಾನು ಪೂಜೆಯ ವಿರೋಧಿಲ್ಲ, ಆದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು ಅಂದರು.
Discussion about this post