ಕೆಲವರಿಗೆ ದಿನಕ್ಕೆ ನಾಲ್ಕೈದು ಬಿಸ್ಕೆಟ್ ತಿಂದಿಲ್ಲ ಅಂದ್ರೆ ತಿಂದ ಊಟ ಕರಗೋದಿಲ್ಲ. ಇನ್ನು ಕೆಲವರಿಗೆ ಟೀ ಕಾಫಿ ಸಂದರ್ಭದಲ್ಲಿ ಬಿಸ್ಕೆಟ್ ಕಡ್ಡಾಯವಾಗಿ ಇರಲೇಬೇಕು. ಮತ್ತೆ ಹಲವು ಪೋಷಕರು ಮಕ್ಕಳ ಶಕ್ತಿ ವೃದ್ಧಿಸಲಿ ಎಂದು ಬಗೆ ಬಗೆಯ ಬಿಸ್ಕೆಟ್ ನೀಡುತ್ತಾರೆ.
ಆದರೆ ಇದೀಗ ಹೀಗೆ ಅತೀಯಾದ ಬಿಸ್ಕೆಟ್ ತಿನ್ನುವುದು ಕ್ಯಾನ್ಸರ್ ಗೆ ಆಹ್ವಾನ ನೀಡಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ನಿತ್ಯ ಬಳಸುವ 60ಕ್ಕೂ ಪ್ರಸಿದ್ಧ ಬಿಸ್ಕತ್ ಬ್ರ್ಯಾಂಡ್ಗಳ ಬಿಸ್ಕತ್ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳನ್ನು ಪತ್ತೆ ಹಚ್ಚಲಾಗಿದ್ದು, ಇದರಲ್ಲಿ ಅತಿ ಹೆಚ್ಚು ಮಾರಾಟವಾಗುವ ಓರಿಯೋ, ಮಾರಿ ಮತ್ತು ಪ್ರೆಟ್ಜ್ ವೇಫರ್ ಕೂಡಾ ಸೇರಿದೆ.
ಬಿಸ್ಕೆಟ್ ಗಳ ಅಸಲಿ ರಹಸ್ಯ ಪತ್ತೆ ಹಚ್ಚುವ ನಿಟ್ಟಿನಲ್ಲಿ ಹಾಂಕಾಂಗ್ ಸಂಶೋಧಕರು 60 ವಿವಿಧ ಕಂಪನಿಯ ಬಿಸ್ಕತ್ತುಗಳನ್ನು ಲ್ಯಾಬ್ ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಪ್ಯಾಕೆಟ್ ಮಾಡಿದ ಬಿಸ್ಕೆಟ್ ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಗ್ಲೈಸಿಡಾಲ್ ಮತ್ತು ಅಕ್ರಿಲಾಮೈಡ್ ಎಂಬ ರಾಸಾಯನಿಕಗಳು ಪತ್ತೆಯಾಗಿದೆ.
ಎರಡು ರಾಸಾಯನಿಕಗಳನ್ನು ಬಿಸ್ಕೆಟ್ ಗಳಲ್ಲಿ ಬಳಸಲು ಅನುಮತಿ ಇದೆ ಆದರೆ ಮಿತಿ ಮೀರಿ ಬಳಸಲು ಅನುಮತಿ ಇಲ್ಲ. ಆದರೆ ನಾಲ್ಕು ಬಿಸ್ಕೆಟ್ ಕಂಪನಿಗಳು ಅತಿಯಾಗಿ ಈ ರಾಸಾಯನಿಕ ಬಳಸಿದೆ. ಇದರಲ್ಲಿ ಮುಜಿ ಬ್ರಾಂಡ್ನ ಸ್ಯಾಂಡ್ವಿಚ್ ಕ್ರ್ಯಾಕರ್, ಓರಿಯೋ, ಮಾರಿ ಮತ್ತು ಪ್ರೆಟ್ಜ್ ವೇಫರ್ ಬಿಸ್ಕತ್ಗಳು ಕೂಡ ಸೇರಿವೆ.
ಇನ್ನು 60 ಬಿಸ್ಕತ್ಗಳ ಪೈಕಿ 56 ಬಿಸ್ಕತ್ಗಳಲ್ಲಿ ಕಿಡ್ನಿ ಮತ್ತು ಪುರುಷರ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುವ ರಾಸಾಯನಿಕಗಳು ಪತ್ತೆಯಾಗಿದೆ. 33 ಬಿಸ್ಕತ್ತುಗಳಲ್ಲಿ ಅಧಿಕ ಫ್ಯಾಟ್, 27 ಬಿಸ್ಕತ್ಗಳಲ್ಲಿ ಅಧಿಕ ಸಕ್ಕರೆ ಅಂಶಗಳಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
13 ಬಿಸ್ಕತ್ಗಳಲ್ಲಿ ಅಧಿಕ ಸೋಡಿಯಂ ಅಂಶಗಳು ಪತ್ತೆಯಾಗಿವೆ. ಈ ಬಿಸ್ಕತ್ತುಗಳನ್ನು ಹೆಚ್ಚು ಸೇವಿಸಿದರೆ ಹೃದಯಾಘಾತವಾಗುವ ಅಪಾಯವಿದೆ. ಇನ್ನು ಕೆಲ ಬಿಸ್ಕೆಟ್ ಗಳು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಹಾಗೂ ಗಡ್ಡೆಗಳನ್ನು ತರುವ ಅಪಾಯವಿದೆ ಎಂದು ತಜ್ಞರು ಹೇಳಿದ್ದಾರೆ.
ಅಲ್ಲಿಗೆ ಟಿವಿಗಳಲ್ಲಿ ಬಣ್ಣ ಬಣ್ಣದ ಜಾಹೀರಾತು ತೋರಿಸುವ ಕಂಪನಿಗಳು ಮನುಷ್ಯರ ಜೀವದ ಮೇಲೆ ಚೆಲ್ಲಾಟ ನಡೆಸುತ್ತಿದೆ ಅನ್ನುವುದು ಸ್ಪಷ್ಟ.
Authorities in Hong Kong have found eating biscuits can cause cancer after the city’s consumer watchdog studied 60 different biscuits.
Discussion about this post