ಈ ಬಾರಿ ಕನ್ನಡದಲ್ಲಿ ಎರಡೆರಡು Bigg Boss ಕಾರ್ಯಕ್ರಮ ಮೂಡಿಬರಲಿದೆ. ಮೊದಲು ಮಿನಿ ಸೀಸನ್ ( bigg boss mini season) ನಡೆದರೆ ಬಳಿಕ ಮಹಾ ಸೀಸನ್ ನಡೆಯಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ( kiccha sudeep ) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. Drone Prathap ಬೇರೆ ಈ ಬಾರಿ ಕಾಗೆ ಹಾರಿಸ್ತಾರೆ.
ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ( Bigg Boss kannada ) ಯಾವಾಗ ಅನ್ನುವ ಪ್ರಶ್ನೆ ಎಲ್ಲರಲ್ಲಿದೆ. ಮೊದಲು ಐಪಿಎಲ್ ಮುಗಿಯಲಿ ಆಮೇಲೆ ಬಿಗ್ ಬಾಸ್ ಶುರುವಾಗಲಿದೆ ಅನ್ನಲಾಗಿತ್ತು. ಆದಾದ ಬಳಿಕ ವಿಕ್ರಾಂತ್ ರೋಣ ( vikrant rona) ಬಿಡುಗಡೆಯ ಗಡಿಬಿಡಿಯಲ್ಲಿ ಸುದೀಪ್ ( Sudeep ) ಇದ್ದಾರೆ. ಹೀಗಾಗಿ ವಿಕ್ರಾಂತ್ ರೋಣ ಬಿಡುಗಡೆಯ ನಂತರವೇ ಬಿಗ್ ಬಾಸ್ ಕನ್ನಡ ಶುರುವಾಗಲಿದೆ ಅನ್ನಲಾಗಿತ್ತು. ಅಂದ ಹಾಗೇ Drone Prathap ಈ ಬಾರಿ ಮಹಾಮನೆಯಲ್ಲಿ ಇರ್ತಾರಂತೆ.
ಇದೀಗ ಹೊಸ ಸುದ್ದಿಯೊಂದು ಬಂದಿದ್ದು, ಬಿಗ್ ಬಾಸ್ ಕಾರ್ಯಕ್ರಮ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಎರಡು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ವೂಟ್ ( voot select ) ಸಲುವಾಗಿ ಮೊದಲು ಮಿನಿ ಸೀಸನ್ ನಡೆಯಲಿದೆ. ಕಿರುತೆರೆಯ ಕೆಲ ಮಂದಿ, ಸೋಶಿಯಲ್ ಮೀಡಿಯಾದ ಕಿರಿಕ್ ಸ್ಟಾರ್ ಗಳು ಸೇರಿದಂತೆ ಕೆಲ ಅರೆಬೆಂದ ಸೆಲೆಬ್ರೆಟಿಗಳು ಪಾಲ್ಗೊಳ್ಳಲಿದ್ದಾರೆ. ಎಂದಿನಂತೆ ಇಲ್ಲಿ ವಾರಾಂತ್ಯದ ಕಾರ್ಯಕ್ರಮವನ್ನು ( kiccha sudeep ) ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ : Fake call center in bangalore : ಬೆಂಗಳೂರಿನಲ್ಲಿ ಕೂತು ವಿಶ್ವದ ದೊಡ್ಡಣ್ಣನಿಗೆ ವಂಚನೆ : ನಕಲಿ ಕಾಲ್ ಸೆಂಟರ್ ನ ಅಸಲಿ ಕಹಾನಿ
ಇದಾದ ಬಳಿಕ ಕಲರ್ಸ್ ವಾಹಿನಿಗಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ. ಮಿನಿ ಸೀಸನ್ ನ ಟಾಪ್ 5 ಸ್ಪರ್ಧಿಗಳ ಜೊತೆಗೆ ಸೆಲೆಬ್ರೆಟಿಗಳು ಇಲ್ಲಿ ಪಾಲು ಪಡೆಯುತ್ತಾರೆ,
ಇದೀಗ ಬಂದಿರುವ ಮಾಹಿತಿ ಪ್ರಕಾರ ಶಿವ ಪುತ್ರ, ರೂರಲ್ ರಂಜನ್ ಹಾಗೂ ಡ್ರೋಣ್ ಪ್ರತಾಪ್ ಮಿನಿ ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.ಜೊತೆಗೆ ಸ್ವಯಂ ಘೋಷಿತ ಕೆಲ ಸೆಲೆಬ್ರೆಟಿ ಸ್ಟಾರ್ ಗಳ ಜೊತೆಗೆ ಮಾತುಕತೆ ಕೂಡಾ ನಡೆಯುತ್ತಿದೆ.
coronavirus bangalore : ಕೊರೋನಾ ಸೋಂಕಿಗೆ 16ರ ಬಾಲಕ ಬಲಿ : ಬೆಂಗಳೂರಿನಲ್ಲಿ ಇಳಿದ ಸೋಂಕಿನ ಅಬ್ಬರ
ನಾಲ್ಕನೇ ಅಲೆಯ ಭೀತಿಯ ನಡುವೆ ಜನ ಮಾಸ್ಕ್ ಮರೆತು ಓಡಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಪದೇ ಪದೇ ಮಾಡುತ್ತಿರುವ ಮನವಿ ಆದ್ಯಾಕೆ ಜನ ಕ್ಯಾರೇ ಅನ್ನುತ್ತಿಲ್ಲ ( coronavirus bangalore)
ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನ ( coronavirus bangalore ) ಸ್ವಲ್ಪ ಕಡಿಮೆಯಾಗಿದೆ. ಶುಕ್ರವಾರ 932 ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ 4.97ಕ್ಕೆ ಇಳಿದಿದೆ. 902 ಮಂದಿ ಕೊರೋನಾ ಗೆದ್ದಿದ್ದಾರೆ.
ಪ್ರಸ್ತುತ ನಗರದಲ್ಲಿ 6,062 ಕೊರೋನಾ ಸೋಂಕಿನ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಐಸಿಯುನಲ್ಲಿದ್ದು, ಉಳಿದವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶುಕ್ರವಾರ ಕೂಡಾ ಲಸಿಕಾ ವಿತರಣಾ ಕಾರ್ಯ ಮುಂದುವರಿದಿದ್ದು, 829 ಮಂದಿ ಮೊದಲ ಡೋಸ್ ಹಾಗೂ 2119 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 3375 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.
ಶುಕ್ರವಾರ ನಗರದಲ್ಲಿ ಯಾವುದೇ ಕಂಟೈನ್ಮೆಂಟ್ ಝೋನ್ ನಿರ್ಮಾಣವಾಗಿಲ್ಲ. ಆರ್ ಆರ್ ನಗರ ವಲಯದಲ್ಲಿದ್ದ ಒಂದು ಕಂಟೈನ್ಮೆಂಟ್ ಪ್ರದೇಶ ಮುಕ್ತವಾಗಿದೆ. ಈ ಮೂಲಕ ಕಂಟ್ಮೈನ್ಮೆಂಟ್ ಪ್ರದೇಶದ ಸಂಖ್ಯೆ 21ಕ್ಕೆ ಇಳಿದಿದೆ.ರಾಜಧಾನಿಯಲ್ಲಿ ಶುಕ್ರವಾರ 17030 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು.
ಇನ್ನು ಶುಕ್ರವಾರ ಇಡೀ ರಾಜ್ಯದಲ್ಲಿ 1037 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 24 ಜಿಲ್ಲೆಗಳಲ್ಲಿ ಹೊಸ ಪ್ರಕರಣ ಕಾಣಿಸಿಕೊಂಡಿದೆ. 984 ಮಂದಿ ಸೋಂಕಿನ ಗುಣಮುಖರಾಗಿದ್ದು, 6506 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದೆ. ಒಟ್ಟು 24 ಸಾವಿರ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇ 4.2ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಮೂರು ಸಾವಿರದಷ್ಟು ಕಡಿಮೆ ಸೋಂಕು ಪರೀಕ್ಷೆ ನಡೆಸಲಾಗಿದೆ.
Discussion about this post