10 ತಿಂಗಳ ಹಿಂದೆ ನದಿಗೆ ಬಿದ್ದ ಐಫೋನ್ ಅನ್ನು ಮಾಲೀಕರು ಅದನ್ನು ಮರಳಿ ಪಡೆದಿದ್ದು, 10 ತಿಂಗಳ ನಂತರವೂ ಫೋನ ಕಂಡೀಷನ್ ಕಂಡು ಅಚ್ಚರಿಯಾಗಿದೆ
ಇಂಗ್ಲೆಂಡ್ ಮೂಲದ ಓವೈನ್ ಡೇವಿಸ್ ಸಿಂಡಫೋರ್ಡ್ ನಲ್ಲಿರುವ Wye ನದಿಯಲ್ಲಿ ಫೋನ್ ಕಳೆದುಕೊಂಡಿದ್ದರು. ಬ್ಯಾಟುಲರ್ ಪಾರ್ಟಿ ಮಾಡಲು ಹೋಗಿದ್ದ ವೇಳೆ ಅವರ ಫೋನ್ ಪ್ಯಾಂಟ್ ಪಾಕೆಟ್ ನಿಂದ ಕಳಚಿ ನದಿ ತಳ ಸೇರಿತ್ತು. ಅಲ್ಲಿಗೆ ಡೇವಿಸ್ ತಮ್ಮ ಫೋನ್ ಆಸೆಯನ್ನು ಕಳೆದುಕೊಂಡಿದ್ದರು. ಬದುಕಿನ ಹಲವಾರು ನೆನಪುಗಳು ನೀರು ಪಾಲಾಯ್ತು ಎಂದು ನೊಂದುಕೊಂಡರು.
ಈ ಘಟನೆ ನಡೆದು 10 ತಿಂಗಳು ಕಳೆದು ಹೋಗಿದೆ. Wye ನದಿಯಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಟ್ಟವರಾರು. ಈ ನಡುವೆ ಮಿಗುಯೆಲ್ ಪಚೆಕೋ ಅನ್ನುವವರು ತಮ್ಮ ಕುಟುಂಬದ ಜೊತೆ ಇದೇ ನದಿಯಲ್ಲಿ ದೋಣಿ ವಿಹಾರ ನಡೆಸುವಾಗ ಮೊಬೈಲ್ ಕಣ್ಣಿಗೆ ಬಿದ್ದಿದೆ.
ಮನೆಗೆ ಬಂದವರೇ ಮೊಬೈಲ್ ಫೋನ್ ಅನ್ನು ಜಾರ್ಜ್ ಗೆ ಹಾಕಿದ್ದಾರೆ. ಅಚ್ಚರಿ ಅನ್ನುವಂತೆ ಜಾರ್ಜ್ ಆಗಲಾರಂಭಿಸಿದೆ, ಆನ್ ಮಾಡಿದ್ರೆ ಫೋನ್ ಆನ್ ಆಗಿದೆ. ಫೋನ್ ಕಳೆದುಕೊಂಡವರ ನೋವು ಏನು ಅನ್ನುವುದು ಪಚಕೋ ಅವರಿಗೆ ಗೊತ್ತಿತ್ತು. ಫೋನ್ ನಲ್ಲಿ ಅನೇಕ ಭಾವನಾತ್ಮಕ ವಿಚಾರಗಳು ಇರುತ್ತವೆ ಅನ್ನುವ ಕಾರಣದಿಂದ, ಐಫೋನ್ ಮಾಲೀಕರ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದು ಮಾಲೀಕರಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ದುರಾದೃಷ್ಟ ಅಂದ್ರೆ ಓವೈನ್ ಡೇವಿಸ್ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರಲಿಲ್ಲ. ಮಿಗುಯೆಲ್ ಪಚೆಕೋ ಬರೆದ ಪೋಸ್ಟ್ ಸಾವಿರಾರು ಶೇರ್ ಆದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ನಡುವೆ ಪೋಸ್ಟ್ ಗಮನಿಸಿದ ಓವೈನ್ ಡೇವಿಸ್ ಗೆಳೆಯರೊಬ್ಬರು ವಿಷಯ ಮುಟ್ಟಿಸಿದ್ದಾರೆ. ಇದೀಗ ಫೋನ್ ಪಡೆದಿರುವ ಓವೈನ್ ಡೇವಿಸ್ ಸಖತು ಖುಷಿಯಾಗಿದ್ದಾರೆ.
Discussion about this post