ನವದೆಹಲಿ : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್ ಸೇರಿದಂತೆ ಇತರ ಸೇನಾ ಸಿಬ್ಬಂದಿಗೆ ಇಡೀ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಗುರುವಾರ ರಾತ್ರಿ ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅಗಲಿದ ವೀರಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಈ ನಡುವೆ ದುರ್ಘಟನೆಯಲ್ಲಿ ಮೃತಪಟ್ಟ ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಮೂವರ ಶವಗಳನ್ನು ಮಾತ್ರ ಗುರುತಿಸಲಾಗಿದೆ. ಇನ್ನುಳಿದ 10 ಪಾರ್ಥಿವ ಶರೀರಗಳ ಗುರುತು ಪತ್ತೆಗೆ ಪ್ರಕ್ರಿಯೆ ನಡೆಯುತ್ತಿದೆ.
ಇನ್ನು ಬಿಪಿನ್ ರಾವತ್ ಅಕಾಲಿಕ ಮರಣದಿಂದ ಖಾಲಿಯಾಗಿರುವ ಸಿಡಿಎಸ್ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡುವ ಅನಿವಾರ್ಯತೆ ಸರ್ಕಾರಕ್ಕಿದೆ. ನೋವಿನ ನಡುವೆಯೂ ಆಡಳಿತಾತ್ಮಕ ಕಾರಣದಿಂದ ಹುದ್ದೆಯನ್ನು ಖಾಲಿ ಬಿಡೋ ಹಾಗಿಲ್ಲ. ಹೀಗಾಗಿ ಇನ್ನು 7 ದಿನದಲ್ಲಿ ಹೊಸ ಸಿಡಿಎಸ್ ನೇಮಕ ಆದೇಶ ಹೊರ ಬೀಳುವ ಸಾಧ್ಯತೆಗಳಿದೆ.
ಮಾಹಿತಿಗಳ ಪ್ರಕಾರ ಸಶಸ್ತ್ರ ಪಡೆಗಳ ಮುಖ್ಯಸ್ಥರ (CDS ) ಹುದ್ದೆ ರೇಸ್ ನಲ್ಲಿ ಹಾಲಿ ಸೇನಾ ಮುಖ್ಯಸ್ಥ ಜ. ಮನೋಜ್ ನರವಣೆ ಹಾಗೂ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್.ಕೆ. ಎಸ್ ಭದೌರಿಯಾ ಇದ್ದಾರಂತೆ. ಭದೌರಿಯಾ 42 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
Chief of Army Staff (COAS) General Manoj Mukund Naravane and former IAF chief Air Chief Marshal RKS Bhadauria (Retd).
ಲಸಿಕೆಗಾಗಿ ಕೃತಕ ಕೈ ಖರೀದಿಸಿದ ದಂತ ವೈದ್ಯ : ಆರೋಗ್ಯ ಸಿಬ್ಬಂದಿ ವಂಚಿಸಲು ಹೋದವ ಅಂದರ್
ಇಟಲಿ : ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಭಾರತದಲ್ಲಿ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಕೇರಳದಂತಹ ಸಾಕ್ಷರ ರಾಜ್ಯ ನೇಮ್ ಅಂಡ್ ಶೇಮ್ ಮೂಲಕ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಈ ಎಲ್ಲಾ ಪ್ರಯತ್ನಗಳ ಕಾರಣದಿಂದಾಗಿಯೇ ದೇಶದಲ್ಲಿ ಮೂರನೇ ಅಲೆಯ ಭೀತಿ ತಗ್ಗಿದೆ. ಒಂದು ವೇಳೆ ಹೀಗೆ ಲಸಿಕೆ ವಿತರಣೆಯಾಗದಿರುತ್ತಿದ್ರೆ ಇಷ್ಟು ಹೊತ್ತಿಗೆ ಒಮಿಕ್ರಾನ್ ಸುನಾಮಿ ಸ್ವರೂಪ ಪಡೆದಿರುತ್ತಿತ್ತು.
ಹಾಗಂತ ಎಲ್ಲರೂ ಲಸಿಕೆ ಪಡೆದಿದ್ದಾರೆಯೇ ಖಂಡಿತಾ ಇಲ್ಲ, ಕೆಲವರಿಗೆ ಲಸಿಕೆ ಅಂದ್ರೆ ಅದೇನೋ ಅಸಡ್ಡೆ. ಈ ಕಾರಣಕ್ಕಾಗಿಯೇ ಒಂದಲ್ಲ ಒಂದು ನೆಪವೊಡ್ಡಿ ಲಸಿಕೆ ನಿರಾಕರಿಸುತ್ತಿದ್ದಾರೆ. ಕೆಲವರಿಗೆ ದೇವರೇ ಮೈ ಬರ್ತಾರೆ, ಮತ್ತೆ ಕೆಲವರು ದೇವರು ಲಸಿಕೆ ತೆಗೆದುಕೊಳ್ಳಬೇಡ ಅಂದಿದ್ದಾರೆ ಅಂತಾರೆ. ಇನ್ನು ಕೆಲವರು ಲಸಿಕೆಯಿಂದ ಅಪಾಯವಿಲ್ಲ ಎಂದು ಸರ್ಟಿಫಿಕೆಟ್ ಕೊಡಿ ಅಂತಾರೆ.
ಈ ನಡುವೆ ವಿದೇಶದ ಅನೇಕ ರಾಷ್ಟ್ರಗಳಲ್ಲೂ ಲಸಿಕೆ ವಿಚರಣೆಗೆ ವೇಗ ನೀಡಲಾಗಿದೆ. ಇಟಲಿಯೂ ಕೂಡಾ ಇದಕ್ಕೆ ಹೊರತಾಗಿಲ್ಲ. ಲಸಿಕೆ ಪಡೆಯದವರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಿದೆ. ಒಂದು ವೇಳೆ ಭಾಗವಹಿಸಬೇಕಾದರೆ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯ.
ಹೀಗಾಗಿ ಲಸಿಕೆ ಪಡೆಯಲು ಇಚ್ಛೆ ಇಲ್ಲದ ವ್ಯಕ್ತಿಯೊಬ್ಬ ಪ್ರಮಾಣ ಪತ್ರಕ್ಕಾಗಿ ಖತರ್ನಾಕ್ ಐಡಿಯಾ ಮಾಡಿದ್ದಾನೆ. ಕೃತ ಕೈಯೋಂದನ್ನು ಖರೀದಿಸಿ ಅದಕ್ಕೆ ಚರ್ಮವನ್ನೇ ಹೋಲುವಂತೆ ಸಿಲಿಕಾನ್ ಹೊದಿಕೆ ಹೊದಿಸಿ ಲಸಿಕಾ ಕೇಂದ್ರಕ್ಕೆ ಬಂದಿದ್ದಾನೆ. ಇನ್ನೇನು ಆರೋಗ್ಯ ಸಿಬ್ಬಂದಿ ಲಸಿಕೆ ಚುಚ್ಚುಬೇಕು, ನರ್ಸ್ ಗೆ ಅನುಮಾನ ಬಂದಿದೆ. ಚರ್ಮ ಮುಟ್ಟಿದ್ರೆ ರಬ್ಬರ್ ಮುಟ್ಟಿದಂತಾಗುತ್ತಿತ್ತು ಮತ್ತು ಸಿಕ್ಕಾಪಟ್ಟೆ ತಂಪಾಗಿತ್ತು.
ತಕ್ಷಣ ಎಚ್ಚೆತ್ತುಕೊಂಡ ನರ್ಸ್ ಶರ್ಟ್ ಬಿಟ್ಟಿಸಿದ್ರೆ ಅಸಲಿ ಕಥೆ ಗೊತ್ತಾಗಿದೆ. ತಕ್ಷಣ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಂದ ಹಾಗೇ ಹೀಗೆ ವಂಚಿಸಲು ಮುಂದಾದವನು ದಂತ ವೈದ್ಯನೆಂದು ಗೊತ್ತಾಗಿದೆ.
Discussion about this post