ಹೈದ್ರಬಾದ್ : ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ( Actor Anushka Shetty ) 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾನುವಾರ 40ನೇ ವರ್ಷಕ್ಕೆ ಕಾಲಿಟ್ಟಿರುವ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೂಡಾ ಕೊಟ್ಟಿದ್ದಾರೆ.
ತನ್ನ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಿರುವ ಅವರು ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ರಂಜಿಸಲು ಬರುತ್ತಿರುವುದಾಗಿ ಹೇಳಿದ್ದಾರೆ.
UV Creation ಈ ಸಿನಿಮಾವನ್ನು ನಿರ್ಮಿಸಲಿದ್ದು, ( Mahesh Babu P ) ಮಹೇಶ್ ಬಾಬು ಪಿಯವರೇ ನಿರ್ದೇಶನ ಹೊಣೆ ಹೊತ್ತುಕೊಂಡಿದ್ದಾರೆ.
ಈ ಹಿಂದೆ UV Creation ಅನುಷ್ಕಾ ಅವರೊಂದಿಗೆ 2013ರಲ್ಲಿ ಮಿರ್ಚಿ ಮತ್ತು 2018ರಲ್ಲಿ ಭಾಗಮತಿ ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಆ ಎರಡೂ ಸಿನಿಮಾಗಳು ಸದ್ದು ಮಾಡಿತ್ತು. ಹೀಗಾಗಿ ಮೂರನೇ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿದೆ.
Discussion about this post