ನವದೆಹಲಿ : 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ( supreme court ) ಶಾಕ್ ಕೊಟ್ಟಿದೆ. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ವಿಜಯ್ ಮಲ್ಯಗೆ 4 ತಿಂಗಳ ಜೈಲು ವಿಧಿಸಿದೆ.
2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದ್ದು, ಮದ್ಯದ ದೊರೆ ವಿಜಯ್ ಮಲ್ಯಗೆ ( Vijay Mallya ) ನಾಲ್ಕು ತಿಂಗಳ ಜೈಲು ಶಿಕ್ಷೆ ಜೊತೆಗೆ 2,000 ರೂ ದಂಡ ವಿಧಿಸಲಾಗಿದೆ. 2017ರಲ್ಲಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಮಲ್ಯ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಈ ಹಣಕಾಸು ವರ್ಗಾವಣೆ ಸಂಬಂಧ ನ್ಯಾಯಾಲಯದಿಂದ ( supreme court) ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಮಲ್ಯ ( Vijay Mallya ) ಗುರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ವಿಧಿಸಿದ ದಂಡವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇಡಬೇಕು. ತಪ್ಪಿದಲ್ಲಿ ಎರಡು ತಿಂಗಳ ಶಿಕ್ಷೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ : Bangalore central jail :ಖೈದಿಗಳಿಗೆ ರಾಜಾತಿಥ್ಯ ನೀಡಿದರೆ ಇನ್ಮುಂದೆ ಅಮಾನತು ಇಲ್ಲ : ಕಾರಾಗೃಹ ಕರ್ಮಕಾಂಡದ ಬಳಿಕ ಕ್ರಾಂತಿ
ಇನ್ನು ಮಲ್ಯ ಅವರ ಮಕ್ಕಳಿಗೆ ಮಾಡಿದ 40 ಮಿಲಿಯನ್ ಡಾಲರ್ ವಹಿವಾಟು ಅನೂರ್ಜಿತವಾಗಿದ್ದು, ನಾಲ್ಕು ವಾರಗಳ ಒಳಗೆ ವಸೂಲಾತಿ ಅಧಿಕಾರಿಗೆ ಶೇ.8 ರಷ್ಟು ಬಡ್ಡಿಯೊಂದಿಗೆ ಈ ಮೊತ್ತವನ್ನು ಹಿಂದಿರುಗಿಸುವಂತೆಯೂ ಆದೇಶಿಸಿದೆ. ಒಂದು ವೇಳೆ ಮೊತ್ತ ಹಿಂತಿರುಗಿಸದಿದ್ದರೆ ಮಲ್ಯ ಅವರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನು ಸಂಬಂಧ ಪಟ್ಟ ಇಲಾಖೆಗೆ ನೀಡಿದೆ.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠದಿಂದ ಈ ಆದೇಶ ಹೊರ ಬಿದ್ದಿದೆ.
Crime news : ಎಣ್ಣೆ ಏಟಿನಲ್ಲಿ ಪತ್ನಿ ಮಗನಿಗೆ ಮಚ್ಚಿನೇಟು ಕೊಟ್ಟು ನೇಣಿಗೆ ಕೊರಳೊಡ್ಡಿದ ತಂದೆ
ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಅನ್ನುವ ಹಳೆಯ ಮಾತು ಹೀಗೆ ಕಂಠ ಪೂರ್ತಿ ಕುಡಿಯುವ ಕಾರಣದಿಂದ ಅದೆಷ್ಟೋ ಹೆಂಡತಿ ಮಕ್ಕಳು ಪ್ರಾಣ ( Crime news ) ಕಳೆದುಕೊಳ್ಳುವಂತಾಗಿದೆ.
ಕಾರವಾರ : ವ್ಯಕ್ತಿಯೊಬ್ಬನ ಮದ್ಯದ ಚಟಕ್ಕೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಕುಮಟಾ ತಾಲೂಕಿನ ಬಗಣೆ ಗ್ರಾಮದಲ್ಲಿ ನಡೆದಿದೆ. ( Crime news ) ಮೃತರನ್ನು ರಾಮಾ ಮರಾಠಿ ( 40) ಅವರ ಪತ್ನಿ ತಾಕಿ ಮತ್ತು ಮಗ ಲಕ್ಷ್ಮಣ ( 12 ) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ದಂಪತಿಯ ಮತ್ತೊಬ್ಬ ಪುತ್ರ ಭಾಸ್ಕರ ಅನ್ನುವವನು ಬದುಕುಳಿದಿದ್ದಾನೆ.
ರಾಮ ಮರಾಠಿ ವಿಪರೀತ ಕುಡಿತದ ಚಟ ಹತ್ತಿಸಿಕೊಂಡಿದ್ದ. ದಿನ ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಹೀಗೆ ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿಯೂ ಪತ್ನಿಯೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಅದಾಕ್ಯೋ ಭಾನುವಾರ ರಾತ್ರಿ ಜಗಳದ ಅಬ್ಬರ ಜೋರಾಗಿಯೇ ಇತ್ತು. ಇದು ನಿತ್ಯದ ಜಗಳ ಎಂದು ಅಕ್ಕ ಪಕ್ಕದ ಮನೆಯವರು ಸುಮ್ಮನಾಗಿದ್ದಾರೆ.
ಆದರೆ ಬೆಳಗಾಗುವ ಹೊತ್ತಿಗೆ ರಾಮಾ ಮರಾಠಿ ನೇಣಿಗೆ ಕೊರಳೊಡ್ಡಿ ಮೃತಪಟ್ಟಿದ್ದ. ತಾಕಿ ಮತ್ತು ಮಗ ಲಕ್ಷ್ಮಣ ಮಚ್ಚಿನೇಟಿಗೆ ಹೆಣವಾಗಿ ಬಿದ್ದಿದ್ದರು. ಈ ನಡುವೆ ಭಾಸ್ಕರ ಅನ್ನುವ ಪುತ್ರ ಪ್ರಾಣ ಉಳಿಸಿಕೊಂಡಿದ್ದಾನೆ. ಇದೀಗ ಭಾಸ್ಕರ ಕೊಟ್ಟಿರುವ ಹೇಳಿಕೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ.
ಭಾಸ್ಕರ ಕೊಟ್ಟಿರುವ ಹೇಳಿಕೆ ಪ್ರಕಾರ, ತಂದೆ ರಾತ್ರಿ ಕುಡಿದ ಮತ್ತಿನಲ್ಲಿ ಗಲಾಟೆ ಪ್ರಾರಂಭಿಸಿದ್ದಾರೆ. ಈ ವೇಳೆ ಮಚ್ಚು ಕೈಗೆತ್ತಿಕೊಂಡ ತಂದೆ ತಾಯಿಯನ್ನು ಕೊಲೆ ಮಾಡಿದ್ದಾರೆ. ತಡೆಯಲು ಹೋದ ವೇಳೆ ಲಕ್ಷ್ಮಣ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ಭಾಸ್ಕರನ ಮೇಲೆ ಹಲ್ಲೆ ಮಾಡಲು ಬಂದಾಗ ಆತ ತಪ್ಪಿಸಿಕೊಂಡಿದ್ದಾನೆ.
Discussion about this post