ಶಿವಮೊಗ್ಗ ಹರ್ಷನ ಕೊಲೆ ಪ್ರಕರಣದ ಆರೋಪಿ ಅಟ್ಟಹಾಸ ವೈರಲ್ ಆದ ಬೆನ್ನಲ್ಲೇ ಪರಪ್ಪನ ಆಗ್ರಹಾರದಲ್ಲಿ ( parappana agrahara jail ) ಇದೀಗ ಎಲ್ಲವೂ ಕಟ್ಟುನಿಟ್ಟಾಗಿದೆ. ಗೃಹ ಸಚಿವರ ಭೇಟಿಯ ಬಳಿಕ ಭಿಕ್ಷೆ ಬೇಡುತ್ತಿದ್ದ ಜೈಲು ಸಿಬ್ಬಂದಿಯೂ ಇದೀಗ ಬದಲಾಗಿದ್ದಾರೆ
ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನೊಳಗೆ ಅನೇಕ ಮಾರ್ಗಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿತ್ತು. ಕಾಸಿನಾಸೆಗೆ ಬಿದ್ದ ಜೈಲು ಸಿಬ್ಬಂದಿ ಇದಕ್ಕೆ ಅವಕಾಶವನ್ನೂ ಕೊಟ್ಟಿದ್ದರು. ಆದರೆ ಇದೀಗ ಕೇಂದ್ರ ಕಾರಾಗೃಹದ ( parappana agrahara jail ) ಭ್ರಷ್ಟರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಹೀಗಾಗಿ ಇದೀಗ ಒಂದು ಹಂತಕ್ಕೆ ಎಲ್ಲವೂ ಕಟ್ಟುನಿಟ್ಟಾಗಿದೆ. ಎಷ್ಟು ದಿನಗಳ ಕಾಲ ಈ ಕಟ್ಟು ನಿಟ್ಟು ಅನ್ನುವುದೇ ಪ್ರಶ್ನೆ.
ಈ ನಡುವೆ ವಿಚಾರಣಾಧೀನ ಖೈದಿಗಳಿಗೆ ಗುಪ್ತಾಂಗದಲ್ಲಿ ಬಚ್ಚಿಟ್ಟು ಡ್ರಗ್ಸ್ ತಂದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಾಮರಾಜಪೇಟೆಯ ಸಂಗೀತಾ ಮತ್ತು ಶಿವಮೊಗ್ಗದ ಛಾಯಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 20 ಲಕ್ಷ ಮೌಲ್ಯದ 270 ಗ್ರಾಂ ಹಶೀಶ್ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : kerala monkeypox : ಭಾರತಕ್ಕೆ ಕಾಲಿಟ್ಟ ಮಂಕಿಪಾಕ್ಸ್ : ಕೇರಳದಲ್ಲಿ ದೃಢಪಟ್ಟ ಸೋಂಕು : ಕರ್ನಾಟಕಕ್ಕೂ ಕಾದಿದೆ ಆತಂಕ
ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ಚಾಮರಾಜಪೇಟೆಯ ಲೋಹಿತ್ ಕೇಂದ್ರ ಕಾರಾಗೃಹದಲ್ಲಿದ್ದು ಆತನ ಸಂದರ್ಶನಕ್ಕೆ ಸ್ನೇಹಿತೆ ಸಂಗೀತಾ ಬಂದಿದ್ದಾಳೆ. ಜೈಲು ಪ್ರವೇಶ ದ್ವಾರದಲ್ಲಿ ಆಕೆ ನಡೆಯುವ ಶೈಲಿ ನೋಡಿದ ಜೈಲು ಸಿಬ್ಬಂದಿಗೆ ಅನುಮಾನ ಬಂದಿದೆ. ತಕ್ಷಣ ಮಹಿಳಾ ಸಿಬ್ಬಂದಿ ಸಂಗೀತಾಳನ್ನು ಪರಿಶೀಲನೆ ನಡೆಸಿದಾಗ ಗುಪ್ತಾಂಗದಲ್ಲಿ 250 ಗ್ರಾಂ ಹಶೀಶ್ ಎಣ್ಣೆ ಪ್ಯಾಕೆಟ್ ಪತ್ತೆಯಾಗಿದೆ.
ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿರುವ ಕಾಳಪ್ಪ ಎಂಬಾತನನ್ನು ನೋಡಲು ಶಿವಮೊಗ್ಗದ ಭದ್ರಾವತಿ ತಾಲೂಕಿನ ಛಾಯಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಳು. ಈಕೆ ನಡೆಯುವ ಶೈಲಿ ಕೂಡಾ ಜೈಲು ಸಿಬ್ಬಂದಿಗೆ ಅನುಮಾನ ಮೂಡಿಸಿದೆ. ಹೀಗಾಗಿ ತಕ್ಷಣ ಮಹಿಳಾ ಸಿಬ್ಬಂದಿ ಮೂಲಕ ಪರಿಶೀಲನೆ ನಡೆಸಿದಾಗ 50ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಹಶೀಶ್ ಆಯಿಲ್ ತುಂಬಿದ್ದ ಈಕೆ ಬಾಟಲಿಯನ್ನು ಗುಪ್ತಾಂಗಕ್ಕೆ ತುರಿಸಿಕೊಂಡಿದ್ದಳು.
ಇದೀಗ ಇಬ್ಬರ ವಿರುದ್ಧ ಪರಪ್ಪನ ಆಗ್ರಹಾರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಬಂಧಿಸಿ ಗೆಳೆಯರಿರುವ ಜಾಗಕ್ಕೆ ಕಳುಹಿಸಿಕೊಡಲಾಗಿದೆ.
ವಂಚಕ ಲಲಿತ್ ಮೋದಿ ಜೊತೆ ಸುಶ್ಮಿತಾ ಸೇನ್ ಡೇಟಿಂಗ್
ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪರಾರಿಯಾಗಿರುವ ಲಲಿತ್ ಮೋದಿ ಲಂಡನ್ ನಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಇದೀಗ ಮೋದಿ ತೆಕ್ಕೆಯಲ್ಲಿ ಸುಶ್ಮಿತಾ ಸೇನ್ ಇರುವ ಸುದ್ದಿ ಬಂದಿದೆ
ಸುಶ್ಮಿತಾ ಸೇನ್ ಇತ್ತೀಚೆಗೆ ರೊಹಮನ್ ಶ್ವಾಲ್ ಅನ್ನುವ ವ್ಯಕ್ತಿಯ ಜೊತೆ ಎರಡೂವರೆ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇಬ್ಬರ ನಡುವೆ 15 ವರ್ಷಗಳ ಅಂತರವಿತ್ತು. ಸುಶ್ಮಿತಾ ಸೇನ್ಗೆ 46 ವರ್ಷವಾಗಿದ್ದರೆ, ರೊಹಮನ್ಗೆ 30 ವರ್ಷ ವಯಸ್ಸಾಗಿತ್ತು. ಎರಡೂವರೆ ವರ್ಷವೂ ಇವರು ಲಿವ್ ಇನ್ ಸಂಬಂಧದಲ್ಲಿದ್ದರು. ಆದಾದ ಬಳಿಕ ಈ ಸಂಬಂಧದಲ್ಲಿ ಬ್ರೇಕಪ್ ಆಗಿತ್ತು.
ಲಲಿತ್ ಮೋದಿ ತನ್ನ ತಾಯಿಯ ಸ್ನೇಹಿತೆಯನ್ನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದರು. ತಾಯಿಯ ಆಪ್ತ ಸ್ನೇಹಿತೆ ಮೀನಲ್ರ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ ತಾಯಿಯ ವಿರೋಧದ ನಡುವೆ ಮದುವೆಯಾಗಿದ್ದರು. ಮೀನಲ್ ಹಾಗೂ ಲಲಿತ್ ನಡುವೆ 9 ವರ್ಷಗಳ ಅಂತರವಿತ್ತು. ಕೆಲ ವರ್ಷಗಳ ಹಿಂದೆ ಮೀನಲ್ ತೀರಿಕೊಂಡಿದ್ದಾರೆ.
ಈ ನಡುವೆ ಇದೀಗ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವ ಸುದ್ದಿ ಬಂದಿದೆ. ಭಾರತದಲ್ಲಿ ವಂಚನೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಲಂಡನ್ ಗೆ ಪರಾರಿಯಾಗಿದ್ದು, ಅಲ್ಲಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ಸಂಭ್ರಮದಲ್ಲಿ ಸುಶ್ಮಿತಾ ಸೇನ್ ಪಾಲುದಾರರಾಗಿದ್ದಾರೆ.
ಈ ಸಂಬಂಧ ಲಲಿತ್ ಮೋದಿಯವರೇ ಟ್ವೀಟ್ ಮಾಡಿದ್ದು, ಸುಶ್ಮಿತಾ ಸೇನ್ ರನ್ನು ಬೆಟರ್ ಹಾಫ್ ಎಂದು ಕರೆದಿದ್ದಾರೆ. ಜೊತೆಗೆ ಸುಶ್ಮಿತಾ ಸೇನ್ ಜೊತೆಗೆ ಹೊಸ ಇನ್ನಿಂಗ್ಸ್ ಆರಂಭಿಸಿರುವುದಾಗಿಯೂ ಘೋಷಿಸಿದ್ದಾರೆ. ಹಾಗಂತ ಮದುವೆಯಾಗಿಲ್ಲ. ಲಲಿತ್ ಮೋದಿಯೇ ಹೇಳಿರುವಂತೆ ಬರೀ ಡೇಟಿಂಗ್ ಮಾಡುತ್ತಿದ್ದು, ಮುಂದೊಂದು ದಿನ ಮದುವೆಯಾದರೂ ಆಗಬಹುದು ಅಂದಿದ್ದಾರೆ.
ಐಪಿಎಲ್ ಗೆ ಸಂಬಂಧಿಸದ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯ ನಡುವೆ ಲಲತ್ ಮೋದಿ 2010ರಲ್ಲಿ ಲಂಡನ್ ಗೆ ಪರಾರಿಯಾಗಿದ್ದರು.
Discussion about this post