ಗಂಡ ಹೆಂಡತಿ ಸೇರಿ ಪ್ರಧಾನಿಯ ಹತ್ಯೆಗೆ ಸಂಚು ರೂಪಿಸಿದ್ದರು. ( Target PM Modi ) 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿಗೊಳಿಸೋದು ಇವರ ಗುರಿಯಂತೆ – Anti-India activities accused arrested in Bihar
ಬಿಹಾರ : ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ( Target PM Modi ) ಬಂಧಿತರನ್ನು ಜಾರ್ಖಂಡ್ ನ ನಿವೃತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಹಾಗೂ ಆತನ ಪತ್ನಿ ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ
ಬಿಹಾರ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಹಿನ್ನಲೆಯಲ್ಲಿ ಜುಲೈ 11 ರಂದು ಈ ಕಾರ್ಯಾಚರಮೆ ನಡೆಸಲಾಗಿತ್ತು ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಬಂಧಿತರಿಂದ PFI ಸಂಘಟನೆಯ ಕರ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿ : bengaluru : ಮದ್ಯ ಸೇವಿಸಿ ಮೂತ್ರ ವಿಸರ್ಜನೆಗೆ ಹೋದ ವೇಳೆ ಕುಸಿದ ಗೋಡೆ : ಇಬ್ಬರ ಸಾವು
ಜುಲೈ 12 ರಂದು ಪ್ರಧಾನಿ ನರೇಂದ್ಕರ ಮೋದಿಯವರ ಪಾಟ್ನಾ ಪ್ರವಾಸ ನಿಗದಿಯಾಗಿತ್ತು. ಈ ವೇಳೆ ಅವರನ್ನು ಮುಗಿಸಲು ಹಂತಕರು ಯೋಜನೆ ರೂಪಿಸಿದ್ದರು. ಈ ಸಲುವಾಗಿ ಜುಲೈ 6 ಮತ್ತು ಜುಲೈ 7 ರಂದು ಸಭೆಗಳನ್ನು ನಡೆಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಂಧಿತ ದಂಪತಿ ದೇಶ ವಿರೋಧಿ ಕಾರ್ಯಕ್ಕಾಗಿ ಪಾಕ್, ಬಾಂಗ್ಲಾ ಮತ್ತು ಟರ್ಕಿಯಿಂದ ಹಣ ಪಡೆಯುತ್ತಿದ್ದರು. 2047ರ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ತರುವುದು ಇವರ ಗುರಿಯಾಗಿತ್ತು ಅನ್ನುವುದು ತನಿಖೆ ವೇಳೆ ಗೊತ್ತಾಗಿದೆ, ಇವರು PFI ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಈ ಹಿಂದೆ SIMIಯೊಂದಿಗೆ ಗುರುತಿಸಿಕೊಂಡಿದ್ದರು ಅನ್ನಲಾಗಿದೆ. ಇದೇ ಪರ್ವೆಜ್ ಸಹೋದರ 2001-02ರಲ್ಲಿ ಸಿಮಿ ಸಂಘಟನೆ ನಿಷೇಧ ಬಳಿಕ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಈ ದಂಪತಿ ಕೋಮು ಗಲಭೆಗೆ ಪ್ರಚೋದನೆ ಹಾಗೂ ಯುವಕರಿಗೆ ಕತ್ತಿ ಚಾಕು ಬಳಕೆಯ ತರಬೇತಿ ನೀಡುತ್ತಿದ್ದರು ಅನ್ನುವ ಆರೋಪವನ್ನೂ ಎದುರಿಸುತ್ತಿದ್ದಾರೆ.
ಮೊಟ್ಟೆ ಬೇಡ… ಮಕ್ಕಳಿಗೆ ಶೂ ಬೇಡ : ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಕರಡಿನಲ್ಲಿ ಸೂಚನೆ
ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯಕ್ರಮದ ಕರಡಿನಲ್ಲಿ ಶಿಕ್ಷಣ ಇಲಾಖೆ ಅನೇಕ ಸಲಹೆಗಳನ್ನು ನೀಡಿದೆ.
ಬೆಂಗಳೂರು : ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡಲಾಗುತ್ತಿರುವ ಮೊಟ್ಟೆ ನಿಲ್ಲಿಸಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರೂಪಿಸಿರುವ ಪಠ್ಯಕ್ರಮ ಕರಡಿನಲ್ಲಿ ಸೂಚಿಸಲಾಗಿದೆ. ಮೊಟ್ಟೆ ಮತ್ತು ಮಾಂಸದಿಂದ ಅನೇಕ ರೋಗಗಳು ಬರುತ್ತದೆ ಹಾಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಸಲಹೆ ನೀಡಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ 25 ವಿಷಯಗಳಲ್ಲಿ ಪಠ್ಯಕ್ರಮವನ್ನು ರೂಪಿಸಿದ್ದು, ಪ್ರತೀ ವಿಷಯದಲ್ಲೂ ಹಲವು ಸಲಹೆಗಳನ್ನು ನೀಡಲಾಗಿದೆ. ಅದರಂತೆ ವರ್ಷದ ಕೊನೆಯ 10 ದಿನ ಬ್ಯಾಗ್ ರಹಿತ ದಿನವನ್ನಾಗಿಸಬೇಕು ಎಂದು ಹೇಳಲಾಗಿತ್ತು. ಆ ದಿನಗಳನ್ನು ಸೇವಾ ದಿನ ಎಂದು ಘೋಷಿಸಿ, ಮಕ್ಕಳನ್ನು ವೃತ್ತಿಪರ ಕುಶಲಕರ್ಮಿಗಳ ಬಳಿ ತರಬೇತಿಗೆ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಲಾಗಿದೆ. ಅಂದ್ರೆ ಕುಂಬಾರ, ಬಡಗಿ ಹೀಗೆ ಅನೇಕ ಕಡೆಗಳಿಗೆ ಮಕ್ಕಳು ತೆರಳಬಹುದಾಗಿದೆ.
ಇದೇ ರೀತೀ ಮಕ್ಕಳು ಶೂ ಹಾಕಬಾರದು ಎಂದು ಸಲಹೆ ನೀಡಲಾಗಿದ್ದು, ಶೂ ಹಾಕುವುದರಿಂದ ಮಕ್ಕಳ ಪಾದಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಪ್ರತಿಯೊಂದು ಶಾಲೆಗಳು ತನ್ನದೇ ಸಮವಸ್ತ್ರ ನೀಡುವುದನ್ನು ತಪ್ಪಿಸಬೇಕು. ಬದಲಾಗಿ ಎಲ್ಲರಿಗೂ ಒಂದೇ ರೀತಿ ಸಮವಸ್ತ್ರ ಇರಬೇಕು. ಸಮವಸ್ತ್ರಕ್ಕಾಗಿ ಖಾದಿ ಬಳಕೆ ಉತ್ತಮ ಅನ್ನುವ ಸಲಹೆಯನ್ನೂ ಕೂಡಾ ನೀಡಲಾಗಿದೆ.
Discussion about this post