ಬೆಂಗಳೂರು : ರೈಲು ನಿಲ್ದಾಣ, ಬಸ್ ನಿಲ್ದಾಣ, ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ರಂಗೋಲಿ ಬಿಡಿಸುವ ಕುಖ್ಯಾತಿ ಹೊಂದಿರುವ ಪಾನ್ ಪ್ರಿಯರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಪಾನ್ ಉಗುಳಿದರೆ ಉಳಿದವರಿಗೆ ತೊಂದರೆಯಾಗುತ್ತದೆ ಅನ್ನುವ ಪರಿಜ್ಞಾನವಿಲ್ಲದ ಇವರು ಮಾನಸಿಕ ರೋಗಿಗಳೇ ಸರಿ.
ಈ ನಡುವೆ ಪಾನ್ ಉಗುಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮನಗಂಡಿರುವ ರೈಲ್ವೆ ಇಲಾಖೆ ಹೊಸ ಆವಿಷ್ಕಾರ ಮಾಡಿದೆ. ಪುಣೆಯ ಈಜಿ ಸ್ಪಿಟ್ ( EzySpit ) ಎಂಬ ಸ್ಟಾರ್ಟಪ್ ಕಂಪನಿಯೊಂದು ಸಂಶೋಧಿಸಿರುವ ಉಗಿಯೋ ಪೌಚ್ ಹಾಗೂ ಸ್ಪಿಟ್ ಬಿನ್ ಅನ್ನು ರೈಲು ನಿಲ್ದಾಣಗಳಲ್ಲಿ ಪರಿಚಯಿಸಿದೆ.
ಉತ್ತರ, ಪಶ್ಚಿಮ ಮತ್ತು ಮಧ್ಯ ರೈಲ್ವೆಯ 42 ನಿಲ್ದಾಣಗಳಲ್ಲಿ ಪ್ಯಾಕೇಟ್ ಪೌಚ್, ಮೊಬೈಲ್ ಕಂಟೇನರ್ ಮತ್ತು ಉಗುಳುವ ಬಿನ್ ಗಳನ್ನು ಅಳವಡಿಸಲಾಗಿದೆ. ಪ್ಯಾಕೆಟ್ ಪೌಚ್ ಗಳನ್ನು 15 ರಿಂದ 20 ಸಲ ಉಗುಳಬಹುದಾಗಿದ್ದು, ಉಗುಳುವವರು ಪ್ರಯಾಣಿಸುವ ವೇಳೆ ತಮ್ಮ ಜೊತೆಗ ಒಯ್ದು ಬಳಸಿ ಎಸೆದರೆ ಅದರಲ್ಲಿರುವ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ.
ಅಂದ ಹಾಗೇ ರೈಲ್ವೆ ಇಲಾಖೆ ಪ್ರತೀ ವರ್ಷ 1200 ಕೋಟಿ ರೂಪಾಯಿ ಹಣವನ್ನು ಉಗುಳು ಕಲೆ ಸ್ವಚ್ಛಕ್ಕೆ ಖರ್ಚು ಮಾಡುತ್ತದೆಯಂತೆ.
To mark the birth anniversary of our Father of the Nation Mahatma Gandhi, a unique product EzySpit has been unveiled in the national capital which aims to take forward the campaign of Swachh Bharat.
Discussion about this post