ದುಬೈ : ಇತ್ತೀಚಿನ ವರ್ಷಗಳಲ್ಲಿ ಕ್ಯಾಟ್ ವಾಕ್, ಸೌಂದರ್ಯ ಸ್ಪರ್ಧೆ ಅನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಪ್ರಾಣಿಗಳಿಗೂ ಸೌಂದರ್ಯ ಸ್ಪರ್ಧೆಗಳು ಶುರುವಾಗಿದೆ. ನಾಯಿ, ಬೆಕ್ಕು, ಕೋಳಿ ಹೀಗೆ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳನ್ನು ತಂದು ಪ್ರದರ್ಶಿಸಿ ಬಹುಮಾನ ಗಿಟ್ಟಿಸುವ ಮಂದಿ ಸಾಕಷ್ಟಿದ್ದಾರೆ.
ಹೀಗೆ ಇಂತಹುದೇ ಸ್ಪರ್ಧೆ ಸೌದಿ ಆರೇಬಿಯಾದಲ್ಲಿ ಆಯೋಜಿಸಲಾಗುತ್ತದೆ. ಹೇಳಿ ಕೇಳಿ ಅರಬರ ನಾಡಿನಲ್ಲಿ ಬಿಸಿಲು ಮತ್ತು ಮರಳು ಯಥೇಚ್ಛವಾಗಿದೆ. ಈ ಕಾರಣದಿಂದ ಒಂಟೆಗಳು ಇಲ್ಲಿ ಜೀವನದ ಭಾಗವಾಗಿಯೇ ಹೋಗಿದೆ. ಹಾಗಂತ ಇಲ್ಲಿ ಒಂಟೆಗಳನ್ನು ಅಗತ್ಯಕ್ಕಾಗಿ ಮಾತ್ರ ಸಾಕುತ್ತಿಲ್ಲ, ಬದಲಾಗಿ ಶೋಕಿಗಾಗಿಯೂ ಒಂಟೆ ಸಾಕುವವರಿದ್ದಾರೆ.
ಹೀಗೆ ಶೋಕಿಗಾಗಿ ಒಂಟೆ ಸಾಕಿದವರೇ ಸೇರಿ ಸೌದಿ ಅರೇಬಿಯಾದಲ್ಲಿ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವ ಆಯೋಜಿಸಲಾಗುತ್ತದೆ. ಒಂಟೆ ಬ್ರೀಡರ್ ಗಳು ತಮ್ಮ ಒಂಟೆಗಳೊಂದಿಗೆ ಸ್ಪರ್ಧೆಗೆ ಆಗಮಿಸುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 66 ಮಿಲಿಯನ್ ಡಾಲರ್ ಬಹುಮಾನವೂ ಸಿಗುತ್ತದೆ. ಒಂಟೆಗಳ ತಲೆ, ಕುತ್ತಿಗೆ, ಡುಬ್ಬ, ಉಡುಗೆ ಮತ್ತು ಭಂಗಿಗಳ ಆಕಾರದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಹಾಗಂತ ಒಂಟೆಗಳು ನೈಸರ್ಗಿಕವಾಗಿಯೇ ಸೌಂದರ್ಯವಾಗಿ ಕಾಣಬೇಕು. ಅದನ್ನು ಹೊರತುಪಡಿಸಿ ಚುಚ್ಚುಮದ್ದು ಸೇರಿದಂತೆ ಅಡ್ಡ ಮಾರ್ಗದ ಮೂಲಕ ಒಂಟೆಯ ಸೌಂದರ್ಯ ಹೆಚ್ಚಿಸಿದ್ರೆ ಸ್ಪರ್ಧೆಯಿಂದ ಗೇಟ್ ಪಾಸ್ ನೀಡಲಾಗುತ್ತದೆ. ಮಾತ್ರವಲ್ಲದೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ.
ಅಂದ ಹಾಗೇ ಸೌದಿಯ ರಾಜಧಾನಿ ರಿಯಾದ್ನ ಈಶಾನ್ಯ ಮರುಭೂಮಿಯಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿರುವ ಒಂಟೆಯ ಸ್ಪರ್ಧೆಯಿಂದ ಈಗಾಗಲೇ 40 ಒಂಟೆಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಇನ್ನು ಭಾರತದಲ್ಲೂ ಇಂತಹುದೇ ಸ್ಪರ್ಧೆ ನಡೆಯುತ್ತದೆ. ರಾಜಸ್ತಾನದಲ್ಲಿ ಕಾರ್ತಿಕ ಹುಣ್ಣಿಮೆಯಂದು ಆಚರಿಸುವ ಪುಷ್ಕರ್ ಮೇಳದಲ್ಲಿ ಒಂಟೆಗಳ ಶೃಂಗಾರ ನೋಡುವುದೇ ಕಣ್ಣಿಗೆ ಹಬ್ಬ. ಹೆಚ್ಚು ಕಡಿಮೆ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಪುಷ್ಕರ್ ಮೇಳ ದೇಶದ ಅತ್ಯಂತ ಹಳೆಯ ಪಶು ಮೇಳ ಎಂದು ಕರೆಸಿಕೊಂಡಿದೆ.
ಎರಡನೇ ಪತಿಯ ಮಾತು ಕೇಳಿ ಹುಟ್ಟಿಸಿದ ಮಕ್ಕಳನ್ನೇ ಕೊಲೆ ಮಾಡಲು ಮುಂದಾದ ತಂದೆ
ವಿಜಯಪುರ : ಎರಡನೇ ಪತಿಯ ಮಾತು ಕೇಳಿ ಮೊದಲ ಪತ್ನಿಯ ಮಕ್ಕಳನ್ನು ಪಾಪಿ ತಂದೆಯೊಬ್ಬ ಕೊಲೆ ಮಾಡಲು ಮುಂದಾದ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ಹುಟ್ಟಿಸಿದ ತಂದೆಯ ಈ ಕೃತ್ಯದಿಂದ ಒಂದು ಮಗು ಮೃತಪಟ್ಟಿದ್ದು ಮತ್ತೊಂದು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಿಂಚನಾಳ ತಾಂಡಾದ ವಿನೋದ್ ಚೌಹಾಣ್ ಎಂಬಾತ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಆ ಸಂಸಾರದಲ್ಲಿ ಎರಡು ಮಕ್ಕಳಿತ್ತು. ಮೊದಲ ಪತ್ನಿ ಮೃತಪಟ್ಟ ಬೆನ್ನಲ್ಲೇ ಸವಿತಾ ಎಂಬಾಕೆಯನ್ನು ವರಿಸಿದ್ದ ವಿನೋದ್ ಸಂಸಾರ ಸಾಗಿಸಿದ್ದ. ಆದರೆ ಸವಿತಾಳಿಗೆ ಗಂಡನ ಮೊದಲ ಪತ್ನಿಯ ಮಕ್ಕಳು ಹೊರೆ ಅನ್ನಿಸಿದೆ. ಹೀಗಾಗಿ ಸದಾ ಕಿರುಕುಳ ನೀಡುತ್ತಿದ್ದಳು.
ಮಾತ್ರವಲ್ಲದೆ ಮೊದಲ ಪತ್ನಿಯ ಎರಡೂ ಮಕ್ಕಳನ್ನು ಕೊಲೆ ಮಾಡುವಂತೆ ಪತಿಗೆ ಕುಮ್ಮಕ್ಕು ನೀಡಿದ್ದಾಳೆ. ಪತ್ನಿಯ ಮಾತು ಕೇಳಿದ ವಿನೋದ್ ಮಕ್ಕಳನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ಪ್ರಯತ್ನದಲ್ಲಿ ಸುಮಿತ್ ಅನ್ನುವ ಬಾಲಕ ಮೃತಪಟ್ಟಿದ್ದು ಮತ್ತೊಬ್ಬ ಬಾಲಕ ಸಂಪತ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.
ಇದೀಗ ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post