ಒಂದೆರೆಡು ಸಿನಿಮಾಗಳಲ್ಲಿ ನಟಿಸಿ ತೆರೆಮರೆಗೆ ಸರಿದು ನಾಲ್ಕೈದು ವರ್ಷಗಳಾದ ಬಳಿಕ ಆ ನಟಿ ಗರ್ಭಿಣಿಯಾದ್ರೆ ರಾಜ್ಯವೇ ಸಂಭ್ರಮಿಸುತ್ತದೆ. ಆದರೆ ತುಂಬು ಗರ್ಭಿಣಿ ಸಂಸದೆಯೊಬ್ಬರು ಸೈಕಲ್ ತುಳಿದು ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ಕೊಟ್ರೆ ಸುದ್ದಿಯಾಗುವುದಿಲ್ಲ. ಹೀಗೆ ಸದ್ದು ಮಾಡದ ಸುದ್ದಿಯೊಂದನ್ನು ನಾವು ನಿಮಗೆ ಹೇಳ್ತಿವಿ.
ಅಂದ ಹಾಗೇ ಈ ಘಟನೆ ನಡೆದಿದ್ದು ಭಾರತದಲ್ಲಿ ಅಲ್ಲ. ಯಾಕಂದ್ರೆ ಭಾರತದ ರಾಜಕಾರಣಿಗಳಿಗೆ ಇಷ್ಟೆಲ್ಲಾ ಸರಳತೆ ಇರಲು ಸಾಧ್ಯವೇ ಇಲ್ಲ, ಶೂ ಹಾಕಿಕೊಳ್ಳಲು ಇವರಿಗೆ ಸರ್ಕಾರಿ ನೌಕರರೇ ಬೇಕು. ಈ ಘಟನೆ ನಡೆದಿರುವುದು ದೂರದ ನ್ಯೂಜಿಲೆಂಡ್ ನಲ್ಲಿ.
ಅಲ್ಲಿನ ಗ್ರೀನ್ ಪಾರ್ಟಿಯ ಸಂಸದೆ ಜುಲಿ ಅನ್ನೇ ಗಾಂಟರ್ ( Julie Anne Gente ) ಸಣ್ಣದಾಗಿ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಸೈಕಲ್ ತುಳಿದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗುತ್ತದೆ ಅನ್ನುವ ಭಾವನೆಯೂ ಅವರಿಗೆ ಇರಲಿಲ್ಲ. ನೋವು ತೀರಾ ಸಣ್ಣದಾಗಿದ್ದ ಕಾರಣ ಹೆರಿಗೆಗೆ ಮತ್ತಷ್ಟು ಸಮಯಬೇಕಾಗಬಹುದು ಅಂದುಕೊಂಡಿದ್ದರು. ಆದರೆ ಸೈಕಲ್ ತುಳಿದು ಆಸ್ಪತ್ರೆ ಸೇರಿದ ಕೆಲವೇ ಗಂಟೆಗಳಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ.
ಅಂದ ಹಾಗೇ ಅವರು ಸೈಕಲ್ ತುಳಿದುಕೊಂಡು ಹೋಗುವಾಗ ರಾತ್ರಿ ಎರಡು ಗಂಟೆಯಾಗಿತ್ತು.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು , Big news! At 3.04am this morning we welcomed the newest member of our family. I genuinely wasn’t planning to cycle in labour, but it did end up happening. My contractions weren’t that bad when we left at 2am to go to the hospital – though they were 2-3 min apart and picking up in intensity by the time we arrived 10 minutes later. (I’m smiling in the car park right after one.) And amazingly now we have a healthy, happy little one sleeping, as is her dad.
Feeling blessed to have had excellent care and support from a great team, in what turned out to be a very fast (and happily uncomplicated) birth ಅಂದಿದ್ದಾರೆ.
ಖಾಕಿಗಳು ಹೀಗ್ಯಾಕೆ…? ನೀರು ಕೇಳಿದ್ರೆ ಮೂತ್ರ ಕೊಟ್ಟ ಪೊಲೀಸ್ ಸಬ್ ಇನ್ಸ್ಪೆಕ್ಟರ್…?
ಬೆಂಗಳೂರು : ಶಾಂತಿ ಸುವ್ಯವಸ್ಥೆ, ಸಮಾಜದ ಹಿತ ಕಾಪಾಡಬೇಕಾದ ಪೊಲೀಸರು ಇತ್ತೀಚಿನ ದಿನಗಳಲ್ಲಿ ರಾಕ್ಷಸ ಪ್ರವೃತಿ ಮೆರೆಯಲಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಗೃಹ ಸಚಿವರು ಆಡಿದ ಮಾತು ಕೂಡಾ ವೈರಲ್ ಆಗಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ನೆರೆ ಹೊರೆಯವರ ಜೊತೆ ಜಗಳ ಮಾಡಿದ ಅನ್ನುವ ಆರೋಪದ ಹಿನ್ನಲೆಯಲ್ಲಿ ಪಾದರಾಯನಪುರದ ತೌಸೀಫ್ ಪಾಷ (23) ಎಂಬಾತನನ್ನು ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ FIR ದಾಖಲಿಸದ ಹರೀಶ್ ತೌಸೀಫ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ, ಲಾಠಿಯಿಂದ ಬಡಿದಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೆ ಕುಡಿಯುವ ನೀರು ಕೇಳಿದ್ರೆ ಬಾಟಲ್ ಗೆ ಮೂತ್ರ ತುಂಬಿಸಿ ಕುಡಿಯಲು ಕೊಟ್ಟಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಇದಾದ ಎರಡು ದಿನಗಳ ಬಳಿಕ ತೌಸೀಫ್ ನನ್ನು ಹರೀಶ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಪುತ್ರನ ಸ್ಥಿತಿ ಕಂಡ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ದೌರ್ಜನ್ಯದ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾನವ ಹಕ್ಕು ಸಂಘಟನೆಯೊಂದು ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ಸಲ್ಲಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ಡಾ. ಸಂಜೀವ್ ಪಾಟೀಲ್ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಎಸಿಪಿ ಕೋದಂಡರಾಮಯ್ಯ ಅವರಿಗೆ ಆದೇಶಿಸಿದ್ದಾರೆ.
ಈ ನಡುವೆ ಆರೋಪವನ್ನು ಬ್ಯಾಟರಾಯನಪುರ ಪೊಲೀಸರು ನಿರಾಕರಿಸಿದ್ದಾರೆ ಎಂದು The Hindu ಪತ್ರಿಕೆ ವರದಿ ಮಾಡಿದೆ. ಪಾಷ ಹಾಗೂ ಆತನ ಗೆಳೆಯರು ನಡುರಸ್ತೆಯಲ್ಲಿ ಗಲಾಟೆ ನಡೆಸಿದ್ದರು. ಈ ವೇಳೆ ಆತನಿಗೆ ಗಾಯಗಳಾಗಿತ್ತು. ಆದರೆ ಈಗ ಪೊಲೀಸ್ ಕಸ್ಟಡಿಯಲ್ಲಿ ಗಾಯಗಳಾಗಿದೆ ಎಂದು ದೂರಲಾಗುತ್ತಿದೆ. ನಾವು ಆತನನ್ನು ಕಸ್ಟಡಿಗೆ ಪಡೆದೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವರ್ತೂರು ಠಾಣೆಯ ಪೊಲೀಸರು ಹೀಗೆ ಅಟ್ಟಹಾಸಗೈದು ಅಮಾನತು ಗೊಂಡಿದ್ದರು. ಇನ್ನು 2016ರಲ್ಲಿ ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ಕುಮಾರ್ ಎಂಬ ಇನ್ಸ್ ಪೆಕ್ಟರ್ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಂಡಿದ್ದರು.
Discussion about this post