ಬೆಳಗಾವಿ : ಪೂಜೆ ಮುಗಿಸಿ ತೀರ್ಥ ಸೇವಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕೃಷ್ಣನ ವಿಗ್ರಹವನ್ನೂ ನುಂಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ 45 ರ್ಷದ ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಬಾಲಕೃಷ್ಣನ ಮೂರ್ತಿಯನ್ನು ನುಂಗಿದ್ದಾರೆ. ಪ್ರತಿ ನಿತ್ಯ ದೇವರ ಪೂಜೆ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರಂತೆ.
ವಿಗ್ರಹ ನುಂಗಿದ ಕೆಲವೇ ಗಂಟೆಗಳಲ್ಲಿ ಗಂಟಲು ಊದಿಕೊಂಡು ನೋವು ಕಾಣಿಸಿದೆ. ಅಚ್ಚರಿ ಅಂದ್ರೆ ವಿಗ್ರಹ ನುಂಗಿದ ವ್ಯಕ್ತಿಗೆ ತಾನೇನು ನುಂಗಿದ್ದೇನೆ ಅನ್ನುವುದು ಕೂಡಾ ಗೊತ್ತಿರಲಿಲ್ಲವಂತೆ. ಪೂಜೆಯ ಬಳಿಕೆ ಇದೇನು ಹೀಗೆ ಗಂಟಲು ನೋಯುತ್ತಿದೆ, ಊದಲಾರಂಭಿಸಿದೆ ಎಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ತೋರಿಸಿದ್ದಾರೆ.
ಎಂಡೋಸ್ಕೋಪ್ ಮಾಡಿದ ಕೃಷ್ಣನ ವಿಗ್ರಹ ಗಂಟಲಲ್ಲಿ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಜೊತೆಗೆ ಮೂರ್ತಿಯ ಎಡಗಾಲು ಅನ್ನ ನಾಲದಲ್ಲಿ ಸಿಲುಕಿತ್ತು. ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೂ ದನಿ ಪೆಟ್ಟಿಗೆ ಹಾಗೂ ಅನ್ನನಾಳಕ್ಕೆ ತೊಂದರೆಯಾಗುವ ಅಪಾಯವಿತ್ತು.
ಹೀಗಾಗಿ ಆಸ್ಪತ್ರೆಯ ವಿವಿಧ ವಿಭಾಗದ ವೈದ್ಯರು ಸಮಾಲೋಚನೆ ನಡೆಸಿ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ. ಇದೀಗ ವ್ಯಕ್ತಿ ಗುಣಮುಖರಾಗುತ್ತಿದ್ದು, ಒಂದು ವಾರದಲ್ಲಿ ಮನೆಗೆ ತೆರಳಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
Discussion about this post