ಕೇರಳ : ಸಾಧಿಸುವ ಛಲವೊಂದು ಇದ್ದರೆ ಸಾಕು, ಇಟ್ಟ ಗುರಿಯನ್ನು ತಲುಪುವುದು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ನಮ್ಮ ನಿಮ್ಮ ನಿಮ್ಮ ಸಾವಿರ ನಿದರ್ಶನಗಳಿವೆ. ಇದಕ್ಕೆ ಹೊಸದೊಂದು ಸೇರ್ಪಡೆ ಕೇರಳದ ವೃದ್ಧೆಯ ಸಾಧನೆ. ಅಷ್ಟು ಮಾತ್ರವಲ್ಲ ಸಾಧಿಸಿ ತೋರುವುದಕ್ಕೆ ವಯಸ್ಸು ಅಡ್ಡಿಯಲ್ಲ ಅನ್ನುವುದನ್ನು ತೋರಿಸಿದ ಹಿರಿಮೆಯೂ ಇವರದ್ದು.
ಕೇರಳ ಕೊಟ್ಟಾಯಂ ಅಯರ್ಕುನ್ನಂ ಪಂಚಾಯತ್ ನಲ್ಲಿ ಇತ್ತೀಚೆಗೆ ಸಾಕ್ಷರತಾ ಪರೀಕ್ಷೆಯೊಂದನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ 104 ವರ್ಷದ ಕುಟ್ಟಿಯಮ್ಮ ಕೂಡಾ ಹಾಜರಾಗಿದ್ದರು. ಈ ವೇಳೆ ಈ ಮುದುಕಿ ಅದೇನು ಸಾಧಿಸುತ್ತಾರೆ ಎಂದು ಆಡಿದವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಆದರೆ ಇವರೆಲ್ಲ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತ ಸಾಧನೆಯನ್ನು ಕುಟ್ಟಿಯಮ್ಮ ಮಾಡಿದ್ದಾರೆ.
ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ ಕುಟ್ಟಿಯಮ್ಮ 100 ರಲ್ಲಿ 89 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಈ ಬಗ್ಗೆ ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್ಕುಟ್ಟಿ ಟ್ವೀಟ್ ಮಾಡಿದ್ದು ಕುಟ್ಟಿಯಮ್ಮ ಸಾಧನೆಯನ್ನು ಕೊಂಡಾಡಿದ್ದಾರೆ.
ಕುಟ್ಟಿಯಮ್ಮ ಈ ಹಿಂದೆ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಸಾಕ್ಷರತಾ ಆಂದೋಲನ ಪ್ರೇರಣೆ ಪಡೆದ ಇವರು ಇದೇ ಕಾರ್ಯಕ್ರಮದ ಮೂಲಕ ಓದು ಬರಹ ಕಲಿತರು. ಈ ಮೂಲಕ ವಯಸ್ಕರ ಶಿಕ್ಷಣದ ನಾಲ್ಕನೇ ತರಗತಿಗೂ ಸೇರಿದರು. ಅಂದ ಹಾಗೇ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸದು. ಹೀಗಾಗಿ ಶಿಕ್ಷಕರು ಜೋರಾದ ದನಿಯಲ್ಲಿ ಮಾತನಾಡಿ ಕುಟ್ಟಿಯಮ್ಮ ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ.
104-year-old Kuttiyamma from Kottayam has scored 89/100 in the Kerala State Literacy Mission’s test. Age is no barrier to enter the world of knowledge. With utmost respect and love, I wish Kuttiyamma and all other new learners the best. #Literacy pic.twitter.com/pB5Fj9LYd9
— V. Sivankutty (@VSivankuttyCPIM) November 12, 2021
Discussion about this post