ಈ ಬಿಟ್ಟಿ ನೆಟ್ ಬಂದ ಮೇಲೆ ಕೆಲ ಸೆಲೆಬ್ರೆಟಿಗಳಿಗೆ ಏನು ಮಾಡಬೇಕು ಅಂತಾನೇ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದೇ ಸೆಲೆಬ್ರೆಟಿಸಂ ಅಂದುಕೊಂಡಿದ್ದಾರೆ. ಆ ಸಾಲಿಗೆ ಸೇರ್ಪಡೆ ಉರ್ಫಿ ( Urfi Javed )
ಈ ಉರ್ಫಿ ಜಾವೇದ್ ಅನ್ನುವ ನಟಿ ಕ್ಯಾಮರ ಮುಂದೆ ಪೋಸ್ ನೀಡುವುದೇ ಕಸುಬನ್ನಾಗಿಸಿದ್ದಾರೆ. ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರ ವಿಚಿತ್ರ ಬಟ್ಟೆ ಹಾಕಿ ಮಿಂಚುವ ಮೂಲಕ ಸುಲಭವಾಗಿ ಕಾಸು ಗಳಿಸುತ್ತಿದ್ದಾರೆ. ಒಂದಿಷ್ಟು ಸೋಷಿಯಲ್ ಮೀಡಿಯಾಗಳೊಂದಿಗೆ ( Urfi Javed )ಒಪ್ಪಂದ ಮಾಡಿಕೊಂಡಿರುವ ಫೋಟೋ, ವಿಡಿಯೋ ವೈರಲ್ ಆದಷ್ಟು ಕಾಸು ಬಾಚಿಕೊಳ್ಳುತ್ತಿದ್ದಾರೆ.
ಹೀಗಾಗಿಯೇ ನಟನೆಗಿಂತಲೂ ಹೆಚ್ಚಾಗಿ ಈ ರೀತಿಯ ಬಟ್ಟೆ ಧರಿಸಿ ಫೇಮಸ್ ಆಗಿದ್ದಾರೆ. ಪಡ್ಡೆ ಹುಡುಗರ ಹೊಟ್ಚೆಗೆ ಚಿಟ್ಟೆ ಬಿಟ್ಟು ಮಜಾ ನೋಡುತ್ತಿದ್ದಾರೆ. ಮೊನ್ನೆ ಮೊನ್ನೆ ಗೋಣಿ ಚೀಲದಿಂದ ಮಾಡಿ ಬಟ್ಟೆ ಹಾಕಿ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ಬಿಕಿನಿಗೆ ಹೂವು ಅಂಟಿಸಿಕೊಂಡು ಬಂದು ಸೋಷಿಯಲ್ ಮೀಡಿಯಾದಲ್ಲೇ ರಸ ಹೀರುವ ಹುಡುಗರಿಗೆ ಕೆಲಸ ಕೊಟ್ಟಿದ್ದರು.
ಅದರ ಬೆನ್ನಲ್ಲೇ ಇದೀಗ ಜಿಲೇಬಿಯೋ, ಚಕ್ಕುಲಿಯೋ ಗೊತ್ತಿಲ್ಲ ಅದನ್ನೇ ಹೋಲುವ ಬಟ್ಟೆಯೊಂದನ್ನು ಹಾಕಿಕೊಂಡು ಬಂದಿದ್ದಾರೆ. ಈ ವಿಡಿಯೋ ಕಂಡ ಅನೇಕರು ಚಿತ್ರ ವಿಚಿತ್ರ ಕಮೆಂಟ್ ಹಾಕುತ್ತಿದ್ದಾರೆ. ಕೆಲವರಂತು ಇಂತಹ ಫೋಟೋ ವಿಡಿಯೋ ನೋಡಿ ಸಾಕಾಗಿದೆ ನಮ್ಮ ಕಣ್ಣುಗಳನ್ನು ನಾವು ದಾನ ಮಾಡುತ್ತೇವೆ ಅಂದಿದ್ದಾರೆ.
ಇಷ್ಟಪಟ್ಟು ಇರೋದು… ಕೆಟ್ಟಾಗ ರೇಪ್ ಆಯ್ತು ಅನ್ನುವಂತಿಲ್ಲ : ದೂರುದಾರರ ಕಿವಿ ಹಿಂಡಿದ ಸುಪ್ರೀಂಕೋರ್ಟ್
ಅತ್ಯಾಚಾರದ ಕುರಿತಂತೆ ಇರುವ ಕಾಯ್ದೆಯಿಂದ ಕೆಲವೊಂದು ಸಲ ಪುರುಷರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಒಳ್ಳೆಯ ಉದ್ದೇಶದಿಂದಲೇ ತಂದಿರುವ ಕಾನೂನು ದುರ್ಬಳಕೆಯಾಗುತ್ತಿದೆಯೇ..?
ನವದೆಹಲಿ : ಮಹಿಳೆಯೇ ಇಷ್ಟಪಟ್ಟು ಇಷ್ಟಪಟ್ಟ ಪುರುಷನ ಜೊತೆಗಿದ್ದು ಸಂಬಂಧ ಹಾಳಾದ ಮೇಲೆ ಅತ್ಯಾಚಾರವಾಯ್ತು ಎಂದು ದೂರು ನೀಡುವ ಹಾಗಿಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ಸುಪ್ರೀಂಕೋರ್ಟ್ ನ ಈ ತೀರ್ಪು ಮೈಲಿಗಲ್ಲು ಅನ್ನಿಸಿಕೊಳ್ಳುವ ಸಾಧ್ಯತೆಗಳಿದ್ದು, ಅನ್ಯಾಯಕ್ಕೆ ಒಳಗಾದ ಅನೇಕ ಪುರುಷರಿಗೆ ನ್ಯಾಯ ಸಿಗುವ ಸಾಧ್ಯತೆಗಳಿದೆ.
ಜಾಮೀನು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಮಾತುಗಳನ್ನು ಹೇಳಿದ್ದು, ಆರೋಪಿ ಅನ್ಸಾರ್ ಮೊಹಮ್ಮದ್ ಎಂಬಾತ ತನ್ನ ವಿರುದ್ಧ ಸಲ್ಲಿಸಲಾಗಿರುವ ಅತ್ಯಾಚಾರ ಆರೋಪದ ಕುರಿತ ನಿರೀಕ್ಷಣಾ ಜಾಮೀನಿನ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ನ್ಯಾ. ವಿಕ್ರಮನಾಥ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಇದನ್ನೂ ಓದಿ : ಪತ್ನಿಯ ರುಂಡದೊಂದಿಗೆ ಪೊಲೀಸ್ ಸ್ಟೇಷನ್ ಗೆ ಬಂದ ಗಂಡ – ಶೀಲ ಶಂಕಿಸಿ ಕೊಲೆ
ಅನ್ಸಾರ್ ಮೊಹಮ್ಮದ್ ಮತ್ತು ದೂರುದಾರ ಮಹಿಳೆ ಪರಸ್ಪರ ಇಷ್ಟಪಟ್ಟು ಜೊತೆಗಿದ್ದರು. 4 ವರ್ಷಗಳ ಜೊತೆಯಾಗಿ ಜೀವನವನ್ನು ನಡೆಸಿದ್ದರು. ಆದರೆ ಸಂಬಂಧ ಹದಗೆಟ್ಟ ಬಳಿಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದ ಮಹಿಳೆ ಅತ್ಯಾಚಾರ ಆರೋಪ ಹೊರಿಸಿದ್ದರು. ಈ ವೇಳೆ ನಿರೀಕ್ಷಣಾ ಜಾಮೀನು ಕೋರಿ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿತ್ತು. ಹೀಗಾಗಿ ಅನ್ಸಾರ್ ಮೊಹಮ್ಮದ್ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.
ಈ ವೇಳೆ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಜೊತೆಗೆ ದೂರದಾರ ಮಹಿಳೆ ಇಷ್ಟಪಟ್ಟು ನಾಲ್ಕು ವರ್ಷಗಳ ಕಾಲ ಜೊತೆಗಿದ್ದರು. ಈಗ ಸಂಬಂಧ ಹಾಳಾಗಿದೆ ಅನ್ನುವ ಕಾರಣಕ್ಕೆ ಸೆಕ್ಷನ್ 376 (2)ರ ಪ್ರಕಾರ FIR ದಾಖಲು ಮಾಡಲಾಗದು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಈ ಆದೇಶದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನ್ಯಾಯಾಲಯ ಈ ತೀರ್ಪು ಕೇವಲ ನಿರೀಕ್ಷಣಾ ಜಾಮೀನಿಗೆ ಸಂಬಂಧಪಟ್ಟಂತೆ ಮಾತ್ರ. ಹೊರತಾಗಿ ಈ ದೂರಿನ ತನಿಖೆಯನ್ನು ಈ ತೀರ್ಪಿನಿಂದ ಪ್ರಭಾವಶಾಲಿಯಾಗದೆ ಪೊಲೀಸರು ಮುಂದುವರಿಸಬೇಕು ಎಂದು ಸೂಚಿಸಿದೆ.
Discussion about this post